ಗಾಣಿಗ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

Election of Officers for Mining Society ಗಂಗಾವತಿ : ಯಾವುದೇ ಒಂದು ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅತೀ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಸಂಘಟಿತವಾಗಬೇಕಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶರಣಪ್ಪ ನಾಗೋಜಿ ಅವರು ಹೇಳಿದರು. ನಗರದ ಹಿರೇ ಜಂತಕಲ್ ನ ಬಸವ ಭವನದಲ್ಲಿ ಸೋಮವಾರ ಆಯೋಜಿಸಿದ ತಾಲೂಕ ಗಾಣಿಗ ಸಮಾಜದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸದೃಢ ಸಮಾಜ ನಿರ್ಮಾಣಕ್ಕೆ ಸಂಘಟನೆ ಅಗತ್ಯವಾಗಿದ್ದು, ಅನ್ಯ ಸಮುದಾಯವನ್ನು ಗೌರವಿಸುತ್ತಾ ಸಂಘಟಿತರಾಗಬೇಕು. ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಗಾಣಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಂಘಟನೆ ಇಲ್ಲವಾದ್ದರಿಂದ ಸಮಾಜ ಅಭಿವೃದ್ಧಿ ಹೊಂದುತ್ತಿಲ್ಲ. ಸಂಘಟನೆ ಅಭಾವದಿಂದ ಯುವ ಸಮೂಹ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷ ಣಿಕವಾಗಿ ಮುಂದುವರಿಯುತ್ತಿಲ್ಲ.  ಸಮಾಜದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು. ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ತೋಟಪ್ಪ ಕಾಮನೂರು ಅವರು ಮಾತನಾಡಿ, ಸಮಾಜದ ಮುಖಂಡರು ಸಂಘಟನೆಯಲ್ಲಿ ತೊಡಗಬೇಕು. ಆಯ್ಕೆ ಆದ ಪದಾಧಿಕಾರಿಗಳು ಸಮಾಜ ಅಭಿವೃದ್ಧಿ ಪೂರಕ ಕಾರ್ಯಗಳನ್ನು ಮಾಡಬೇಕು. ಸರಕಾರದಿಂದ ಸಮಾಜಕ್ಕೆ ಸಿಗುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು. ಈ ವೇಳೆ ಜಿಲ್ಲಾ ಘಟಕದ ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ ಗಾಳಿ, ಅಖಿಲ ಭಾರತ ಗಾಣಿಗ ಸಮಾಜದ ಉಪಾಧ್ಯಕ್ಷ ಸಂಗನಗೌಡ ಪಾಟೀಲ್, ಅಖಿಲ ಭಾರತ ಗಾಣಿಗ ಸಮಾಜದ ಕಾರ್ಯದರ್ಶಿ ವೀರಣ್ಣ ಗಾಣಿಗೇರ್, ಜಿಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಉಮೇಶ ಸಜ್ಜನ, ಸಮಾಜದ ಹಿರಿಯರು ಹಿರೇಬಸಪ್ಪ ಸಜ್ಜನ, ಜಿ.ಶಿವಲಿಂಗಪ್ಪ, ವೈ.ಸೋಮಪ್ಪ, ಸಂಗಪ್ಪ ಸಜ್ಜನ, ಮಹಾಂತೇಶ ಸಜ್ಜನ ಕನಕಗಿರಿ, ಅಶೋಕ ಸಜ್ಜನ ಖಾಧಿ ಭಂಡಾರ ಗಂಗಾವತಿ, ಗವಿಸಿದ್ದಪ್ಪ ಸಜ್ಜನ ಹೇರೂರ, ಶ್ರೀದೇವಿ ನಾಗರಾಜ, ಶರಣಪ್ಪ ಕಲ್ಗುಡಿ ಸಿ.ಬಿ.ಎಸ್. ಶಿವಪುತ್ರಪ್ಪ ಗುಡ್ಡದ ಕ್ಯಾಂಪ್, ಹಾಗೂ ಗಾಣಿಗ ಸಮಾಜದ ನಗರ ಘಟಕದ ಪದಾಧಿಕಾರಿಗಳು ಇದ್ದರು.  ತಾಲೂಕು ಅಧ್ಯಕ್ಷರಾಗಿ ಶಿವಪುತ್ರಪ್ಪ ನೇಮಕ ಪದಾಧಿಕಾರಿಗಳ ನೇಮಕ: ಗಂಗಾವತಿ ತಾಲೂಕಾ ಗಾಣಿಗ ಸಮಾಜದ ನೂತನ ಗೌರವಾಧ್ಯಕ್ಷರಾಗಿ ಶ್ರೀದೇವಿ ನಾಗರಾಜ, ತಾಲೂಕಾಧ್ಯಕ್ಷರಾಗಿ ಶಿವಪುತ್ರಪ್ಪ ಗುಡ್ಡದಕ್ಯಾಂಪ್ ವಡ್ಡರಹಟ್ಟಿ, ಉಪಾಧ್ಯಕ್ಷರಾಗಿ ಶರಣಪ್ಪ ಕಲ್ಗುಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ ಮಾಲಿಪಾಟೀಲ್ ಜಂಗಮರ ಕಲ್ಗಡಿ, ಖಜಾಂಚಿ ಚಂದ್ರಪ್ಪ ಸೊಕ್ಕೆ, ಸದಸ್ಯರಾಗಿ ಮಲ್ಲಿಕಾರ್ಜುನ ಜೋಗಿನ ಜ.ಕಲ್ಗುಡಿ, ಶರಣಬಸವ ಹುನಗುಂದ ಗಂಗಾವತಿ, ಗವಿಸಿದ್ದಪ್ಪ ಸಜ್ಜನ ಹೇರೂರು, ಶರಣಪ್ಪ ಕುದುರಕೊಟಗಿ ಬಸಾಪಟ್ಟಣ, ನಾಗೇಶ ಹುಣಿಸಿಹಾಳ ಹಣವಾಳ, ಬಸಪ್ಪ ಬಚ್ಚಿನಾಳ ಅಯೋದ್ಯ, ಶಂಕ್ರಪ್ಪ ಕುರಹಟ್ಟಿ ಶರಣಬಸವೆಶ್ವರ ನಗರ, ಭುವನೇಶಪ್ಪ ಹಿರೆಜಂತಕಲ್, ವಿಜಯಕುಮಾರ ಕುಷ್ಟಗಿ, ಎಂ.ನಾಗರಾಜ ಹಿರೇಜಂತಕಲ್, ಶಶಿಕುಮಾರ ಗಡ್ಡಿ, ಮುದಿಯಪ್ಪ ಬಾಬುರೆಡ್ಡಿಕ್ಯಾಂಪ್, ನಾಗರಾಜ ಗಡ್ಡಿ ಹಿರೇಜಂತಕಲ್, ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ರತ್ನಮ್ಮ ಚೆನ್ನಬಸಪ್ಪ ಹಿರೇಜಂತಕ್ ಇವರನ್ನು ಆಯ್ಕೆ ಮಾಡಲಾಯಿತು.

H.Mallikarjun

ವೈದ್ಯರಿಲ್ಲದೆ ತೆರೆಯುವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪರದಾಡುವಗ್ರಾಮಸ್ಥರು

Villagers struggle for treatment in the hospital that opens without a doctor. ವರದಿ : ಬಂಗಾರಪ್ಪ ಸಿ.ಹನೂರು :ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಅನಾರೋಗ್ಯಕ್ಕೀಡಾದರೆ ಸಮಸ್ತೆಗಳಾಗಬಾರದೆಂದು ಸರ್ಕಾರವು ಲಕ್ಷಾಂತರ ಹಣ ವ್ಯಯಿಸುವಾಗ ಕೂಡ್ಲೂರಿನ ಗ್ರಾಮದ ವ್ಯಕ್ತಿಯು ಅನಾರೋಗ್ಯದ ನಿಮಿತ್ತವಾಗಿ…

H.Mallikarjun

ಅಭಿವೃದ್ಧಿಗೆಮತ್ತೋಂದು ಹೆಸರೆಆರ್ ದೃ ವನಾರಯಣ್ ಮೊದಲನೆ ವರ್ಷದ ಪುಣ್ಯಸ್ಮರಣೆಯಲ್ಲಿ ಆರ್ ನರೇಂದ್ರಾಭಿಮತ

Another name for development is Dru Vanarayan, who is first in the commemoration of the year, Narendra Abhima. ವರದಿ : ಬಂಗಾರಪ್ಪ ಸಿ .ಹನೂರು:ರಾಜ್ಯದ ಕೆಲಸ ಕಾರ್ಯಗಳಿಗೆ ಕೆಂದ್ರದಲ್ಲಿ ಸದಾ ಮುಂದಿದ್ದ ಅವರು ಚಾಮರಾಜನಗರ…

H.Mallikarjun

ಮಕ್ಕಳ ಮನದಲ್ಲಿ ಮಾನವೀಯಮೌಲ್ಯಗಳನ್ನುತುಂಬುವಅವಶ್ಯಕತೆಇದೆ-ನೇತ್ರಾಜಗುರುವಿನ ಮಠ

There is a need to inculcate humane values ​​in the minds of children - Netrajaguru's Math ಗಂಗಾವತಿ:ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ಭವಿಷ್ಯದಲ್ಲಿ ಉತ್ತಮ ಜೀವನ ಸರಿಪಡಿಸುವುದರ ಬಗ್ಗೆ ಬಾಲ್ಯದಲ್ಲಿಯೇ ಅವರ ಮನ ಪರಿವರ್ತನೆಗಾಗಿ ನಮ್ಮ…

H.Mallikarjun

ಬ್ರಹ್ಮಾಂಡದ ಪ್ರತೀಕವೇ ಇಷ್ಟಲಿಂಗ

Ishtalinga is the symbol of the universe ಯಲಬುರ್ಗಾ ತಾಲೂಕಿನ ಶರಣ ಗ್ರಾಮ ಗುಳೆ ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ ಸಾಮೂಹಿಕ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ…

H.Mallikarjun

ಲೋಕೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಿಂದ ತಿಪಟೂರು ಶಾಸಕರವಿರುದ್ಧಅಸಮಾಧಾನ.

Against Tipatur MLA by Lokeshwar fans and Congress workers displeasure ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್ ಗುಡ್ಡದಪಾಳ್ಯ ತಾತನ ಮನೆ ಫಾರ್ಮ್ ಹೌಸ್ ನಲ್ಲಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರಾದ ಲೋಕೇಶ್ವರ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯನ್ನು ಆಯೋಜನೆ…

H.Mallikarjun

ಹೆಣ್ಣುಮಕ್ಕಳಿಗೆ ಉಚಿತವಾದ ಖಡ್ಡಾಯ ಶಿಕ್ಷಣ ನೀಡಬೇಕು : ಪಲ್ಲವಿ ಆದಾಪೂರ ಅಭಿಮತ

Free compulsory education for girls: Pallavi Adapura Abhimat ನವಲಿ: ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ಗ್ರಾಮ ಪಂಚಾಯತ ನವಲಿ ಶ್ರೀ ಕ್ಷೇತ್ರ ನವಲಿ ವೀರಭದ್ರೇಶ್ವರ ಗ್ರಾಮಿಣಾಭಿವೃದ್ಧಿ ಸಂಸ್ಥೆ, ಮಹಿಳಾ ಸಬಳಿಕರಣ ಸಂಸ್ಥೆ ಮಹಿಳಾ ಸಬಲೀಕರಣ ಸಂಸ್ಥೆ…

H.Mallikarjun

ವಿಜೃಂಭಣೆಯಿಂದ ಜರುಗಿದ ಮಾದಪ್ಪನ ರಥೋತ್ಸವ ಸಾಲೂರು ಶ್ರೀ ಗಳು ಹಾಗೂ ಶಾಸಕರು ಭಾಗಿ

Madappa's Chariotsava, which was celebrated with pomp, was attended by Mr. and MLAs of Salur. ವರದಿ : ಬಂಗಾರಪ್ಪ ಸಿ ಹನೂರು : ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ…

H.Mallikarjun

ಗ್ಯಾರಂಟಿ ಯೋಜನೆ ಮನೆ‌ ಮನೆ ಸರ್ವೆ, ಮಾಹಿತಿ ಹಂಚಿಕೆ

Guarantee scheme door to door survey, information sharing ಕೊಪ್ಪಳ: ಕೊಪ್ಪಳ ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ…

H.Mallikarjun