Breaking News

ಪರಮ ಪೂಜ್ಯ ಮಹಾ ಜಗದ್ಗುರು ಮಾತೆ ಮಹಾದೇವಿ ತಾಯಿಯವರ ಜನನ ಮತ್ತು ಲಿಂಗೈಕ್ಯ ತಿಂಗಳು ಈ ಮಾರ್ಚ್. ಪ್ರಯುಕ್ತ ಈ ಲೇಖನ

This March is the birth of the Most Reverend Maha Jagadguru Mata Mahadevi and the month of Lingaikya. Use this article.

ಜಾಹೀರಾತು

ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ
ಹುಸಿಮಾತನಾಡಿ ಕೆಡದಿರಿ।ಲಿಂಗಾಯತಕೆ
ಬಸವಣ್ಣನೆ ಕರ್ತೃ ಸರ್ವಜ್ಞ।

ಹನ್ನೆರಡನೆ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಮೂರುನೂರು ವರ್ಷಗಳ ಪರ್ಯಂತ ವಚನ ಸಾಹಿತ್ಯ ಗುಪ್ತ ಗಾಮಿನಿಯಾಗಿ ಪ್ರವಹಿಸಿ “ಬಸವಪುರಾಣ” ಗಳ ಮೂಲಕ ಪ್ರಕಟಗೊಂಡರೂ ಜನಸಾಮಾನ್ಯರನ್ನು ತಲುಪುವಲ್ಲಿ ನಿಧಾನಗತಿಯಲ್ಲಿತ್ತು. ಹದಿನೈದನೆ ಶತಮಾನದಲ್ಲಿ ಯಡೆಯೂರು ತೋಂಟದ ಸಿದ್ಧಲಿಂಗ ಶರಣರ ಉದಯ ಬಸವಧರ್ಮಕ್ಕೆ ಹೊಸ ಕಳೆ ತಂದಿತು.ವಚನ ಸಾಹಿತ್ಯದ ಅರಿವು ಆಳವನ್ನು ಚೆನ್ನಾಗಿ ಅರಗಿಸಿಕೊಂಡು ಸಮಾಜ ಮುಖಿಯಾಗಿ ಹೊರಟು ನೂರೊಂದು ವಿರಕ್ತರನ್ನು ತಯಾರುಮಾಡಿ ಬಸವಧರ್ಮಕ್ಕೆ ಶಕ್ತಿ ತುಂಬಿದರು.ಅದರ ಪರಿಣಾಮವಾಗಿ ನಾಡಿನ ಉದ್ದಗಲಕ್ಕೂ ವಿರಕ್ತ ಮಠಗಳ ಸಂಖ್ಯೆ ಜಾಸ್ತಿ ಯಾದವು.ಸಿದ್ಧಲಿಂಗ ಯತಿಗಳ ನೂರೊಂದು ವಿರಕ್ತರು,ಕೆಂಪಿನ ಸಮಯ,ಮುರುಘಾ ಸಮಯ, ಕುಮಾರ ಸಮಯ ಮತ್ತು ಚಿಲ್ಲಾಳ ಸಮಯ ಎಂಬ ನಾಲ್ಕು ಗುಂಪುಗಳಾಗಿ ಸಮಾಜ ಮುಖಿಯಾಗಿ ಧರ್ಮ ಜಾಗ್ರತಿ ಮಾಡಿದರು.
ಅದೇ ಸಮಯಕ್ಕೆ ವಿಜಯನಗರ ಸಾಮ್ರಾಜ್ಯದ ಪ್ರೌಢ ದೇವರಾಯನು ಬಸವಾದಿ ಶರಣರ ಸಾಹಿತ್ಯವನ್ನು ಪೋಷಿಸಿ ಬೆಳಸಿದನು.ಅವನ ಆಸ್ಥಾನದಲ್ಲಿ ಹರಿಹರ ರಾಘವಾಂಕ ರಂತಹ ದಿಗ್ಗಜ ಸಾಹಿತಿಗಳು ಶರಣ ಸಾಹಿತ್ಯಕ್ಕೆ ಮೆರಗು ಕೊಟ್ಟರು.ಸರ್ವಜ್ಞ ಶರಣರು ಅದೇ ಸಮಯದಲ್ಲಿ ಬಸವಧರ್ಮದ ಅರಿವು ಆಚಾರವನ್ನು ಅಳವಡಿಸಿ ಕೊಂಡು ಸಮಾಜ ಜಾಗ್ರತಿಗೆ ಸಂಚರಿಸಿ ಶರಣ ಚರಿತ್ರೆಯಲ್ಲಿ ಧಾಖಲಾದರು.
ಈ ಇತಿಹಾಸವನ್ನು ಈಗ ನಿಮ್ಮ ಗಮನಕ್ಕೆ ತರುವ ನನ್ನ ಉದ್ದೇಶ ವೆಂದರೆ,ಸರ್ವಜ್ಞ ಶರಣರ ವಚನದಲ್ಲಿ ‘ಹುಸಿಮಾತನಾಡಿ ಕೆಡದಿರಿ।ಲಿಂಗಾಯತಕೆ ಬಸವಣ್ಣನೆ ಕರ್ತೃ ‘ಎಂದು ಹೇಳುವಲ್ಲಿ ಸ್ವಲ್ಪ ಗೊಂದಲವಂತೂ ಇತ್ತು.ಅದಕ್ಕೆ ಅದೇ ವಚನದಲ್ಲಿ ಅವರು ಸ್ಪಷ್ಠನೆಯನ್ನೂ ಕೊಟ್ಟಿದ್ದಾರೆ.
ಬಸವತತ್ವದ ಸೂಕ್ಷ್ಮಗಳು ಮಂಕಾಗಿ ಮಸುಕು ಮಸುಕಾಗಿ,ಮಠಗಳಲ್ಲಿ ಮತ್ತು ಜನಮಾನಸದಲ್ಲಿ ಮರೆಯಾಗಿ ವೈದಿಕ ವ್ಯವಸ್ಥೆ ಮತ್ತೆ ಲಿಂಗಾಯತ ಸಮಾಜವನ್ನು ಕಲುಷಿತ ಗೊಳಿಸಿತು. ೧೭ ಮತ್ತು ೧೮ ನೇ ಶತಮಾನದಲ್ಲಿ ಇದೆ ಸ್ಥಿತಿ ಮುಂದುವರೆದು ಕೆಲವೆ ಕೆಲವು ಮಠಗಳು ಬಸವ ಪರವಾಗಿ ಇದ್ದರೂ ಧೈರ್ಯದಿಂದ ಸ್ಪಷ್ಠವಾದ ಬಸವ ನಿಲವನ್ನು ಸಮಾಜಕ್ಕೆ ತಿಳಿಸಿ ಮುನ್ನೆಡೆಸುವಲ್ಲಿ ಸೋತು ನಿಂತಿದ್ದವು.ಜೇವರ್ಗಿಯ ಶಣ್ಮುಖ ಶಿವಯೋಗಿಗಳು,ಅಥಣಿಯ ಮುರುಘಾಮಠ,ಗದುಗಿನ ತೋಂಟದಾರ್ಯ ಮಠ,ಇಳಕಲ್ಲಿನ ಮಹಾಂತಶಿವಯೋಗಿಗಳ ಮಠ, ಧಾರವಾಡದ ಮುರುಘಾ ಮಠ ಹೀಗೆ ಕೆಲವು ಮಠಗಳು ಬಸವ ಪರ ಕಾಳಜಿಯಿಂದ ಕೆಲಸ ಮಾಡುತ್ತಿದ್ದರೂ ಲಿಂಗಾಯತ ಸಮಾಜದಲ್ಲಿ ವೈದಿಕ ವ್ಯವಸ್ಥೆ ತಾಂಡವ ವಾಡುತ್ತಿತ್ತು.ಅದೇ ಮಠಗಳಲ್ಲಿ ರುದ್ರಾಭಿಷೇಕ ಗದ್ದುಗೆ ಪೂಜೆ, ಜಾತಿ ಆಧಾರದ ಮೇಲೆ ತಮ್ಮ ಮಠಕ್ಕೆ ಪೀಠಾಧಿಕಾರಿಯನ್ನು ಗುರುತಿಸುವ ಕೆಲಸ ಯಗ್ಗಿಲ್ಲದೆ ನಡೆದಿತ್ತು.ಆ ಒಂದು ಕಾರಣದಿಂದ ಸಮಾಜ ದಿಕ್ಕೆಟ್ಟಿತ್ತು.ಸಮಾಜಕ್ಕೆ ಸ್ಪಷ್ಠ ನಿರ್ಧಾರದ ಬಸವ ತತ್ವ ತಿಳಿಸುವ ಅನಿವಾರ್ಯತೆ ತುಂಬಾ ಇತ್ತು.ಶರಣ ಚೇತನ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಶರಣರು ಉದಯಿಸಿ ಬಂದು ಜಗುಲಿಗಳ ಮೇಲೆ ಅಡಗಿ ಕುಳಿತ ಶರಣ ಸಾಹಿತ್ಯ,ವಚನ ಸಾಹಿತ್ಯ ವನ್ನು ಸಾಕಷ್ಟು ಕಷ್ಟಗಳನ್ನೆದುರಿಸಿ ಹೊರತಂದು ಮುದ್ರಿಸಿ ಕೊಟ್ಟರು.ಶರಣ ಹರ್ಡೆಕರ ಮಂಜಪ್ಪನವರು ಬಸವ ಸಾಹಿತ್ಯವನ್ನು ಪ್ರಚಾರಕ್ಕೆ ತರುವಲ್ಲಿ ಶ್ರಮವಹಿಸಿದರು.ಧಾರವಾಡ ದ ಮುರುಘಾಮಠದ ಸಹಾಯದಿಂದ ಮೊಟ್ಟ ಮೊದಲಿಗೆ ಬಸವಜಯಂತಿ ಯನ್ನು ಆಚರಣೆಗೆ ತಂದರು.ಇಷ್ಟೆಲ್ಲ ಕಾರ್ಯಗಳು ನಡದೇ ಇದ್ದರೂ ಸಮಾಜಕ್ಕೆ ಮೆತ್ತಿಕೊಂಡ ವೈದಿಕಾಚರಣೆಯ ಕೊಳೆ ಕಳೆಯಲೇ ಇಲ್ಲ.ಶರಣ ಸಾಹಿತ್ಯ ಬರೀ ಪುಸ್ತಕಕ್ಕೆ ಸಾಹಿತ್ಯ ರಚನೆಗೆ ಮೀಸಲಾಗಿತ್ತು.ಜನ ಸಾಮಾನ್ಯರ ಮನದಾಳಕ್ಕೆ ತಲುಪಲೇ ಇಲ್ಲ.ಏಕೆಂದರೆ ಲಿಂಗಾಯತವು ಒಂದು ಸ್ವತಂತ್ರ ಧರ್ಮ.ಲಿಂಗಾಯತ ಧರ್ಮಕ್ಕೆ ಅಪ್ಪ ಬಸವಣ್ಣ ನವರೆ ಧರ್ಮ ಗುರು.ಎಂದು ಗಟ್ಟಿಯಾಗಿ ಹೇಳುವಲ್ಲಿ ಸೋತು ಸೊರಗಿದ್ದರು.
ಈ ಎಲ್ಲ ಕಳೆಯ ಕೊಳೆ ತೆಗೆಯಲು ಇಪ್ಪತ್ತನೆ ಶತಮಾನದಲ್ಲಿ ಪೂಜ್ಯ ಲಿಂಗಾನಂದ ಅಪ್ಪಾಜಿಯವರು ಸ್ವ ಪ್ರೆರಣೆಯಿಂದ ಖಾವಿ ಧರಿಸಿ ಪ್ರವಚನ ವೆಂಬ ಹೊಸ ಕಲೆ ಯನ್ನು ಅಳವಡಿಸಿ ಕೊಂಡು ವಿಶ್ವಧರ್ಮ ಪ್ರವಚನಗಳನ್ನು ನಾಡಿನುದ್ದಗಲಕ್ಕೂ ಘಂಟಾಘೋಶ ವಾಗಿ ತೊಡೆತಟ್ಟಿ , ಬರುವ ದೈಹಿಕ,ಮಾನಸಿಕ ತೊಂದರೆಗಳನ್ನು ಜಟ್ಟಿ ಯಂತೆ ಎದುರಿಸಿ ಅಚಲವಾಗಿ ನಿಂತು ಬಸವ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದರು.ಇವರ ಪ್ರವಚನ ವೈಖರಿಗೆ ಮನಸೋತು ಶರಣ ಧರ್ಮದ ಪುನರುತ್ಥಾನಕ್ಕೆ ಗಟ್ಟಿಯಾದ ನೆಲೆಗಟ್ಟಿಗೆ ಸಂಕಲ್ಪ ತೊಟ್ಟು ಅಂದುಕೊಂಡ ಆ ಎಲ್ಲ ಮಹತ್ತರ ಕೆಲಸಗಳನ್ನು ತಮ್ಮ ಜೀವಿತದ ಕೊನೆಯುಸಿರು ಇರುವ ವರೆಗೂ ಸಾಧಿಸಿ ಅಚಲವಾದ ಅದ್ಭುತವಾದ ಹೊರಾಟವನ್ನು ನಡೆಸಿ ಸಮಾಜವನ್ಮು ಧರ್ಮಕ್ಕಾಗಿ ಹುರಿಗೊಳಿಸಿದ ಮಹಾನ್ ಚೇತನ ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿ ತಾಯಿಯವರು.ಈ ಇಬ್ಬರು ಪೂಜ್ಯರ ಸೇವೆ ಅಗಣಿತ, ಅಪ್ರತಿಮ, ಅದ್ಭುತ.ಧರ್ಮಕ್ಕಾಗಿ ಇವರು ತೆಗೆದುಕೊಂಡ ನಿರ್ಧಾರಗಳು ಸಮಾಜವನ್ನು ಆ ಸಮಯಕ್ಕೆ ಗೊಂದಲಕ್ಕೆ ತಳ್ಳಿದರೂ ಅವು ಶಾಶ್ವತ ಪರಿಹಾರಗಳು ಎನ್ನುವಲ್ಲಿ ಯಾವುದೆ ಸಂಶಯ ಈಗ ಉಳಿದಿಲ್ಲ.
ಆ ರೀತಿಯಲ್ಲಿ ಅವರು ಸಾಧಿಸಿ ಪುನ: ಪ್ರತಿಷ್ಠಾಪಿಸಿದ ಕೆಲವು ಅತಿ ಮುಖ್ಯವಾದವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
೧.ಲಿಂಗಾಯತವು ಒಂದು ಅಮೋಘವಾದ ಸ್ವತಂತ್ರ ಧರ್ಮ.ಇದು ೧೨ ನೇ ಶತಮಾನದಲ್ಲಿ ಅಪ್ಪ ಬಸವಣ್ಣ ನವರು ಇಸ್ಟಲಿಂಗವನ್ನು ಕಂಡುಹಿಡಿದು ಸಮಾನತೆಯ ಕುರುಹಾಗಿ ಸಮಸಮಾಜ ನಿರ್ಮಾಣದ ಕೇಂದ್ರ ಬಿಂದುವಾಗಿ ಅರಸಿ ಬಂದ ಪ್ರತಿಯೊಬ್ಬರ ಎದೆಯಮೇಲೆ ಸ್ಥಾಪಿಸುವುದರ ಮೂಲಕ ಜಗತ್ತಿಗೆ ಕೊಟ್ಟರು.

೨.ಲಿಂಗಾಯತ ಮತ್ತು ವೀರಶೈವಗಳು ಸಮಾನ ಪದಗಳಲ್ಲ.ಲಿಂಗಾಯತವು ಒಂದು ಸ್ವತಂತ್ರ ಧರ್ಮ.ಅದು ಅಪ್ಪ ಬಸವಣ್ಣ ನವರ ಅಮೂಲ್ಯ ಕೊಡುಗೆ. ವೀರಶೈವವು ಶೈವದ ಒಂದು ಶಾಖೆ.ಸಪ್ತ ಶೈವಗಳಲ್ಲಿಯ ಒಂದು ಪಂಥ.ಎರಡೂ ಪದಗಳ ಸಾಕಷ್ಟು ವ್ಯತ್ಯಾಸಗಳನ್ನು ನಾವು ಪಟ್ಟಿ ಮಾಡ ಬಹುದು.ಅದರಿಂದಲೆ ತಿಳಿಯುವುದು,ಎರಡೂ ಪದಗಳು ಒಂದೆ ಎನ್ನಲು ಸಾಧ್ಯವಿಲ್ಲ ಎಂದು.

೩.ಲಿಂಗಾಯತ ಧರ್ಮಕ್ಕೆ ಷಟ್ ಸೂತ್ರಗಳನ್ನು ಕೊಟ್ಟು ಮುಂದೆ ಯಾರೂ ಅಲುಗಾಡಿಸದಂತೆ ಭದ್ರಪಡಿಸಿದರು.
ಲಿಂಗಾಯತ ಧರ್ಮಕ್ಕೆ,
ಧರ್ಮಗುರು…. ವಿಶ್ವಗುರು ಬಸವಣ್ಣ ನವರು.
ಧರ್ಮ ಸಂಹಿತೆ…ಸಮಾನತೆ ಸಾರುವ ವಚನ ಸಾಹಿತ್ಯ.
ಧರ್ಮ ಲಾಂಛನ… ವಿಶ್ವಾತ್ಮನ ಕುರುಹಾದ ಇಸ್ಟಲಿಂಗ.
ಧರ್ಮ ಕ್ಷೇತ್ರ….. ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮ,ಶರಣ ಭೂಮಿ ಬಸವ ಕಲ್ಯಾಣ,ತ್ಯಾಗ ಭೂಮಿ ಸುಕ್ಷೇತ್ರ ಉಳುವಿ. ಧರ್ಮ ಧ್ವಜ…….. ಷಟ್ಕೋನ ಇಸ್ಟಲಿಂಗ ಸಹಿತ ಗುರು ಬ ಬಸವ ಧ್ವಜ. ಧರ್ಮದ ದ್ಯೇಯ…ಜಾತಿ ವರ್ಣ ವರ್ಗ ರಹಿತ ಧರ್ಮ ಸಹಿತ ಶರಣ ಸಮಾಜ ನಿರ್ಮಾಣ.

೪.ಶರಣರ ಪಂಚ ಅಚಾರಗಳ ಜೊತೆಗೆ ಮೊದಲನೆಯ ಆಚಾರವಾಗಿ ಬಸವಾಚಾರವನ್ನು ಕೊಟ್ಟು ಷಡಾಚಾರದ ಅರ್ಥ ಪೂರ್ಣ ಪಾಲನೆ ಕಲಿಸಿಕೊಟ್ಠರು.

6.ಮುಂದುವರೆದು ಮೊಬೈಲ ಟವರುಗಳಂತೆ
ಧರ್ಮ ಪ್ರಚಾರಕ್ಕಾಗಿ ೬ ಪೀಠಗಳನ್ನು , ಅಕ್ಕನ ಅನುಭಾವ ಪೀಠ ಬಸವಧರ್ಮ ಪೀಠ, ಶೂನ್ಯಪೀಠ,ಯೋಗ ಪೀಠ,ಜ್ಞಾನ ಪೀಠ ಮತ್ತು ತ್ಯಾಗ ಪೀಠ ಗಳನ್ನು ಸ್ಥಾಪಿಸಿ ಹೊಸ ಇತಿಹಾಸ ಬರೆದರು.

8.ಒಂದು ಧರ್ಮಕ್ಕೆ ಧರ್ಮ ಗ್ರಂಥ ತುಂಬಾ ಅವಶ್ಯ.ವಚನಸಾಹಿತ್ಯ ನಮ್ಮ ಧರ್ಮಗ್ರಂಥ ಎಂದು ಈಗ ನಾವು ಘೋಶಿಸಿದರೂ ಯಾವ ಜಾಗದಲ್ಲಿ ಯಾವ ವಚನ ಬಳಕೆಯಾಗಬೇಕೆನ್ನುವ ಸಾಮಾನ್ಯ ಜ್ಞಾನದ ಕೊರತೆ ಯಿಂದ ತಪ್ಪಾಗಿ ತಿಳಿಯುವ ಸಾಧ್ಯತೆ ನಿವಾರಿಸಲು ಧರ್ಮಗ್ರಂಥದ ಅವಶ್ಯಕತೆ ಇತ್ತು.ಆ ಮಹತ್ಪೂರ್ಣ ಕೆಲಸವನ್ನು ಪರಿಪೂರ್ಣಗೊಳಿಸಿ ತಮ್ಮ ಅಮೂಲ್ಯ ಸೇವೆಯನ್ನು ಅಂತಿಮಗೊಳಿಸಿದ ಮಹನ್ ಚೇತನ ಪರಮ ಪೂಜ್ಯ ಮಾತೆ ಮಹಾದೇವಿ ತಾಯಿಯವರು.

ಈ ಎಲ್ಲ ಕಾರಣಗಳಿಂದಲೆ ಈ ನಮ್ಮ ಬಸವಜಯಂತಿ ಆಚರಣೆ ಅರ್ಥ ಪೂರ್ಣ ವೆನಿಸಿದೆ.ವೈಚಾರಿಕ ನೆಲೆಗಟ್ಟಿನ ಮೇಲೆ ಸಂಭ್ರಮದಿಂದ ಆಚರಿಸಲ್ಪಡುತ್ತವೆ,ಎನ್ನುವಲ ಎರಡು ಮಾತಿಲ್ಲ.

ಇಂತಹ ಪೂಜ್ಯರ ನೆರಳಲ್ಲಿ ಬಸವತತ್ವದ ನಿಜದರಿವು ಪಡೆದ ನಮ್ಮ ಬಾಳೆ ಧನ್ಯ.ಬಸವಮಾರ್ಗದ ಅರಿವು ಆಳವನ್ನು ಸಹಜವಾಗಿ, ಸರಳವಾಗಿ ತಿಳಿಯುವ ಮಾರ್ಗವನ್ನು ರೂಪಿಸಿ ಲಕ್ಷ ಲಕ್ಷ ಜನರು ಮತ್ತೊಬ್ಬರಿಗೆ ತಿಳಿಸುವಂತಹ ರಾಷ್ಟ್ರೀಯಬಸವದಳದ ಪಡೆ ನಿರ್ಮಿಸಿ ಧರ್ಮ ಪ್ರಚಾರದ ಮಾಧ್ಯಮವಾಗಿ ಹೊರಹೊಮ್ಮಿಸಿದ್ದಾರೆ.ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೂ ಬಸವಧ್ವಜಗಳು,ಬಸವತತ್ವದ ಬೆಳಕು ಜಗಮಗಿಸಲಿದೆ.ಇದು ಸಥ್ಯ ಇದೇ ಸಥ್ಯ.
ಶರಣುಶರಣಾರ್ಥಿ.
ಕೊರ್ಲಹಳ್ಳಿ ವೀರಣ್ಣ ಲಿಂಗಾಯತ್.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.