Release of brochures informing the public about the achievements of the central government in 9 years
ಇಂದು ಗಂಗಾವತಿ ನಗರದ 27 ನೇ ವಾರ್ಡಿನ ಲಕ್ಷ್ಮಿ ಕ್ಯಾಂಪ್ ನಲ್ಲಿ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕರಪತ್ರಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾದ ಕರಡಿ ಸಂಗಣ್ಣನವರು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಒಂಬತ್ತು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ನಾ ಭೂತೊ ನ ಭವಿಷ್ಯತಿ ಎಂದು ವ್ಯಾಖ್ಯಾನಿಸಿದರು.
ಇಂದು ದೇಶವು ಸಕಲ ರಂಗಗಳಲ್ಲಿಯೂ ಉನ್ನತಿಯತ್ತ ಸಾಗುತ್ತಿದ್ದು ಜಗತ್ತಿನ ದೊಡ್ಡ ದೊಡ್ಡ ದೇಶಗಳು ಕೂಡಾ ಮೋದಿಯವರ ಸಾಮರ್ಥ್ಯವನ್ನು ಮೆಚ್ಚಿ ಈಗಾಗಲೇ ಭಾರತ ವಿಶ್ವಗುರು ಆಗುತ್ತಿರುವದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ನಂತರ ವಾರ್ಡಿನ ಮನೆಮನೆಗೆ ತೆರಳಿ ಜನರಿಗೆ ಕರಪತ್ರಗಳನ್ನು ಹಂಚಿ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದರು.
ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಹಿರಿಯರಾದ ಎಚ್. ಗಿರೇಗೌಡರು, ಮಾಜಿ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳ, ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ನಾಡಿಗೇರ, ನರಸಿಂಹ ರಾವ್ ಕುಲಕರ್ಣಿ, ಮಾಧ್ಯಮ ವಕ್ತಾರರಾದ ವೀರಭದ್ರಪ್ಪ ನಾಯಕ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಅಮರಜ್ಯೋತಿ ವೆಂಕಟೇಶ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶಿವು ಅರಿಕೇರಿ, ಹಿರಿಯರಾದ ಹನುಮಂತಪ್ಪ ನಾಯಕ, ಹೊಸಮಲಿ ಮಲ್ಲೇಶಪ್ಪ ನಾಯಕ, ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ಶ್ರೇಷ್ಠಿ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ರಾಧ ಉಮೇಶ, ಪ್ರಮುಖರಾದ ರೇಖಾ ರಾಯಬಾಗಿ, ರಾಜೇಶ ಪಾಟೀಲ, ಶಾಂತಮಲ್ಲಯ್ಯ ಸ್ವಾಮಿ, ಅಮರೇಗೌಡ, ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ, ಪರಶುರಾಮ ಮಡ್ಡೇರ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.