Breaking News

ಬೆಂಗಳೂರಿನಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತಕ್ಕೆ ೧೧ ಜನ ಬಲಿ ವಿಷಾದ: ಭಾರಧ್ವಾಜ್

11 killed in stampede near Chinnaswamy Stadium in Bengaluru: Bhardwaj

ಜಾಹೀರಾತು

ಗಂಗಾವತಿ: ಜೂನ್-೦೪ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ ತಂಡದ ವಿಜಯೋತ್ಸವ ಆಚರಣೆ ಸಂಬAಧವಾಗಿ ಲಕ್ಷಾಂತರ ಜನ ಅಭಿಮಾನಿಗಳು ಒಟ್ಟಾಗಿ ಸೇರಿ ಉಂಟಾದ ಕಾಲ್ತುಳಿತಕ್ಕೆ ೧೧ ಜನ ಬಲಿಯಾಗಿರುವುದು ವಿಷಾದನೀಯ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಸಂತಾಪ ಸೂಚಿಸಿದರು.
ಈ ದುರ್ಘಟನೆಗೆ ಆರ್.ಸಿ.ಬಿ ತಂಡದ ಫ್ರಾಂಚೈಸಿಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯೇ ಹೊಣೆಯಾಗಿದೆ. ಕೂಡಲೇ ಸರ್ಕಾರ ಸದರಿ ಕಂಪನಿ ಮಾಲಿಕರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮೃತರಾದವರಿಗೆ ಈಗಾಗಲೇ ಸರ್ಕಾರ ತಲಾ ೧೦ ಲಕ್ಷಗಳ ಪರಿಹಾರ ಘೋಷಿಸಿದ್ದು, ಸದರಿ ಪರಿಹಾರ ಮೃತರ ಕುಟುಂಬಕ್ಕೆ ಸಾಕಾಗುವುದಿಲ್ಲ. ಆರ್.ಸಿ.ಬಿ ತಂಡದ ಫ್ರಾಂಚೈಸಿ ಕಂಪನಿಯು ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಟಾಟಾ ಐ.ಪಿ.ಎಲ್ ನಂತರ ಖಾಸಗಿ ಪಂದ್ಯಾವಳಿಗಳಿಗೆ ಯುವಪೀಳಿಗೆ ಬೆಟ್ಟಿಂಗ್ ದಂಧೆ ಸೇರಿದಂತೆ ಹುಚ್ಚು ಅಭಿಮಾನಕ್ಕೆ ಬಲಿಯಾಗುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಐ.ಪಿ.ಎಲ್ ಪಂದ್ಯಾವಳಿಗಳನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದರು.

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *