
Sunflower procurement under the Minimum Support Price scheme during the Kharif season: Registration centers opened.
ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ: ನೋಂದಣಿ ಕೇಂದ್ರ ಆರಂಭ

ಕೊಪ್ಪಳ, ಅಕ್ಟೋಬರ್ 05, (ಕರ್ನಾಟಕ ವಾರ್ತೆ): 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ ಗೆ ರೂ.8,343/- ರಂತೆ ಗರಿಷ್ಠ 13,413 ಮೆಟ್ರಿಕ್ ಟನ್ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಜಿಲ್ಲೆಯ ರೈತರಿಂದ ಖರೀದಿಸುವ ಕುರಿತು ಅಕ್ಟೋಬರ್ 3 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸೂರ್ಯಕಾಂತಿ ಖರೀದಿಗೆ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಖರೀದಿ ಕೇಂದ್ರಕ್ಕೆ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಅಳವಂಡಿ, ಕುಕನೂರು ತಾಲೂಕಿನ ಕುಕನೂರು ಖರೀದಿ ಕೇಂದ್ರಕ್ಕೆ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಮಂಡಲಗೇರಿ, ಯಲಬುರ್ಗಾ ತಾಲೂಕಿನ ಯಲಬುರ್ಗಾ ಖರೀದಿ ಕೇಂದ್ರಕ್ಕೆ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಬೇವೂರು, ಕಾರಟಗಿ ತಾಲೂಕಿನ ನಾಗನಕಲ್ ಖರೀದಿ ಕೇಂದ್ರಕ್ಕೆ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ನಾಗನಕಲ್, ಕುಷ್ಟಗಿ ತಾಲೂಕಿನ ಕುಷ್ಟಗಿ ಖರೀದಿ ಕೇಂದ್ರಕ್ಕೆ ಕೆಒಎಫ್ ಅಡಿಯಲ್ಲಿ ಒಜಿಸಿಎಸ್ ಬೇವೂರು ಖರೀದಿ ಕೇಂದ್ರ, ನೋಂದಣಿ ಏಜೆನ್ಸಿಯಾಗಿ ಪ್ರಾರಂಭಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಸೂರ್ಯಕಾಂತಿ ಖರೀದಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಯಲಬುರ್ಗಾದ ಬೇವೂರು ಹಾಗೂ ಕುಕನೂರಿನ ಮಂಡಲಗೇರಿ ಖರೀದಿ ಕೇಂದ್ರಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಯಲಬುರ್ಗಾ ಕೇಂದ್ರ ಕಚೇರಿ ಕುಕನೂರಿನ ಕಾರ್ಯದರ್ಶಿ ಸುರೇಶ ಬಿ.ತಂಗನೂರ ಮೊ.ಸಂ.9880886909, ಕೊಪ್ಪಳ ತಾಲ್ಲೂಕಿನ ಅಳವಂಡಿ ಖರೀದಿ ಕೇಂದ್ರಕ್ಕೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಮೊ.ಸಂ.9902224089, ಕುಷ್ಟಗಿ ಖರೀದಿ ಕೇಂದ್ರಕ್ಕೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಗುರುಸ್ವಾಮಿ ಎಸ್ ಗುಡಿ, ಮೊ.ಸಂ.9972054874 ಹಾಗೂ ಕಾರಟಗಿ ತಾಲೂಕಿನ ನಾಗನಕಲ್ ಖರೀದಿ ಕೇಂದ್ರಕ್ಕೆ ಕಾರಟಗಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಹರೀಶ ಪತ್ತಾರ ಮೊ.ಸಂ.9060893320 ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪ್ರತಿ ಎಕರೆಗೆ 04 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುತ್ತದೆ. ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಎಣ್ಣೆ, ಬೀಜಗಳ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು, ವಿಭಾಗೀಯ ಕಚೇರಿ ಕೊಪ್ಪಳ, ಮೊ.ಸಂ.9591812142 ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



