ಅ.09 ರಿಂದ ಕುಕನೂರು ಮಾರುಕಟ್ಟೆಯಲ್ಲಿ ವಾರಕ್ಕೆ ಎರಡು ದಿನ ಇ-ಟೆಂಡರ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
E-tenders to be held twice a week at Kukanur market starting October 9.

ಅ.09 ರಿಂದ ಕುಕನೂರು ಮಾರುಕಟ್ಟೆಯಲ್ಲಿ ವಾರಕ್ಕೆ ಎರಡು ದಿನ ಇ-ಟೆಂಡರ್

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಪ್ಪಳ, ಅಕ್ಟೋಬರ್ 05, (ಕರ್ನಾಟಕ ವಾರ್ತೆ): ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಲಬುರ್ಗಾದ ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಇ-ಟೆಂಡರ್ ಪ್ರಕ್ರಿಯೆ ಅಕ್ಟೋಬರ್ 09 ರಿಂದ ನಡೆಯಲಿದೆ.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಪ್ರತಿ ಸೋಮವಾರ ಮತ್ತು ಶುಕ್ರವಾರ, ವಾರದಲ್ಲಿ ಎರಡು ದಿನ ಇ-ಟೆಂಡರ್ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಲಾಟ್ ಎಂಟ್ರಿ, 12.30ರಿಂದ 1.30ರವರೆಗೆ ಟೆಂಡರ್ ದರ ಸಲ್ಲಿಕೆ ನಡೆಯಲಿದ್ದು, ಮಧ್ಯಾಹ್ನ 1.30ರ ನಂತರ ಟೆಂಡರ್ ತೆರೆಯುವ ಹಾಗೂ ದರ ಘೋಷಿಸುವ ಪ್ರಕ್ರಿಯೆ ನಡೆಯಲಿದೆ.
ರೈತರು ತಮ್ಮ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ತಂದು ಇ-ಟೆಂಡರ್ ಮೂಲಕ ಮಾರಾಟ ಮಾಡುವುದರಿಂದ ಸ್ಪರ್ಧಾತ್ಮಕ ಬೆಲೆ ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಉತ್ಪನ್ನಗಳನ್ನು ತಂದು ಮಾರಾಟ ಮಾಡುವಂತೆ ಸಮಿತಿ ಮನವಿ ಮಾಡಿದೆ.
ಸಮಿತಿಯಿಂದ ಲೈಸನ್ಸ್ ಪಡೆದ ದಲಾಲರು ಹಾಗೂ ಕೃಷಿ ಮಾರಾಟ ಇಲಾಖೆಯಿಂದ ಲೈಸನ್ಸ್ ಹೊಂದಿರುವ ಖರೀದಿದಾರರು ಇ-ಟೆಂಡರ್‌ನಲ್ಲಿ ಭಾಗವಹಿಸಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಯಲಬುರ್ಗಾ ಕೇಂದ್ರ ಕಚೇರಿ ಕುಕನೂರಿನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article