Hirebenkal heritage walk by District Collector Nalin Atul, GPM CEO Rahul Ratam Pandey,,,
( ಬೃಹತ್ ಶಿಲಾಯುಗದ ನೆಲೆಯಲ್ಲಿ ಹೆರೀಟೆಜ್ ವಾಕ್, ವಿಶ್ವ ಪರಂಪರೆ ಸಮಿತಿಯ 46 ನೇ ಅಧಿವೇಶನ ಹಿನ್ನೆಲೆ ಪ್ರವಾಸೋಧ್ಯಮ ಜಾಗೃತಿ ಕಾರ್ಯಕ್ರಮ )
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ವಿಶ್ವ ಪರಂಪರೆ ಸಮಿತಿಯ 46ನೇ ಅಧಿವೇಶನದ ಭಾಗವಾಗಿ ಬೃಹತ್ ಶಿಲಾಯುಗದ ನೆಲೆಯಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇ ಬೆಣಕಲ್ ಮೆಗಾಲಿಥಿಕ್ ಸೈಟ್ ನಲ್ಲಿ ಪಾರಂಪರಿಕ ನಡಿಗೆ (ಹೆರಿಟೇಜ್ ವಾಕ್) ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವು ಜುಲೈ 25ರಂದು ನಡೆಯಿತು.
ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಬೆಂಗಳೂರು ಕಚೇರಿ ಹಾಗೂ ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಎಎಸ್ಐ ಹಂಪಿ ವೃತ್ತ, ಕಿಸ್ಕಿಂದ ಯುತ್, ಟ್ರೆಕ್ಕಿಂಗ್ ಕ್ಲಬ್ ಲೈವ್ ವಿತ್ ಹ್ಯೂಮ್ಯಾನಿಟಿ ಟ್ರಸ್ಟ್ ಇವರ ಸಹಯೋಗದಲ್ಲಿ ಶಿಲಾಯುಗದ ನೆಲೆಯಲ್ಲಿ ನಡೆದ ಹೆರಿಟೇಜ್ ವಾಕ್ ಮತ್ತು ಪ್ರವಾಸೋದ್ಯಮ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಚಾಲನೆ ನೀಡಿದರು.
ಬೃಹತ್ ಶಿಲಾಯುಗದ ಸ್ಮಾರಕಗಳ ವೀಕ್ಷಣೆ : ಹೆರಿಟೇಜ್ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒ ಬೆಟ್ಟದಲ್ಲಿ ಹೆಜ್ಜೆ ಹಾಕಿ ಬೃಹತ್ ಶಿಲಾಯುಗದ ನೆಲೆ ಬೆಣಕಲ್ ಸ್ಮಾರಕಗಳಾದ ಮೋರ್ಯರ್ ಬೆಟ್ಟ, ಶಿಲಾ ಸಮಾಧಿಗಳು ಬಂಡೆಗಳು ಹಾಗೂ ಸ್ಮಾರಕಗಳ ವೀಕ್ಷಣೆ ಮಾಡಿದರು. ಸಮಾಧಿಗಳ, ಸ್ಮಾರಕಗಳ ಬಳಿ ನಿಂತು ಫೋಟೋ ತೆಗೆಸಿಕೊಂಡರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್ಸಲಾನ್, ಹಂಪಿ ಪುರಾತತ್ವ ಇಲಾಖೆಯ ಉಪ ಅಧೀಕ್ಷಕರಾದ ಸಿ.ಬರಣೆಧರನ್ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಬೆಂಗಳೂರು ಕಚೇರಿಯ ಪ್ರವಾಸೋದ್ಯಮ ಮಾಹಿತಿ ಅಧಿಕಾರಿಗಳಾದ ಚಂದ್ರಾನಾಯಕ್, ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಖ್ಯಾತ ಸಂಶೋಧಕರಾದ ಡಾ. ಶರಣಬಸಪ್ಪ ಕೋಲಕಾರ, ಗಂಗಾವತಿ ಚಾರಣ ಬಳಗದ ಸದಸ್ಯರಾದ ಡಾ. ಶಿವಕುಮಾರ್ ಪಾಟೀಲ್, ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯ ನಿರ್ದೇಶಕರಾದ ಡಿ. ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಲಯ ಅರಣ್ಯ ಅಧಿಕಾರಿ ಸುಭಾಷ್ ಹಾಗೂ ಗಂಗಾವತಿ ಚಾರಣ ಬಳಗದ ಪವನ್ ಕುಮಾರ್, ಸೌಮ್ಯ ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರೊಂದಿಗೆ ಹೆಜ್ಜೆ ಹಾಕಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಹಿರೇಬೆಣಕಲ್ ಮೆಗಾಲಿಥಿಕ್ ಸೈಟ್ ಯುನೆಸ್ಕೋ, ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ, ಇದು ಮೆಗಾಲಿಥಿಕ್ ಅವಧಿಗೆ ಹಿಂದಿನ ವಿಶಾಲವಾದ ಸಮಾಧಿ ಸಂಕೀರ್ಣವಾಗಿದೆ. ಇದು 20 ಹೆಕ್ಟೆರ್ ಗಳಲ್ಲಿ ಹರಡಿದ್ದು ಕಲ್ಲಿನ ರಚನೆಗಳ ಮೂರು ವಿಭಿನ್ನ ಸಮೂಹಗಳನ್ನು ಒಳಗೊಂಡಿದೆ.
ಈ ಆಕರ್ಷಕ ಪುರಾತತ್ವದ ಶಾಸ್ತ್ರದ ಸ್ಥಳವನ್ನು ಅನ್ವೇಷಿಸಲು ಅದರ ಶ್ರೀಮಂತ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕೆಂಬುದು ಹೆರಿಟೇಜ್ ವಾಕ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ಮಾತನಾಡಿ ಭಾರತದ ವೈವಿಧ್ಯಮಯ ಪರಂಪರೆಯ ಅರಿವು ಮತ್ತು ಮೆಚ್ಚುಗೆಯನ್ನು ಉತ್ತೇಜಿಸಲು ಬದ್ಧವಾಗಿರುವ ಪ್ರವಾಸೋದ್ಯಮ ಸಚಿವಾಲಯವು ಹಿರೇ ಬೆಣಕಲನ ಮೆಗಾಲಿಥಿಕ್ ಮಹತ್ವ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಶಾಸನಕ್ಕೆ ಅದರ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಈ ಪಾರಂಪರಿಕ ನಡಿಗೆ ಕಾರ್ಯಕ್ರಮದ ಮೂಲಕ ಇಲ್ಲಿನ ವಿಶೇಷತೆ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಮೂಲ ಸೌಕರ್ಯ ಕಲ್ಪಿಸಲು ಮತ್ತು ಹಿರೇ ಬೆಣಕಲ್ ಬೆಟ್ಟಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ ಸಿಸಿಟಿವಿ ಕ್ಯಾಮೆರಾ, ರಕ್ಷಣೆಗೆ ಅಗತ್ಯ ಸಿಬ್ಬಂದಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಹಂಪಿ ಮತ್ತು ಅಂಜನಾದ್ರಿಗೆ ಬರುವ ಪ್ರವಾಸಿಗರು ಹಿರೇಬೆಣಕಲ್ ಬೆಟ್ಟಕ್ಕೆ ಬರಲಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕು ಎಂದು ಚಾರಣ ಬಳಗದ ಸದಸ್ಯರು, ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಲ್ಲಿ ಮನವಿ ಮಾಡಿದರು. ಚಾರಣ ಬಳಗದ ಸದಸ್ಯರ ಹಾಗೂ ಗ್ರಾಮಸ್ಥರ ಮನಯಂತೆ ಅಗತ್ಯಕ್ರಮ ವಹಿಸುವಾದಾಗಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.