Contribution from everyone is essential to realize the vision of a developed India by 2047: CSIR Chief Dr. N. Kalaiselvi
2047ರ ದೂರದೃಷ್ಟಿಯ ವಿಕಸಿತ ಭಾರತ ಹೊಂದಲು ಸರ್ವರಿಂದಲೂ ಕೊಡುಗೆ ಅಗತ್ಯ: ಸಿಎಸ್ಐಆರ್ ಮುಖ್ಯಸ್ಥೆ ಡಾ. ಶ್ರೀಮತಿ ಎನ್. ಕಲೈಸೆಲ್ವಿ

ಬೆಂಗಳೂರು: ಸೆ.27: ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಸ್ವಯಂ ಶಿಸ್ತು ಅತ್ಯಗತ್ಯ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಡೈರೆಕ್ಟರ್ ಜನರಲ್ ಮತ್ತು ಡಿಎಸ್ಐಆರ್
ಕಾರ್ಯದರ್ಶಿ ಡಾ. ಶ್ರೀಮತಿ ಎನ್. ಕಲೈಸೆಲ್ವಿ ಅಭಿಪ್ರಾಯಪಟ್ಟರು.
ಜಯನಗರದ ಆರ್‌ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ಜೊತೆ ಸೇರಿ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ನ ಬ್ಯಾನರ್ ಅಡಿಯ ಸಹಯೋಗದೊಂದಿಗೆ ‘ರೋಲ್ ಆಫ್ ಅಕಾಡೆಮಿಯ ಇನ್ ಎಂಪವರಿಂಗ್ ಇಂಡಿಯಾ ಥ್ರೂ ರಿಸರ್ಚ್ ಅಂಡ್ ಇನ್ನೋವಷನ್: ದಿ ವಿಷನ್ ಆಫ್ ವಿಕಸಿತ ಭಾರತ್ ಎಂಬ ಒಂದು ದಿನದ ವಿಶೇಷ ಶೈಕ್ಷಿಕ್ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಡಾ. ಶ್ರೀಮತಿ ಎನ್. ಕಲೈಸೆಲ್ವಿ ಅವರು
ನಾವು 2047ರ ದೂರದೃಷ್ಟಿಯ ವಿಕಸಿತ ಭಾರತ ಹೊಂದಲು ಸರ್ವರಿಂದಲೂ ಕೊಡುಗೆ ಅಗತ್ಯತೆಗಳನ್ನು ಹಾಗೂ ವ್ಯಕ್ತಿಗಳು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಸಮಾಜ ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಶಿಸ್ತನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನ್‌ಗಳ ಮೇಲೆ ಜನರ ನಡುವೆ ಪ್ರಮುಖ ತಡೆಗೋಡೆಯಾಗಿ ಮಾರ್ಪಟ್ಟಿವೆ. ಇವುಗಳನ್ನು ಜನರು ಅರ್ಥಪೂರ್ಣವಾಗಿ ಮಾನವ ಸಂವಹನವನ್ನು ಕಾಪಾಡಿಕೊಳ್ಳುವ ಹಾಗೂ ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪಾತ್ರದ ಕುರಿತು ಚರ್ಚಿಸಲು ಈ ಸಂವಾದವು ಶಿಕ್ಷಣ ತಜ್ಞರು ಮತ್ತು ಶಿಕ್ಷಣ ವೃತ್ತಿಪರರನ್ನು ಒಟ್ಟುಗೂಡಿಸಿದೆ ಎಂದರು.
ಸಂಶೋಧನಾ ಆಧಾರಿತ ಚಿಂತನೆಯನ್ನು ಪ್ರೋತ್ಸಾಹಿಸುವ, ಯುವ ಪ್ರತಿಭೆಗಳನ್ನು ಪೋಷಿಸುವ ಹಾಗೂ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾಜಿಕ ಅಗತ್ಯಗಳ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಖಜಾಂಚಿ ಪಿ.ಎಸ್.ವೆಂಕಟೇಶ್ ಬಾಬು ಮಾತನಾಡಿ, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ಜೊತೆ ಸೇರಿ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ನ ಬ್ಯಾನರ್ ನಲ್ಲಿ ಇಂತಹ ಕಾರ್ಯಗಾರದಲ್ಲಿ ಮಹತ್ವವಾದ ಹೊಸ ರೀತಿಯ 2047ರ ವೇಳೆಗೆ ಉತ್ತಮ ಭಾರತವನ್ನು ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ಕೂಡ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೃಷಿ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಗ್ರ ಪ್ರಗತಿ ಸಾಧಿಸುವುದಾಗಿದೆ. ಇನ್ನು ವಿಕಸಿದ ಭಾರತವು ಒಳ್ಳೆಯ ಬೆಳವಣಿಗೆಯನ್ನು ಸಾಗುತ್ತಿರುವುದು ಕೆಲವೇ ಕೆಲವು ವರ್ಷಗಳೇ ಉಳಿದಿರುವುದು ಎಂದರು.
ಪ್ರಮುಖವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಎನ್. ತಿಪ್ಪೇಸ್ವಾಮಿ ಮಾತನಾಡಿ, ದೇಶದ ದೂರದೃಷ್ಟಿಯ ವಿಕಸಿತ ಭಾರತ ಹೊಂದಲು ಸರ್ವರಿಂದಲೂ ಕೊಡುಗೆ ಅಗತ್ಯವಿದೆ ಎಂದರು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಇನ್ನು ಹಲವು ಶಿಕ್ಷಣ ತಜ್ಞರು ಇದೇ ಸಂದರ್ಭದಲ್ಲಿ ಮಾತನಾಡಿದರು. ಪ್ರಮುಖವಾಗಿ ಸಂಶೋಧನಾ ಫಲಿತಾಂಶಗಳನ್ನು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಾಯೋಗಿಕ ಮಹತ್ವವಾದ ಚರ್ಚೆಗಳು ಕಂಡುಬಂದಿದ್ದು ವಿಶೇಷವಾಗಿತ್ತು.
ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಶಿಯನ್ಸ್ ಉಪಕ್ರಮವು ಶಿಕ್ಷಣ ತಜ್ಞರಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉದಯೋನ್ಮುಖ ಸವಾಲುಗಳನ್ನು ಚರ್ಚಿಸಲು ಹಾಗೂ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಗೆ ದೃಷ್ಟಿಕೋನಗಳನ್ನು ಕೊಡುಗೆ ನೀಡಲು ಇಂತಹ ವೇದಿಕೆಗಳನ್ನು ಶಿಸ್ತುಬದ್ಧವಾಗಿ ಪ್ರಯತ್ನಿಸಬೇಕು ಎಂದರು.
ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಹಲವಾರು ಶೈಕ್ಷಣಿಕ ಸಂಸ್ಥೆಗಳು, ಸಂಶೋಧಕರು ಮತ್ತು ಇತರ ಪಾಲುದಾರರ ನಡುವೆ ಹೆಚ್ಚಿನ ಸಹಯೋಗದ ಮೇಲೆ ಒತ್ತು ನೀಡುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಇದೇ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಎನ್. ತಿಪ್ಪೇಸ್ವಾಮಿ, ಎಬಿಆರ್‌ಎಸ್‌ಎಂ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶ್ರೀ ಗುಂತ ಲಕ್ಷ್ಮಣ್ ಜೀ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಖಜಾಂಚಿ ಪಿ.ಎಸ್.ವೆಂಕಟೇಶ್ ಬಾಬು, ಎಬಿಆರ್‌ಎಸ್‌ಎಂ ಕರ್ನಾಟಕ ರಾಜ್ಯ ಸಂಯೋಜಕ ಡಾ.ಶಿವಪೂಜಿ ಕೋಟಿ, ಡಾ. ದೇವರಾಜಪ್ಪ ಎಸ್, ಸಹ ಸಂಚಾಲಕ, ಡಾ. ನಿರ್ಮಲಾ ಕೆ, ಶೈಲಜಾ ಸಿ.ವಿ, ಡಾ.ಶಿವಮೂರ್ತಿ, ಪ್ರೊ. ರಾಜಶೇಖರ್ ಹೊಸಳ್ಳಿ, ಡಾ. ಮಾಲಿನಿ, ಡಾ. ಪೂರ್ಣಿಮಾ ಪಟ್ಟಣಶೆಟ್ಟಿ, ಡಾ. ಲೀಲಾವತಿ, ಅಭಿಷೇಕ್ ಕುಬ್ಸಾದ್, ಡಾ. ಅಶೋಕ್ ನಾಯಕ್, ಪ್ರೊ. ಎಲ್.ಎಚ್. ಶಿವಶಂಕರಪ್ಪ, ಡಾ. ರಾಧಾಕೃಷ್ಣ ಜಿ.ಎಸ್, ಡಾ. ಸತ್ಯಮೂರ್ತಿ ಗೂಗಿ, ಡಾ. ಈಶ್ವರ್ ಸಿರಿಗೇರಿ ಮತ್ತು ವಿವಿಧ ವಿವಿಗಳ ಕುಲಪತಿಗಳು, ಪ್ರಾಧ್ಯಾಪಕರು, ಸಂಶೋಧಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಮಾರ್ಗದರ್ಶಕರು, ಉಪನ್ಯಾಸಕರು ಮತ್ತಿತರರು ಸೇರಿದಂತೆ ಉಪಸ್ಥಿತರಿದ್ದರು.
ಜಯನಗರದ ಆರ್‌ವಿ ಶಿಕ್ಷಕರ ಕಾಲೇಜಿನಲ್ಲಿ ಆಯೋಜಿಸಿದ್ದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ಜೊತೆ ಸೇರಿ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ನ ಬ್ಯಾನರ್ ಅಡಿಯ ಸಹಯೋಗದೊಂದಿಗೆ ಶೈಕ್ಷಿಕ್ ಸಂವಾದವನ್ನು ಸಿಎಸ್ಐಆರ್ ಮತ್ತು ಡಿಎಸ್ಐಆರ್ ಮುಖ್ಯಸ್ಥೆ ಡಾ. ಶ್ರೀಮತಿ ಎನ್. ಕಲೈಸೆಲ್ವಿ, ಎಬಿಆರ್‌ಎಸ್‌ಎಂ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಶ್ರೀ ಗುಂತ ಲಕ್ಷ್ಮಣ್ ಜೀ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಖಜಾಂಚಿ ಪಿ.ಎಸ್.ವೆಂಕಟೇಶ್ ಬಾಬು, ಎಬಿಆರ್‌ಎಸ್‌ಎಂ ಕರ್ನಾಟಕ ರಾಜ್ಯ ಸಂಯೋಜಕ ಡಾ.ಶಿವಪೂಜಿ ಕೋಟಿ ಇನ್ನಿತರ ಗಣ್ಯರು ಉದ್ಘಾಟಿಸಿದರು.
ಬಲಿಷ್ಠ ಭಾರತದ ಕನಸು ಬಲಿಷ್ಠ ಯುವಜನತೆಯ ನಿರ್ಮಾಣದ ಮೇಲಿದ್ದು, ಯುವಜನತೆ ಹೆಚ್ಚು ಹೆಚ್ಚು ನೂತನ ಆವಿಷ್ಕಾರ, ತಂತ್ರಜ್ಞಾನಗಳನ್ನು ದೇಶದ ಒಳಿತಿಗಾಗಿ ವಿನಿಯೋಗವಾಗಬೇಕಿದೆ.
- ಡಾ. ಶ್ರೀಮತಿ ಎನ್. ಕಲೈಸೆಲ್ವಿ, ಡೈರೆಕ್ಟರ್ ಜನರಲ್ ಸಿಎಸ್ಐಆರ್ ಮತ್ತು ಕಾರ್ಯದರ್ಶಿ ಡಿಎಸ್ಐಆರ್, ನವದೆಹಲಿ
ಪ್ರಚಲಿತ ಸಂಶೋಧನೆ ಹಾಗೂ ಆವಿಷ್ಕಾರಗಳ ಮೂಲಕ ಭಾರತವನ್ನು ಸಶಕ್ತಗೊಳಿಸುವಲ್ಲಿ ಶಿಕ್ಷಣದ ನಾವೀನ್ಯತೆಗಳ ಮೂಲಕ ದೇಶದ ಪ್ರಗತಿ ಮತ್ತು ಭಾರತವನ್ನು ಸಬಲೀಕರಣಗೊಳಿಸುವಲ್ಲಿ ಶೈಕ್ಷಣಿಕ ವಲಯದ ಪಾತ್ರವು ವಿಕಸಿತ ಭಾರತದಿಂದ ಮಾತ್ರ ಅಭಿವೃದ್ಧಿ ಸಾಧ್ಯ.
- ಶ್ರೀ ಗುಂತ ಲಕ್ಷ್ಮಣ್ ಜೀ, ಎಬಿಆರ್‌ಎಸ್‌ಎಂ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ
ಸಂಶೋಧನಾ ಆಧಾರಿತ ಚಿಂತನೆಯ ಪ್ರೋತ್ಸಾಹಿಸುವ, ಯುವ ಪ್ರತಿಭೆಗಳನ್ನು ಪೋಷಿಸುವ ಹಾಗೂ ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಅಗತ್ಯಗಳ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುವ ಅಗತ್ಯತೆ ಹೊಂದಿದೆ.
2047ರ ವೇಳೆಗೆ ಉತ್ತಮ ಭಾರತವನ್ನು ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ಕೂಡ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೃಷಿ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಗ್ರ ಪ್ರಗತಿ ಸಾಧಿಸುವುದಾಗಿದೆ.



