Farmers' association protests demanding Rs 25 lakh compensation for farmer injured in tiger attack.

ಚಾಮರಾಜನಗರ :ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುಂಡ್ಲುಪೇಟೆ ತಾಲ್ಲೂಕ್ ಘಟಕದಿಂದ
ಇಂದು ಬೇಗೂರಿನ TB ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಿತು ಕಳೆದ ಗುರುವಾರ ದಿನದಂದು ಮೈಸೂರು ಜಿಲ್ಲೆಯ ಬಡಗಲಪುರ ಗ್ರಾಮದಲ್ಲಿ ರೈತ ಮೇಲೆ ಹುಲಿ ದಾಳಿಯನ್ನು ಖಂಡಿಸಿ ಇಂದು ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಕೆಲ ನಿಮಿಷಗಳ ಕಾಲ ರಸ್ತೆ ತಡೆನೆಡೆಸಿ ಸಂಕೇತಿಕ ಪ್ರತಿಭಟನೆ ಮಾಡಿದರು.

ನಂತರ ಮಾತನಾಡಿದ ರೈತ ಸಂಘದ ತಾಲ್ಲೂಕ್ ಅಧ್ಯಕ್ಷರಾದ ವೀರನಪುರ ನಾಗಪ್ಪ. ಬಡಗಲಪುರ ಗ್ರಾಮದಲ್ಲಿ ಹುಳಿ ದಾಳಿಯಿಂದ ಗಾಯಗೊಂಡಿರುವ ಯುವ ರೈತ ಮಹದೇವ ಗೌಡ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಹುಲಿ ದಾಳಿ ಮಾಡಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೈತನ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು ಹಾಗೂ ಹುಲಿ ದಾಳಿಗೆ ಒಳಗಾಗಿರುವ ರೈತನಿಗೆ ಮಾಸಿಕ ಪಿಂಚಣಿ ನೀಡಬೇಕು ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು
ಜೊತಗೆ ಹುಲಿ ದಾಳಿಯಿಂದ ಗಾಯಗೊಂಡಿರುವ ರೈತ ಕುಟುಂಬದ ಜೊತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುಂಡ್ಲುಪೇಟೆ ತಾಲ್ಲೂಕ್ ನಿಲ್ಲುತ್ತದೆ ಎಂದು ತಿಳಿಸಿದರು
ಈ ರೀತಿಯ ಆತಂಕಕಾರಿ ಘಟನೆಗಳ ಮರು ಕಳಿಸಬಾರದೆಂದು ಎಂದು
ಓಂಕಾರ ಅರಣ್ಯ ವಲಯ ಅಧಿಕಾರಿ ಆರ್‌ಎಫ್‌ಓ ಹನುಮಂತ ಪಾಟೀಲರಿಗೆ ಮನವಿ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಟ್ಟರು
ಇದೇ ಸಮಯದ ಪ್ರತಿಭಟನೆಯಲ್ಲಿ
ತಾಲ್ಲೂಕ್ ಅಧ್ಯಕ್ಷರಾದ ನಾಗಪ್ಪ. ಜಿಲ್ಲಾ ಉಪಾಧ್ಯಕ್ಷರ ಪುಟ್ಟೇಗೌಡ. ಯಡುವಿನಹಳ್ಳಿ.ಸಿದ್ದರಾಜು.ಸೋಮಹಳ್ಳಿ ನವೀನ್.VM ಸುಂದರ. ಮರಿಸ್ವಾಮಿ ಗುರುಸ್ವಾಮಿ.ವಸಂತ ಬೆಟ್ಟಹಳ್ಳಿ ಸುರೇಶ ಕೆಪಿ ಮಂಜು.ಪಡಗೂರು ಮಹೇಶ್ ಬೇಗೂರು ಬ್ಲಾಕ್ ಅಧ್ಯಕ್ಷರಾದ. ಮರಿಸಿದ್ದಶೆಟ್ಟಿ. ಬರಗಿ ಮಣಿ ದೇಶಿಪುರ ನವೀನ. ನಟರಾಜು ಇನ್ನೂ ಮುಂತಾದವರು ಹಾಜರಿದ್ದರು
Kalyanasiri Kannada News Live 24×7 | News Karnataka
