Breaking News

371 ಜೆ ಕಲಂ ಸೌಲಭ್ಯ ಸದುಪಯೋಗ ಪಡೆಯಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಸಲಹೆ

Take advantage of the 371 J column facility suggested by Tamam Executive Officers Lakshmidevi

ಜಾಹೀರಾತು

ಗಂಗಾವತಿ : ತಾಲೂಕು ಪಂಚಾಯತ್ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ತಾಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು.

ಮಹನೀಯರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್, ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಸ್ವಾತಂತ್ರ್ಯದಿಂದ ವಂಚಿತಗೊಂಡಿತ್ತು. ನಿಜಾಮರ ಆಳ್ವಿಕೆಯಲ್ಲಿತ್ತು. ಅವರ ಕಪಿಮುಷ್ಟಿಯಿಂದ ಹೊರಬರಲು ಶ್ರಮಿಸಿದ ಎಲ್ಲ ಹೋರಾಟಗಾರರು ಹಾಗೂ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು.

ಕಲ್ಯಾಣ ಕರ್ನಾಟಕ ಭಾಗ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದು, ಇದಕ್ಕೆ ವಿಶೇಷ ಅನುದಾನ ನೀಡಲಾಗುತ್ತಿದೆ. 371 ಜೆ ಕಲಂ ಸೌಲಭ್ಯ ಇದೆ. ಎಲ್ಲರೂ ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಪಂ ವ್ಯವಸ್ಥಾಪಕರಾದ ಶಿವಶಾಂತವೀರಯ್ಯ, ತಾಪಂ ಸಿಬ್ಬಂದಿಗಳಾದ ರಮೇಶ, ಸಂತೋಷ, ಶರಣಪ್ಪ, ಶ್ರೀನಿವಾಸ, ರಾಘವೇಂದ್ರ, ಸುಮಂಗಳಾ, ಗಂಗಮ್ಮ, ವೀರನಗೌಡ ಪಾಟೀಲ್, ಶ್ರೀಕಾಂತ್ ಅರ್ಲೂರು, ಬಾಳಪ್ಪ ತಾಳಕೇರಿ, ಶ್ಯಾಮಸುಂದರ್, ಮಲ್ಲಿಕಾರ್ಜುನ, ಹನುಮೇಶ, ಶ್ವೇತಾ ಗೃಹರಕ್ಷಕ ದಳ ಸಿಬ್ಬಂದಿಗಳು ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.