Journalists should work for the good of society: Ramesh Koti*Karnataka Media Journalists Association District Committee Meeting

*ತಾಲೂಕು ಅಧ್ಯಕ್ಷರಾಗಿ ರಾಮಕೃಷ್ಣ ಸಿ.ಡಿ ಆಯ್ಕೆ
*ಶೀಘ್ರ ಪತ್ರಿಕಾಗೋಷ್ಠಿ ನಡೆಸುವ ಸ್ಥಳ ನಿಗದಿ
ಕಲ್ಯಾಣ ಸಿರಿ ಸುದ್ದಿ
ಗಂಗಾವತಿ: ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಪತ್ರಕರ್ತರು ಕಾರ್ಯ ಮಾಡಬೇಕೆಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಮೇಶ ಕೋಟಿ ಹೇಳಿದರು.
ಅವರು ನಗರದ ಶ್ರೀ ಸಾಯಿ ಹೋಟಲ್ ಸಭಾಂಗಣದಲ್ಲಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯವ್ಯಾಪಿಯಾಗಿ ಸಂಘಟಿಸಿ ಪತ್ರಕರ್ತರ ಹಿತ ಕಾಪಾಡುವ ಕಾರ್ಯ ಮಾಡಲಾಗುತ್ತದೆ. ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳು ಸುದ್ದಿ, ಜಾಹೀರಾತುಗಳನ್ನು ಪತ್ರಕರ್ತರಿಗೆ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಗಂಗಾವತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪತ್ರಿಕಾಗೋಷ್ಠಿ ನಡೆಸಲು ಸೂಕ್ತ ಸ್ಥಳ ನಿಗದಿ ಮಾಡಲಾಗುತ್ತದೆ. ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಹೆಚ್. ಮಲ್ಲಿಕಾರ್ಜುನ ಮಾತನಾಡಿ, ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳು ಸಂಘದ ಬೈಲಾಗಳಲ್ಲಿನ ನಿಯಮಗಳಿಗೆ ಬದ್ಧರಾಗಿ, ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಂತೆ ಸಂಘವನ್ನು ಬಲಪಡಿಸಿ, ಸಂಘದ ಎಲ್ಲಾ ಸದಸ್ಯರ ವಿಶ್ವಾಸವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗಂಗಾವತಿ ತಾಲೂಕು ಘಟಕ ಪದಾಧಿಕಾರಿಗಳ ನೇಮಕಾತಿ ಮಾಡಲಾಯಿತು. ಗಂಗಾವತಿ ತಾಲೂಕ ಘಟಕದ ನೂತನ ಅಧ್ಯಕ್ಷರನ್ನಾಗಿ ಕನಸು ಟಿವಿಯ ರಾಮಕೃಷ್ಣ ಸಿ.ಡಿ., ಪ್ರಧಾನ ಕಾರ್ಯದರ್ಶಿಯಾಗಿ ಕಲ್ಯಾಣ ಸಂಜೆ ದಿನಪತ್ರಿಕೆಯ ಚನ್ನಬಸವ ಮಾನ್ವಿ ಹಾಗೂ ಖಜಾಂಚಿಯಾಗಿ ಆಂಧ್ರಜ್ಯೋತಿ ದಿನ ಪತ್ರಿಕೆಯ ದೇವದಾನಂ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಸಾಕ್ಷಿ ರವಿ, ಮಂಜುನಾಥ ಎಂ., ಡಿ.ಎಂ. ಸುರೇಶ, ದೇವದಾನಂ, ಹೆಚ್. ಭೋಗೇಶ, ಸೋಮಪ್ಪ, ಎಂ.ಡಿ ಗೌಸ್, ಶರಣಯ್ಯ ಹಿರೇಮಠ, ನಿಂಗಪ್ಪ ನಾಯಕ, ಜೆ. ಶ್ರೀನಿವಾಸ, ಎನ್. ಮಲ್ಲಿಕಾರ್ಜುನ, ಎಸ್. ಮಾರ್ಕಂಡೇಯ, ಮಂಜುನಾಥ ಆರತಿ, ನಾಗರಾಜ ಅಂಗಡಿ ಹಾಗೂ ಮಂಜುನಾಥ ವಣಗೇರಿ ಇದ್ದರು.