ಅನಧಿಕೃತ ಅಕ್ರಮ ಮದ್ಯ ಮಾರಾಟ ಕಡಿವಾಣ ಹಾಕುವಲ್ಲಿ ವಿಫಲ : ಶರಣಬಸಪ್ಪ ದಾನಕೈ (ಅಖೀಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ )
Failure to curb unauthorized sale of illegal liquor: Sharanabasappa Danakai
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಶಾಲೆಯ ಮುಂಭಾದಲ್ಲಿ ಹಾಗು ಪಾನ ಬೀಡಾ ಅಂಗಡಿ, ಕಿರಾಣಿ ಅಂಗಡಿ,ಗುಡಿಸಲು ಹಾಗು ಮನೆ ಮನೆಯಲ್ಲಿ ಮದ್ಯ ಮಾರಾಟವಾಗುದನ್ನು ತಡೆಗಟ್ಟುವಲ್ಲಿ ಮಹಿಳೆಯರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ, ಪೋಲಿಸ ಇಲಾಖೆಯವರೊಂದಿಗೆ ನೂರಾರು ಮಹಿಳೆಯರು ಸೇರಿ ಅಕ್ರಮ ಮದ್ಯ ಮಾರಾಟ ಮಾಡುವ ೨೬ ವಿವಿಧ ಅಂಗಡಿಗಳನ್ನು ತೋರಿಸಿದ್ದಾರೆ ,ಪೋಲಿಸ ಇಲಾಖೆಯವರು ಪರೀಶಿಲನೆ ವೇಳೆಯಲ್ಲಿ ಮಾರಾಟಗಾರರು ಚಾಣಕ್ಷ ಬುದ್ದಿ ಉಪಯೋಗಿಸಿ ಇವರಿಗೆ ಸಿಗಲಾರದಂತೆ ಬೆರೆ ಕಡೆ ಮಾಯ ಮಾಡಿದ್ದಾರೆ, ಆದರೆ ಒಬ್ಬರು ಮನೆಯಲ್ಲಿ ಮಾತ್ರ ಮದ್ಯ ತುಂಬಿರುವ ಬಕೆಟ ಸಿಕ್ಕಿರುತ್ತದೆ ಆಗ ಯಲಬುರ್ಗಾ ಪಿ.ಎಸ್.ಐ,ಎಎಸ್.ಐ. ಪೋಲಿಸ ಅಧಿಕಾರಿಗಳು ಡಿ. ೫ ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ,ಈ ಬಗ್ಗೆ ಅಬಕಾರಿ ಇಲಾಖೆಯವರು ಮೌನವಾಗಿದ್ದಾರೆ ಎಕೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ,ಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಅಖೀಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಖಂಡಿಸಿದ್ದಾರೆ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿಯ ಚಿಕ್ಕ ಗ್ರಾಮದಲ್ಲಿ ಮಹಿಳೆಯರು ತಮ್ಮ ಕುಟುಂದಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಾರದೆ ತೊಂದರೆ ಅನುಭವಿಸುವ ನರಕಯಾತನೆ ಅನುಭವಿಸುತ್ತಿದ್ದಾರೆ,ಕುಡಿತಕ್ಕೆ ದಾಸರಾಗಿ ಮಗ,ಗಂಡ ಸತ್ತ ಈ ಪರಿಸ್ಥಿತಿಯಿಂದ ವಿಧವೆಯಾಗಿ ಬದುಕು ಸಾಗಿಸುತ್ತಿದ್ದಾರೆ ,ಇಂತಹ ಪರಿಸ್ಥಿತಿಯನ್ನು ಹೊಗಲಾಡಿಸುವಲ್ಲಿ ,ಅನಧಿಕೃತ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಶಾಸಕರು,ಸಂಸದರು,ಸೂಕ್ತ ಕ್ರಮ ತಗೆದುಕೊಂಡು ಸುಂದರ ಸಮಾಜ, ಪರಿಸರವನ್ನು ಕಾಪಾಡುವಲ್ಲಿ ಮುಂದಾಗಬೇಕು ಎಂದು ಅಖೀಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಇವರು ಒತ್ತಾಯಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಮದ್ಯ ಪಾನ ಪ್ರೀಯರಿಗೆ ಮದ್ಯವರ್ಜನ ಶಿಬಿರ ಎರ್ಪಡಿಸಿ ಅವರಿಗೆ ತರಬೇತಿ ನೀಡಿ ಪುನರ್ಜನ್ಮ ನೀಡುವ ಕಾರ್ಯ ಮಾಡುತ್ತಾ ಬರುತ್ತಿದೆ ಇದರ ಸದುಪಯೋಗವನ್ನು ಪಡೆದು ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳುವದಕ್ಕೆ ಮಾಹಿತಿ,ಮಾರ್ಗದರ್ಶನ, ಮದ್ಯವರ್ಜನತರಬೇತಿ, ಪಡೆಯಲು ಮೊ.ನಂ. 9972325690 ಗೆ ಸಂಪರ್ಕಿಸಲು ವಿನಂತಿ.
Kalyanasiri Kannada News Live 24×7 | News Karnataka