Adverse Effects of Factories
Poets' Gathering on Environmental Concern

ಕಾರ್ಖಾನೆಗಳಿಂದ ಆಗುವ ದುಷ್ಪರಿಣಾಮಗಳು
ಪರಿಸರ ಕಾಳಜಿ ಕವಿಗೋಷ್ಠಿ


ಗಂಗಾವತಿ: ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ ತಾಲೂಕು ಘಟಕದಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಗಸ್ಟ್-22 ಶನಿವಾರದಂದು ಮದ್ಯಾಹ್ನ 2-30 ಗಂಟೆಗೆ ಕವಿಗೋಷ್ಠಿ ನಡೆಯಲಿದೆ ಎಂದು ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕವಿಗೋಷ್ಠಿಯ ಉದ್ಘಾಟನೆಯನ್ನು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಮಾಡಲಿದ್ದು, ಅಧ್ಯಕ್ಷತೆಯನ್ನು ಎಸ್.ಕೆ.ಎನ್.ಜಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಮುಮ್ತಾಜ್ ಬೇಗಂ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಎನ್. ಶರಣಪ್ಪ ಮೆಟ್ರಿ, ನಾಗಭೂಷಣ ಅರಳಿ, ಎಸ್.ಕೆ.ಎನ್.ಜಿ ಕಾಲೇಜಿನ ಉಪನ್ಯಾಸಕರಾದ ಪವನಕುಮಾರ ಗುಂಡೂರು, ಸಾಹಿತಿ ಶರಣಪ್ಪ ತಳ್ಳಿ, ಪತ್ರಕರ್ತರಾದ ಪ್ರಸನ್ನ ದೇಸಾಯಿ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೈಲಾರಪ್ಪ ಬೂದಿಹಾಳ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ರುದ್ರೇಶ ಎಂ. ಆರ್ಹಾಳ ಭಾಗವಹಿಸಲಿದ್ಧಾರೆ.
ಕಾರ್ನಾಖನೆಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಪರಿಸರ ಕಾಳಜಿ ಕುರಿತು ಕವನ ವಾಚಿಸಬಹುದು. ಭಾಗವಹಿಸಲು ಇಚ್ಛಿಸುವವರು,
ಅಶೋಕ ಗುಡಿಕೋಟಿ-9972723406, ಸುರೇಶ ಕಲಾಪ್ರಿಯ-9611170560, ಮಂಜುನಾಥ ಹಾವರಿಗಿ-9972905111 ಇವರಲ್ಲಿ ಹೆಸರು ನೊಂದಾಯಿಸಲು ಕೋರಲಾಗಿದೆ.





