Breaking News
ಶ್ರೀ ಅಖಂಡೇಶ್ವರ ದೇವಸ್ಥಾನದ 18ನೇ ವಾರ್ಷಿಕೋತ್ಸವ,

18th Anniversary of Sri Akhandeshwar Temple,

ಗಂಗಾವತಿ, 3 : ನಗರಸಭೆ ವ್ಯಾಪ್ತಿಯ 27 ನೆಯ ವಾರ್ಡ್, ಹರಿಜನ ವಾಡ ವಿರುಪಾಪುರ, ದಲ್ಲಿರುವ ಶ್ರೀ ಅಖಂಡೇಶ್ವರ ದೇವಸ್ಥಾನದ 18ನೆಯ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ ರಥೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ದೇವಪ್ಪ ದೇವರಮನಿ ತಿಳಿಸಿದರು, ಅವರು ರವಿವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಅಕಂಡೇಶ್ವರ ದೇವಸ್ಥಾನ ಸ್ಥಾಪನೆಗೊಂಡು 18ನೇ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಅಖಂಡೇಶ್ವರನಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಸೇರಿದಂತೆ, 9 ಜೋಡಿಗಳ ಸಾಮೂಹಿಕ ವಿವಾಹವನ್ನು ನಡೆಸಲಾಗುತ್ತಿದ್ದು ಸಂಜೆ ಐದು ಗಂಟೆಗೆ ಸರ್ವಲಾಂಕೃತ ರಥೋತ್ಸವ ಜ ರುಗಲಿದೆ , ಧಾರ್ಮಿಕ ಸಮಾರಂಭದ ಧರ್ಮ ಸಭೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಶ್ರೀ, ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳು, ಹೆಬ್ಬಾಳ ಮಠದ, ನಾಗಭೂಷಣ ಶಿವಾಚಾರ್ಯರು ಸೊಳ್ಳೆ ಕಲ್ ರಾಜರಾಜೇಶ್ವರಿ ಮಠದ, ಶ್ರೀ ಭುವನೇಶ್ವರ ತಾತನವರು ಹಾಗೂ ಅರಳಿ ಹಳ್ಳಿಮಠದ ಶ್ರೀ ಗವಿಸಿದ್ದೇಶ್ವರ ಪೂಜ್ಯರು, ಸೇರಿದಂತೆ ಕಲ್ಮಠದ ಕೊಟ್ಟೂರು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗಣ್ಯರು ಚುನಾಯಿತ ಪ್ರತಿನಿಧಿಗಳು ಮಾಜಿ ಶಾಸಕರುಗಳು, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು, ಹಂಪೆವೋಲ್ಗಪ್ಪ ಕಂಟೆಪ್ಪ ಹನ್ವಾಳ್ ಹುಲಿಗೇಶ ದೇವರಮನೆ ದೇವಪ್ಪ ಅಯೋಧ್ಯ ಶ್ರೀ ಅಖಂಡೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ಮನುಷ್ಯರಾಗಿ”: ಸೌರವ್ ಘೋಷ್

Embrace the Great Thoughts of the Freedom Struggle and Become a New Man”: Saurav Ghosh

ಕೊಪ್ಪಳ: ಬಡತನ ಜಾತಿ, ಧರ್ಮ ಮುಂತಾದ ಹೆಸರಲ್ಲಿ ಧಮನಕ್ಕೊಳಗಾಗಿರುವ ಶೋಷಿತ ಜನಸಮುದಾಯದ ಕಣ್ಣೀರು ಒರೆಸಿ ಹಸಿವು,ಬಡತನ, ದಾರಿದ್ರ್ಯದಿಂದ ಅವರನ್ನು ವಿಮುಕ್ತರನ್ನಾಗಿಸಿ ಈ ದೇಶವನ್ನು ಒಂದು ಉನ್ನತ ಸಮಾಜವನ್ನಾಗಿ ಕಟ್ಟುವ ಭಗತ್ ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳ ಕನಸನ್ನು ನನಸಾಗಿಸುವ ಸಂಕಲ್ಪ ನಮ್ಮದಾಗಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಉನ್ನತ ಸಂಸ್ಕೃತಿ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು ನೀವು ಹೊಸ ಮನುಷ್ಯರಾಗಬೇಕು.” ಎಂದು ಎಐಡಿಎಸ್ಓ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಸೌರವ್ ಘೋಷ್ ಕರೆ ನೀಡಿದರು. ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂದುವರೆದು, ಎಐಡಿಎಸ್ಓ ಹಾಗೂ ಕರ್ನಾಟಕದ ಜನತೆಯ ಅಭೂತಪೂರ್ವ ಹೋರಾಟದಿಂದಾಗಿ ರಾಜ್ಯ ಸರ್ಕಾರವು ಎನ್ಈಪಿ 2020ನ್ನು ಹಿಂಪಡೆದಿದೆ. ಈ ಮೂಲಕ ದೇಶದಲ್ಲೇ ಎನ್‌ಇಪಿ ವಿರುದ್ಧದ ಹೋರಾಟಕ್ಕೆ ಕರ್ನಾಟಕದ ವಿದ್ಯಾರ್ಥಿಗಳು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸಮ್ಮೇಳನದಿಂದ ತೆರಳಿದ ಮೇಲೆ ನಿಮ್ಮ ಶಾಲಾ-ಕಾಲೇಜು ಹಾಗೂ ಊರುಗಳಲ್ಲಿ ಹೋರಾಟಗಳನ್ನು ಕಟ್ಟುವ ಮೂಲಕ ಎಐಡಿಎಸ್ಓನ್ನು ಬಲಪಡಿಸಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಮ್ಮೇಳನದ ಸಮಾರೋಪದಲ್ಲಿ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಎಸ್ ಯು ಸಿ ಐ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೆಡ್ ಕೆ ಉಮಾ, ” ಎಐಡಿಎಸ್ಓ ಇಂದು ಬಹಳ ಎತ್ತರಕ್ಕೆ ಬೆಳೆದಿದೆ. ಸಂಘಟನೆಯು ಹೊಂದಿರುವ ಸಿದ್ಧಾಂತ ಇದರ ಮೂಲ ಸತ್ವವಾದರೆ ಸಾವಿರಾರು ವಿದ್ಯಾರ್ಥಿಗಳ ಭಾಗವಹಿಸುವಿಕೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯುಗದ ಓರ್ವ ಮಹಾನ್ ಮಾರ್ಕ್ಸ್ ವಾದಿ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಕಾಮ್ರೇಡ್ ಶಿವದಾಸ್ ಘೋಷರು ಹೇಳಿರುವಂತೆ ಎಲ್ಲಾ ಕಾಲಕ್ಕೂ ಸಮಾಜದ ಬದಲಾವಣೆಗೆ ಮುಂಚೂಣಿಯಲ್ಲಿ ನಿಲ್ಲುವುದು ವಿದ್ಯಾರ್ಥಿಗಳು ಮತ್ತು ಯುವಜನರು. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಕೆಲವರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ ಶತಮಾನಗಳಿಂದ ತುಳಿತಕ್ಕೊಳಗಾಗಿರುವ ಶೋಷಿತರ ಗುಡಿಸಲುಗಳಿಗೆ ಅದನ್ನು ತಲುಪಿಸುವ ಐತಿಹಾಸಿಕ ಪಾತ್ರವನ್ನು ನೀವು ನಿಭಾಯಿಸಬೇಕಿದೆ. ಏಕೆಂದರೆ ಶಿಕ್ಷಣವು ಯಾರೋ ಕೆಲವರ ಸ್ವತ್ತಲ್ಲ. ಬದಲಿಗೆ, ಹಲವಾರು ಮಹಾನ್ ವ್ಯಕ್ತಿಗಳ ಅಪಾರ ತ್ಯಾಗ ಹಾಗೂ ಸಾವಿರಾರು ವರ್ಷಗಳ ಅವಿರತ ಪರಿಶ್ರಮದಿಂದ ಮಾನವ ಸಮಾಜವು ಜ್ಞಾನವನ್ನು ಸಂಪಾದಿಸಿದೆ. ಈ ಜ್ಞಾನವನ್ನು ರಕ್ಷಿಸುವ ಮಹಾನ್ ಉದ್ದೇಶದೊಂದಿಗೆ ಎಐಡಿಎಸ್ಓ  ಈ ಸಮ್ಮೇಳನವನ್ನು ಸಂಘಟಿಸಿದೆ ಇದನ್ನು ನೆನಪಿನಲ್ಲಿಟ್ಟುಕೊಂಡು ಆ ಮಹನೀಯರಿಗೆ ನೀವು ನಿಜವಾದ ಗೌರವ ಸಲ್ಲಿಸುತ್ತೀರಿ” ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳ ಪ್ರತಿನಿಧಿಗಳನ್ನೊಳಗೊಂಡ 395 ಜನರ ಎಐಡಿಎಸ್ಓ ಕರ್ನಾಟಕ ನೂತನ ರಾಜ್ಯ ಕೌನ್ಸಿಲನ್ನು ಚುನಾಯಿಸಲಾಯಿತು. ರಾಜ್ಯ ಅಧ್ಯಕ್ಷರಾಗಿ ಅಶ್ವಿನಿ ಕೆ ಎಸ್, ಕಾರ್ಯದರ್ಶಿಗಳಾಗಿ ಅಜಯ್ ಕಾಮತ್ ಹಾಗೂ ಉಪಾಧ್ಯಕ್ಷರುಗಳಾಗಿ ಹಣಮಂತು, ಅಭಯಾ ದಿವಾಕರ್, ಸ್ನೇಹಾ ಕಟ್ಟಿಮನಿ, ಚಂದ್ರಕಲಾ, ಅಪೂರ್ವ ಸಿ ಎಂ, ಖಜಾಂಚಿಯಾಗಿ ಸುಭಾಷ್ ಬಿ. ಜೆ. ಹಾಗೂ ಕಚೇರಿ ಕಾರ್ಯದರ್ಶಿಯಾಗಿ ಮಹಾಂತೇಶ ಬಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಚುನಾಯಿಸಲ್ಪಟ್ಟರು.

ಸೆಪ್ಟೆಂಬರ್ 1ರಿಂದ 3 ರವರೆಗೆ  ತುಮಕೂರಿನಲ್ಲಿ ನಡೆದ ಎಂಟನೇ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನವು, ಸಾರ್ವಜನಿಕ ಶಿಕ್ಷಣ ಉಳಿಸಲು ರಾಜ್ಯವ್ಯಾಪಿ ಬಲಿಷ್ಠ ಹೋರಾಟಗಳನ್ನು ಕಟ್ಟಿ ಬೆಳೆಸುವ ಮತ್ತು ಈ ಕರ್ತವ್ಯದಲ್ಲಿ ನೇತಾಜಿ ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳ ಹಾಗೂ ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರರಂತಹ ನವೋದಯ ಚಿಂತಕರ ಉನ್ನತ ಚಿಂತನೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಸಂಕಲ್ಪದೊಂದಿಗೆ ಸೆಪ್ಟೆಂಬರ್ ಮೂರನೇ ತಾರೀಕಿನಂದು ಸಮಾರೋಪಗೊಂಡಿತು.

ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ವಿರೋಧಿಯಾಗಿದೆ-ಮಾಜಿ ಶಾಸಕ ಪರಣ್ಣ ಮುನವಳ್ಳಿ,

Congress-led government is anti-farmer,,,,, former MLA Paranna Munavalli,

ಗಂಗಾವತಿ 3 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ, ರೈತ ವಿರೋಧಿಯಾಗಿದೆ ಎಂದು, ಮಾಜಿ ಶಾಸಕ ಮುನವಳ್ಳಿ ಹೇಳಿದರು, ಅವರು ರವಿವಾರದಂದು ಬಿಜೆಪಿಯ ಕಾರ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಹಿಂದೆ ಬಿಜೆಪಿ ನೇತೃತ್ವದ, ಸರ್ಕಾರದ ಅವಧಿಯಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ರೈತರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಅದಕ್ಕಾಗಿ ಸಾಕಷ್ಟು ಅನುದಾನವನ್ನು ಸಹ ಕಲ್ಪಿಸಲಾಗಿತ್ತು, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ, ಬಿಜೆಪಿಯ ಅವಧಿಯಲ್ಲಿನ ಎಲ್ಲಾ ರೈತರ ಯೋಜನೆಗಳನ್ನು ತಡೆಹಿಡಿದು, ರೈತರಿಗೆ ವಂಚಿಸುತ್ತದೆ, ಮಳೆಯ ಅಭಾವದಿಂದ ಉಂಟಾದ ಬರಗಾಲ ಸಮಸ್ಯೆ,, ರೈತರಿಗೆ ಬೆಳೆಯುವ ಬೆಳೆಗಳಿಗೆ ಸಮರ್ಪಕ ನೀರಿಲ್ಲದೆ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಸೌಲಭ್ಯ ಕಲ್ಪಿಸದೆ, ಬೆಳೆಗಳು ಒಣಗಿ, ರೈತರು ಕಂಗಾಲಾಗಿದ್ದಾರೆ, ರೈತರ ಸಂಪದ ಯೋಜನೆ ಶ್ರಮಶಕ್ತಿ ಯೋಜನೆ ರೈತ ವಿದ್ಯಾನಿಧಿ ಯೋಜನೆ, ಎಪಿಎಂಸಿ ಕಾನೂನು, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಖುಷಿ ಭೂಮಿ ಮಾರಾಟ ಕಾನೂನು ಹೀಗೆ, ಕಾಂಗ್ರೆಸ್ ನೇತೃತ್ವದ ಸರಕಾರ, ಅನುಷ್ಠಾನಗೊಳಿಸದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂ ರಿದರು, ಕಾಂಗ್ರೆಸ್ ನೇತೃತ್ವದ ಸರ್ಕಾರ, ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಈ ಕುರಿತು ಮಂಡಲ ಮಟ್ಟದಿಂದ ಎಲ್ಲಾ ಹಂತದವರೆಗೆ ಭಾರತೀಯ ಜನತಾ ಪಕ್ಷ, ರೈತರನ್ನು ಜನಜಾಗೃತಿಗೊಳಿಸಲಾಗುತ್ತದೆ ಎಂದು ತಿಳಿಸಿದ ಅವರು ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಹತ್ವ ಬದಲಾವಣೆ ಉಂಟಾಗಲಿದೆ ಎಂಬುದು ಹೇಳಿದರು, ವೀರಭದ್ರ ಪ್ಪ ನಾಯಕ್, ನರ್ಸಿಂಗ್ ರಾವ್ ಕುಲಕರ್ಣಿ, ಕಾಶಿನಾಥ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮೀ ಯೋಜನೆ ಸಹಕಾರಿ : ದೊಡಮನಿ

Grilahakshmi Yojana Cooperative for Economic Empowerment of Women : Dodamani

ಕೂಡಲಸಂಗಮ:: ಕರ್ನಾಟಕ ರಾಜ್ಯ ಸರ್ಕಾರದ ಅತೀ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಬಡ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ಹೇಳಿದರು.

           ಸಮೀಪದ ಬಿಸಲದಿನ್ನಿ ಗ್ರಾಮ ಪಂಚಾಯತ್ ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು ರಾಜ್ಯದ ಬಡ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಮೂಲಕ ಮನೆಯ ಯಜಮಾನಿಗೆ ಶಕ್ತಿ ತುಂಬುವ ಕೆಲಸ ಮಾಡುವ ಕಾರ್ಯ ಅವಿಸ್ಮರಣೀಯವಾದುದು.

             ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತೆವ್ವ ಹಿರೇಗೌಡರ ಅವರು ಈ ಯೋಜನೆ ಹಲವಾರು ಬಡ ಕುಟುಂಬದ ಆಸರೆಯಾಗಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

             ಈ ಸಂದರ್ಭದಲ್ಲಿ ಬಿಸಲದಿನ್ನಿ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡ ಭೀಮಣ್ಣ ಯರಝೇರಿ,ವಸಂತ ದೇಶಪಾಂಡೆ,ಮುದಿಗೌಡ ಮೇಟಿ,ಬಾಲೇಶ ಹಿರೇಗೌಡರ, ಅಭಿವೃದ್ಧಿ ಅಧಿಕಾರಿ ಅಯ್ಯಣ್ಣ ಗದ್ದೇರ , ಕಾರ್ಯದರ್ಶಿ ನಾಗೋಜಿ ಮೀರಜಕರ ಹಾಗೂ ಪಂಚಾಯತ್ ವ್ಯಾಪ್ತಿಯ ಗುರು ಹಿರಿಯರು ಹಾಗೂ ಯುವಕ ಮಿತ್ರರು, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.