Appeal to the civic commissioner against the construction of another toilet next to the toilet

ಗಂಗಾವತಿ: ನಗರದ ಪೊಲೀಸ್ ಠಾಣೆಯ ಮುಂಬಾಗದಲ್ಲಿ ಶೌಚಾಲಯ ಇದ್ದು,ಮತ್ತೆ ಅದರ ಪಕ್ಕದಲ್ಲಿ ಬೇರೆಯೊಂದು ಶೌಚಾಲಯ ನಿರ್ಮಾಣ ಮಾಡುತ್ತಿದ್ದು, ಇದನ್ನು ಕೂಡಲೇ ತಡೆಹಿಡಿಯಲು ಮನವಿ.
ನಗರದ ಪೊಲೀಸ್ ಠಾಣೆ ಮುಂಬಾಗದಲ್ಲಿ ಈಗಾಗಲೇ ಶೌಚಾಲಯ ಇದ್ದು ಮತ್ತೆ ಇನ್ನೊಂದು ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಯೇ ಇನ್ನೊಂದು ಶೌಚಾಲಯ ಅವಶ್ಯಕತೆ ಇರುವದಿಲ್ಲ. ಆದರೆ ಇನ್ನೊಂದು ಶೌಚಾಲಯ ನಿರ್ಮಾಣ ಕಾರ್ಯ ನಡೆಸುತ್ತಿರುವುದು ಸಮಂಜಸವಲ್ಲ.
ನಗರದ ಹೃದಯ ಭಾಗಗಳಾದ ಗಾಂಧಿಸರ್ಕಲ್, ಜುಲೈ ನಗರ ಮತ್ತಿತರ ಸ್ಥಳಗಳು ಜನಸಂದಣಿ ಯಿಂದ ಕೂಡಿದ್ದು ಮಹಿಳೆಯರು ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಸೇರಿದಂತೆ ಎಲ್ಲಾ ನಾಗರಿಕರಿಗೂ ಶೌಚಾಲಯ, ಮೂತ್ರಾಲಯಗಳಿಲ್ಲದೆ ತೊಂದರೆಯಾಗುತ್ತಿದೆ ಅಲ್ಲಿ ನಿರ್ಮಾಣ ಮಾಡಬೇಕು.
ನಗರದಲ್ಲಿ ಇವುಗಳಿಗೆ ಜಾಗ ತೋರಿಸಲು ನಮ್ಮ ಸಂಘವು ಸಹಕಾರ ನೀಡುತ್ತದೆ.
ಮತ್ತು ಈಗ ಹೊಸದಾಗಿ ನಿರ್ಮಿಸುವ ಶೌಚಾಲಯ ಬಸ್ ನಿಲ್ದಾಣ ದ ಸಮೀಪದಲ್ಲಿರುತ್ತದೆ ಇಲ್ಲಿ ಮೂರು ಶೌಚಾಲಯ ಗಳಿವೆ. ನ್ಯಾಯಾಲ, ಪೊಲೀಸ್ ಠಾಣೆಗೆ, ಆಸ್ಪತ್ರೆ ಗೆ ಬರುವ ಸಾರ್ವಜನಿಕ ರಿಗೆ ವಾಹಗಳ ಪಾರ್ಕಿಂಗ್ ಮಾಡಲು ಅನುಕೂಲ ವಿದೆ. ಆದ್ದರಿಂದ ಕೂಡಲೇ ಸ್ಥಗಿತಗೊಳಿಸಬೇಕು.
ಒಂದು ವೇಳೆ ಈ ನಿರ್ಮಾಣ ಕಾರ್ಯ ನಡೆದರೆ ನಮ್ಮ ಸಂಘಟನೆಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.