Breaking News

ನಿಂಪು ರಾಜೇಶ್ ಗೆ ಶ್ರೀಮತಿ ಗೌರಮ್ಮ ಬಿ.ರಾಚಯ್ಯ ದತ್ತಿ ಪ್ರಶಸ್ತಿ

Smt Gouramma B. Rachaiah Endowment Award to Nimpu Rajesh

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ನಿಂಪು ರಾಜೇಶ್ ಅವರು ಶ್ರೀಮತಿ ಗೌರಮ್ಮ ಬಿ.ರಾಚಯ್ಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

ಭಾನುವಾರ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿ ಕೊಂಡಿರುವ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ನಿಂಪು ರಾಜೇಶ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ತಮ್ಮ ತಂದೆ ತಾಯಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಹಿರಿಯ ಮತ್ತು ಪ್ರತಿಭಾನ್ವಿತ ಪತ್ರಕರ್ತರನ್ನು ಗುರುತಿಸಿ ಕೊಡಮಾಡಲಾಗುವ ದತ್ತಿ ಪ್ರಶಸ್ತಿ ಯಾಗಿದೆ.

ನಿಂಪು ರಾಜೇಶ್ ಅವರು ಕಳೆದ 32 ವರ್ಷಗಳಿಂದ ಕೊಳ್ಳೇಗಾಲ ಪತ್ರಿಕೋದ್ಯಮ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ನಿಂಪು ರಾಜೇಶ್ ಅವರು ತಮ್ಮದೇ ಸಂಪಾದಕತ್ವ ಮತ್ತು ಮಾಲೀಕತ್ವದಲ್ಲಿ ನಿಂಪು ವಾರ್ತೆ ದಿನಪತ್ರಿಕೆ ನಡೆಸುತ್ತಿದ್ದಾರೆ.

ನಿಂಪು ರಾಜೇಶ್ ಅವರಿಗೆ ಈ ಹಿಂದೆ ಸುವರ್ಣ ಕರ್ನಾಟಕ ವರ್ಷಾಚರಣೆಯ ಸಂಧರ್ಭದಲ್ಲಿ ಕೊಳ್ಳೇಗಾಲ ತಾಲ್ಲೂಕು ಆಡಳಿತ ವತಿಯಿಂದ ಸನ್ಮಾನಕ್ಕೆ ಭಾಜನರಾಗಿದ್ದು, 2022 ರಲ್ಲಿ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರತಿ ವರ್ಷ ನೀಡುವ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಸಹ ಪಡೆದಿದ್ದಾರೆ.

ಇವರ ಹತ್ತು ಹಲವು ವರದಿಗಳು ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳಲ್ಲಿ ಹೆಚ್ಚು ಹೆಚ್ಚು ಗಮನ ಸೆಳೆದಿದೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *