ಅಲ್ಪಸಂಖ್ಯಾತರ ನೂತನ ಕಾಲೇಜು ಸ್ಥಾಪನೆ : ಶಾಸಕರಿಗೆ ಸನ್ಮಾನ

H.Mallikarjun
H.Mallikarjun - Kalyanasiri
1 Min Read
Establishment of New Minority College: MLA Felicitated




ಅಲ್ಪಸಂಖ್ಯಾತರ ನೂತನ ಕಾಲೇಜು ಸ್ಥಾಪನೆ : ಶಾಸಕರಿಗೆ ಸನ್ಮಾನ

ಜಾಹೀರಾತು
ಜಾಹೀರಾತು

ಕೊಪ್ಪಳ: ನಗರದಲ್ಲಿ ಅಲ್ಪಸಂಖ್ಯಾತ ಮಹಿಳೆಯರಿಗಾಗಿ ೫ ಕೋಟಿ ವೆಚ್ಚದಲ್ಲಿ ಮಹಿಳಾ ಕಾಲೇಜು ಸ್ಥಾಪನೆ ಮಾಡಲು ಭೂಮಿ ಪೂಜೆ ನೆರವೇರಿಸಿರುವದಕ್ಕೆ ಮಹಿಳಾ ಕಾಂಗ್ರೆಸ್ ಮೂಲಕ ಶಾಸಕ, ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಅವರು ಸನ್ಮಾನ ಮಾಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಇಚ್ಛಾಶಕ್ತಿ ಮತ್ತು ಬದ್ಧತೆಯಿಂದಾಗಿ ನೂತನ ಕಾಲೇಜು ಸ್ಥಾಪನೆಗೊಳ್ಳುತ್ತಿದ್ದು, ಹಿಂದುಳಿದ ಅಲ್ಪಸಂಖ್ಯಾತ ಮಹಿಳೆಯರನ್ನು ಶೈಕ್ಷಣಿಕವಾಗಿ ಮುಂದೆ ತರುವ, ತನ್ಮೂಲಕ ಅವರ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದು ಕಾಂಗ್ರೆಸ್ ಸರಕಾರ ನೂತನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸುಭದ್ರ ಮತ್ತು ಪ್ರಗತಿಪರ ಆಡಳಿತ ನೀಡುತ್ತಿದೆ.
ಮತ್ತೊಮ್ಮೆ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಸಹ ಜಿಲ್ಲೆಯ ಅಭಿವೃದ್ಧಿ ಒತ್ತು ನೀಡುವ ಭರವಸೆ ಇದ್ದು, ಪ್ರಸ್ತುತ ಕಾಲೇಜು ಸ್ಥಾಪನೆಗೆ ಅವರ ಸಹಕಾರವೂ ಇರುವದರಿಂದ ಅವರನ್ನು ಸಹ ಗೌರವಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶೈಕ್ಷಣಿಕ ಸುಧಾರಣೆ, ನೂತನ ಕಾಲೇಜು ಮತ್ತು ವಸತಿ ನಿಲಯಗಳ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಯ ಪ್ರಗತಿಗೆ ಶ್ರಮಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ, ಗಂಗಮ್ಮ ಚಿಕೆನಕೊಪ್ಪ, ಸೌಭಾಗ್ಯಲಕ್ಷಿ÷್ಮ ಗೊರವರ, ಮಂಜುನಾಥ ಜಿ. ಗೊಂಡಬಾಳ, ಅಮ್ಜದ್ ಪಟೇಲ್ ಅನೇಕರಿದ್ದರು.

Total Views: 0
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Share This Article