ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಯ ಹರಿಕಾರರು-ನಾಗರಾಜ ಕಂದಾರಿ
Ambedkar was the pioneer of social equality-Nagaraja Kandari
ಕೊಪ್ಪಳ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೯ನೇ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು. ಅಂಬೇಡ್ಕರ್ ಅವರು ಸಾಮಜಿಕ ಸಮಾನತೆಯ ಹರಿಕಾರರು ಹಾಗೂ ಈ ದೇಶ ಕಂಡ ಮಹಾನ್ ಮಾನವತಾವಾದಿ ಎಂದು ದಲಿತ ಮುಖಂಡ ನಾಗರಾಜ ಕಂದಾರಿ ತಿಳಿಸಿದರು. ಸವi-ಸಮಾಜ ನಿರ್ಮಾಣ ಮಾಡಲು ಈ ದೇಶಕ್ಕೆ ಸುಸಜ್ಜಿತ ಸಂವಿಧಾನ ಬರೆದು ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆದರಿಂದ ಎಲ್ಲರು ಶಿಕ್ಷಣವಂತರಾಗಬೇಕು ಎಂದು ನಾಗರಾಜ ಕಂದಾರಿ ಕರೆ ನೀಡಿದರು. ಜೊತೆಗೆ ಎಲ್ಲಾ ಬಡ ಸಮುದಾಯದವರು ಸಂಘಟಿತರಾಗಿ ಅಂಬೇಡ್ಕರ ಅವರ ಮಾರ್ಗದಲ್ಲಿ ಮುನ್ನಡೆಯೋಣ ಎಂದು ತಿಳಿಸಿದರು. ನಂತರ ದಲಿತ ಸಂಘಟಣೆಯ ಹಿರಿಯ ಮುಖಂಡರಾದ ಡಾ|| ಬಿ.ಜ್ಞಾನಸುಂದರ್ ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನಶಿಲ್ಪಿ ನಮ್ಮ ದೇಶಕ್ಕೆ ಒಂದು ಒಳ್ಳೆಯ ಸಮಾನತೆಯ ಸಂವಿಧಾನವನ್ನು ಬರೆದು ಕೊಟ್ಟಂತಹ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಎಲ್ಲಾ ಸಮಾಜದವರು ಅಂಬೇಡ್ಕರ್ ಅವರನ್ನು ಗೌರವದಿಂದ ಸ್ಮರಿಸಬೇಕೆಂದು ತಿಳಿಸಿದರು ಹಾಗೂ ಸರಕಾರ ಬಡ ಸಮುದಾಯಕ್ಕೆ ಸರಿಯಾದ ಮೀಸಲಾತಿ ಕೊಡಲು ಒತ್ತಾಯಿಸಿದರು. ಈ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀ ಆದಿಲ್ ಪಟೇಲ ಸಮಾಜದ ಮುಖಂಡರುಗಳಾದ ಸಿದ್ದರಾಮ ಹೊಸಮನಿ, ಗವಿಸಿದ್ದಪ್ಪ ಬೆಲ್ಲದ, ರಾಮಣ್ಣ ಕಂದಾರಿ, ಲಕ್ಷö್ಮಣ ಬಂಗಾರಿ, ಮಂಜುನಾಥ ಆರೆಂಟನೂರು, ಬಸವರಾಜ ಚೀಲವಾಡಗಿ, ಉಮೇಶ ಬೆಲ್ಲದ್, ಜಿ.ಕೆ ಮಂಜುನಾಥ, ಬಾಷುಸಾಬ್ ಕಮ್ಮಾರ, ಅಬ್ದುಲ್ ಜಿಲಾನ್ಸಾಬ್ ಶೇಖ್(ಏSಖಖಿಅ), ಶಾಂತಕುಮಾರ ದೊಡ್ಡಮನಿ, ಮಹೇಶ ದೊಡ್ಡಮನಿ, ಚಂದ್ರು ಕಟ್ಟಿಮನಿ ಹಾಗೂ ಇತರರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka