CDC member support for guest lecturer sit-ins
ಕೊಪ್ಪಳ: ಸೇವಾ ಕಾಯಂಗೆ ಆಗ್ರಹಿಸಿ ವಾರದಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಬೆಂಬಲ ಸೂಚಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ. ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಂಜುನಾಥ ಗೊಂಡಬಾಳ, ಸಲೀಂ ಅಳವಂಡಿ, ಶ್ರೀನಿವಾಸ ಪಂಡಿತ್ ಹಾಗೂ ಗಂಗಾಧರ ಕಬ್ಬೇರ ಧರಣಿನಿರತ ಅತಿಥಿ ಉಪನ್ಯಾಸಕರಿಗೆ ಬೆಂಬಲ ನೀಡಿ ಕೆಲ ಕಾಲ ಧರಣಿಯಲ್ಲಿ ಪಾಲ್ಗೊಂಡರು.
ಮಂಜುನಾಥ ಗೊಂಡಬಾಳ ಮಾತನಾಡಿ, ಸರಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವವರು ನೀವೇ ಎಂಬುದು ನಮ್ಮ ಗಮನಕ್ಕಿದೆ. ನಿಮ್ಮ ಬೇಡಿಕೆ ಕುರಿತು ಕಾಂಗ್ರೆಸ್ ನಾಯಕರಿಗೆ ಪತ್ರ ಬರೆಯಲಾಗುವುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ನ್ಯಾಯ ಒದಗಿಸುವಂತೆ ಒತ್ತಾಯಿಸಲಾಗುವುದು ಎಂದರು.
ಸಲೀಂ ಅಳವಂಡಿ ಮಾತನಾಡಿ, ವಿದ್ಯಾರ್ಥಿಗಳ ಬದುಕು ರೂಪಿಸುವ ನೀವು ಬೀದಿಯಲ್ಲಿ ಧರಣಿ ನಡೆಸುತ್ತಿರುವುದು ನೋವಿನ ಸಂಗತಿ. ಈ ಬೆಳವಣಿಗೆಯನ್ನು ಸರಕಾರ ಗಮನಿಸುತ್ತಿದೆ. ನಿಮ್ಮ ಪರವಾಗಿ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಮಂಡಳಿ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.
ಶ್ರೀನಿವಾಸ್ ಪಂಡಿತ, ಗಂಗಾಧರ ಕಬ್ಬೇರ ಮಾತನಾಡಿದರು. ಅತಿಥಿ ಉಪನ್ಯಾಸಕರ ಸಂಘದ ಹಿರಿಯ ಮುಖಂಡ ಡಾ.ಪ್ರಕಾಶ್ ಬಳ್ಳಾರಿ ನಿರೂಪಿಸಿದರು. ಅತಿಥಿ ಉಪನ್ಯಾಸಕ ಬಸವರಾಜ ಕರುಗಲ್ ವಂದಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಕಲ್ಮನಿ, ಸಂಗಮೇಶ್ವರ್ ಸಿ, ಮಹಾಂತೇಶ್ ನೆಲಾಗಣಿ, ರಾಘವೇಂದ್ರ ಎನ್, ಡಾ. ಪ್ರಕಾಶ, ವೀರಭದ್ರಯ್ಯ ಸ್ವಾಮಿ, ಶಂಕರ್ ಅಡಿವಿಭಾವಿ, ಮಂಜುನಾಥ ಹನುಮಸಾಗರ್, ಕೊಟ್ರೇಶ್ ಜಿ.ಎಸ್, ಮಹಮ್ಮದ್ ಅಫೀ ಜುಲ್ಲಾ, ಎಚ್ ಕೆ ನೆರೆಗಲ್, ಬಾಬು ಸಾಬ, ವೆಂಕಟೇಶ್, ಸಿ ಬಸವರಾಜ್, ಎಚ್ ಎಸ್ ಪಾಟೀಲ್, ಡಾ. ನಾಗರಾಜ್ ದೊರೆ , ಮಾರುತಿ ನವೀನ್, ಆರತಿ ಬಿ, ಜ್ಞಾನೇಶ್ವರ ಪತ್ತಾರ, ಬಸಮ್ಮ, ವಿಜಯ ಲಕ್ಷ್ಮಿ, ಡಾ ಗೀತಾ ಮುತ್ತಾಳ್, ಕಲ್ಲಯ್ಯ ಪೂಜಾರ, ಸಂತೋಷ ಬೆಲ್ಲದ, ಅಶೋಕ್ ವೈ, ರಮೇಶ್ ಗುಜ್ಜಾರ, ಎಸ್. ಸಿ ಬಡಿಹಾಳ್, ವೀರಣ್ಣ ಸಜ್ಜನ , ಸಣ್ಣ ದೇವೇಂದ್ರ ಸ್ವಾಮಿ , ಶಿವಬಸಪ್ಪ ಮಸ್ಕಿ, ವಿಜಯ ತೋಟದ, ರವಿ ಹಿರೇಮಠ, ವಿಜಯ ಕುಲಕರ್ಣಿ, ಗಿರಿಜಾ, ಅಕ್ಕಮಹಾದೇವಿ, ಅನುರಾಧ, ಲತಾ, ಎಂ.ಶಿವಣ್ಣ, ಶಿವಮೂರ್ತೆಪ್ಪ ಮತ್ತಿತರರು ಇದ್ದರು.