Winners of Youth Congress congratulate H. S. Majunath who was elected as the President of Karnataka Youth Congress.

ಗಂಗಾವತಿ: ಇತ್ತೀಚೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಜೋಗದ ರವಿ ನಾಯಕ, ನಗರ ಯುವ ಘಟಕದ ಅಧ್ಯಕ್ಷರಾಗಿ ಬಾಬರ್ ಮತ್ತು ಗ್ರಾಮೀಣ ಯುವ ಘಟಕದ ಅಧ್ಯಕ್ಷರಾಗಿ ಸಿದ್ದು ಹೊಸಮಠ ಇವರು ಆಯ್ಕೆಯಾಗಿದ್ದು, ಇವರೆಲ್ಲರೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬೆಂಬಲಿಗರಾಗಿದ್ದಾರೆ.
ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಎಸ್. ಮಂಜುನಾಥಗೌಡರವರನ್ನು ಗಂಗಾವತಿ ಕ್ಷೇತ್ರದ ನೂತನ ವಿಜೇತರು ಬೆಂಗಳೂರಿಗೆ ತೆರಳಿ ಶನಿವಾರ ಭೇಟಿಯಾಗಿ ಶುಭ ಹಾರೈಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷರಾದ ಜುಬೇರ್, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ರಹಮತ್ ಸಂಪAಗಿ, ಯುವ ಕಾಂಗ್ರೆಸ್ ಮುಖಂಡರಾದ ಶಫತ್, ಹನೀಫ್ ಉಪಸ್ಥಿತರಿದ್ದರು.