Leaders have submitted a request to Sri seeking a separate director's post for Chamarajanagar district from the state association.
ಚಾಮರಾಜನಗರ ಜಿಲ್ಲೆಗೆ ರಾಜ್ಯ ಸಂಘದಿಂದ ಪ್ರತ್ಯೇಕ ನಿರ್ದೇಶಕರ ಸ್ಥಾನ ನೀಡುವಂತೆ ಶ್ರೀ ಗಳಲ್ಲಿ ಮುಖಂಡರಿಂದ ಮನವಿ.

ವರದಿ: ಬಂಗಾರಪ್ಪ .ಸಿ .
ಹನೂರು : ನಾಡಪ್ರಭು ಕೆಂಪೇಗೌಡರ 517ನೇ ಜಯಂತೋತ್ಸವ ಅಂಗವಾಗಿ
ಯುವಕರಿಗೆ ಕೆಂಪೇಗೌಡರ ಮೌಲ್ಯಗಳೇ ಮಾದರಿಯಾಗಿದೆ ಎಂದು ಸೋಮನಾಥೇಶ್ವರ ಸ್ವಾಮೀಜಿ ತಿಳಿಸಿದರು.
ಹನೂರ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಅಯೋಜಿಸಿದ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರ್ನಾಟಕ ರಾಜ್ಯವನ್ನು ಹೊಗಳುತ್ತಾರೆ. ಎಲ್ಲರನ್ನು ಒಗ್ಗೂಡಿಸುವುದೇ ಸ್ವರ್ಗ. ಅಂತಹ ಕಾರ್ಯವನ್ನು ನಾಡಪ್ರಭು ಕೆಂಪೇಗೌಡರು 517 ವರ್ಷಗಳ ಹಿಂದೆಯೇ ಮಾಡಿ ತೋರಿಸಿದ್ದಾರೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಹೇಳಿದರು.
ಹನೂರು ಪಟ್ಟಣದ ಶ್ರೀ ನಾಡಪ್ರಭು ಕೆಂಪೇಗೌಡರ ವೃತ್ತದ ಆವರಣದಲ್ಲಿ ಪುಷ್ಪರ್ಚನೆ ಮಾಡುವ ಮೂಲಕ ನಾಡಪ್ರಭು ಕೆಂಪೇಗೌಡರ 517ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
“ಕೆಂಪೇಗೌಡರು ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಬೆಂಗಳೂರು ನಗರಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅವರ ದೂರದೃಷ್ಟಿ ವಿಶಾಲವಾಗಿತ್ತು. ಕೆರೆಕಟ್ಟೆಗಳು, ದೇವಾಲಯಗಳು ನಿರ್ಮಾಣದಲ್ಲಿ ಭಾವೈಕ್ಯತೆಯನ್ನು ಅನುಸರಿಸಿದ್ದರು.
ಅವರ ಆಡಳಿತದ ಮೌಲ್ಯಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು. ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಪ್ರತಿಯೊಬ್ಬರೂ ಅವರ ಜೀವನ ಚರಿತ್ರೆಯನ್ನು ಓದಬೇಕು” ಎಂದು ಸ್ವಾಮೀಜಿ ತಿಳಿಸಿದರು.
“ಕನ್ನಡ ನಾಡಿನಲ್ಲಿ ಕನಕದಾಸರು, ಬಸವಣ್ಣ, ಕೆಂಪೇಗೌಡರು ಸೇರಿದಂತೆ ಹಲವು ಮಹನೀಯರು ಜನಸೇವೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ್ದಾರೆ. ಅಂತಹವರ ಹೆಸರುಗಳು ಮಾತ್ರ ಇತಿಹಾಸದಲ್ಲಿ ಉಳಿಯುತ್ತದೆ. ಸ್ವಾರ್ಥಿಗಳ ಹೆಸರು ಉಳಿಯುವುದಿಲ್ಲ” ಎಂದು ಅವರು ಹೇಳಿದರು.
ಹನೂರು ಪಟ್ಟಣದಲ್ಲಿ ಪ್ರತಿವರ್ಷ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸುತ್ತಿರುವುದು ಶ್ಲಾಘನೀಯ. ಏಕತೆ ಇದ್ದರೆ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಒಳ್ಳೆಯ ಕಾರ್ಯ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ
ಶಾಸಕರಾದ ಎಂ ಆರ್ ಮಂಜುನಾಥ್ ಮಾತನಾಡಿ ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ ಎಂದರೆ ಅದಕ್ಕೆ ಮೂಲ ಕಾರಣ ನಾಡಪ್ರಭು ಕೆಂಪೇಗೌಡರು. ಅವರ ದೂರದೃಷ್ಟಿಯಿಂದಲೇ ಐ.ಟಿ-ಬಿ.ಟಿ ಕಂಪನಿಗಳು ಆರಂಭಗೊಂಡು ಇತರ ದೇಶಗಳಿಂದ ಉದ್ಯೋಗ ಅರಸಿ ಜನರು ಬಂದಿದ್ದಾರೆ ಅಂದಿನ ಕಾಲದಲ್ಲೆ
ಹಲವು ಪೇಟೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸಹ ಕೆಂಪೇಗೌಡರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ” ಎಂದರು
“ಅಜ್ಜಿಪುರ-ಎಲ್ಲೇಮಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡಲು ಸರ್ಕಾರದ ಮಟ್ಟಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ಒಂದು ವರ್ಷದೊಳಗೆ ವೃತ್ತವನ್ನು ಅಭಿವೃದ್ಧಿಪಡಿಸಿ ಕೆಂಪೇಗೌಡರ ಪುತ್ಥಳಿಯನ್ನು ಪೂಜ್ಯ ಸ್ವಾಮೀಜಿಗಳು, ಮಾಜಿ ಶಾಸಕರು ಹಾಗೂ ಸಮುದಾಯದವರ ಒತ್ತಾಸೆಯ ಮೇರೆಗೆ ನಿರ್ಮಾಣ ಮಾಡಲಾಗುವುದು” ಎಂದು ಶಾಸಕರು ಭರವಸೆ ನೀಡಿದರು.
ಕೆಂಪೇಗೌಡ ಜಯಂತಿಗೆ ಆಗಮಿಸಿದ
ಮಾಜಿ ಶಾಸಕ ಆರ್.ನರೇಂದ್ರರವರು ಮಾತನಾಡಿ ನಮ್ಮ ಜಿಲ್ಲೆಯು ಗಡಿಭಾಗದಲ್ಲಿದ್ದು.
ರಾಜ್ಯ ಒಕ್ಕಲಿಗರ ಸಂಘದಲ್ಲಿ ಸಾವಿರಾರು ಕೋಟಿ ಅನುದಾನವಿದೆ. ಆದರೆ ಚಾಮರಾಜನಗರ ಜಿಲ್ಲೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ . ಅವಿಭಜಿತ ಮೈಸೂರು-ಚಾಮರಾಜನಗರ ಜಿಲ್ಲೆಗಳಿಂದ ಮೂವರು ನಿರ್ದೇಶಕರು ಆಯ್ಕೆಯಾಗಿ ಹೋಗುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿನ ಸಮುದಾಯದವರ ಸಮಸ್ಯೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ,ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಿಂದಲೇ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬದಲಾವಣೆ ತರಬೇಕಾಗಿದೆ. ರಾಜ್ಯ ಒಕ್ಕಲಿಗರ ಸಂಸ್ಥೆಯ ವತಿಯಿಂದ ಹನೂರು ಭಾಗದಲ್ಲಿ ಶಾಲೆ ತೆರೆದು ವಸತಿ ನಿಲಯಗಳನ್ನು ನಿರ್ಮಾಣ ಮಾಡಬೇಕು” ಎಂದು ಸಲಹೆ ನೀಡಿ ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ವೇದಿಕೆ ಕಾರ್ಯಕ್ರಮದಲ್ಲಿ ಹೆಸರಾಂತ ವೈದ್ಯರು ಹಾಗೂ ಮುಖಂಡರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಮಯದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ , ಡಾ. ದತ್ತೇಶ್ ಕುಮಾರ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ನವನೀತ್ ಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್ ಪ್ರಧಾನ ಭಾಷಣಕಾರ ಕ್ಯಾತನಹಳ್ಳಿ ಶ್ರೀನಿವಾಸ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಗಂಗಾಧರ್ ನಿರ್ದೇಶಕರಾದ ಮಂಜೇಗೌಡ, ಮುಖಂಡರಾದ ನಟರಾಜು ಗೌಡ, ಸತೀಶ್ ಬೀಡನಹಳ್ಳಿ,ಟಿಹೆಚ್ಒ ಡಾ. ಪ್ರಕಾಶ್, ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ಡಾ. ಮಂಜುನಾಥ್, ಡಿವೈಎಸ್ಪಿ ಮೋಹನ್ ಕುಮಾರ್ ಇನ್ಸ್ಪೆಕ್ಟರ್ ಆನಂದಮೂರ್ತಿ ಸಬ್ ಇನ್ಸ್ಪೆಕ್ಟರ್ ವರ್ಷ, ಯುವಕರಾದ ಮಂಜೇಶ್ ,ಮಂಜುನಾಥ್. ಎಂ. ಮನು,ನಾಗೇಂದ್ರ, ಸಂತೋಷ್ ಕೆ ,ಮಾದೇಶ್,ಬಂಗಾರಪ್ಪ. ಅಭಿಲಾಷ್.ವೆಂಕಟೇಶ್, ಶಂಕರ್ ಎಮ್ . ಸರ್ಕಾರಿ ನೌಕರರು, ಸಮುದಾಯದ ಮುಖಂಡರು ,ಯುವಕರು ಸೇರಿದಂತೆ ಇನ್ನಿತರರು ಹಾಜರಿದ್ದರು.


