ಆರ್ಯವೈಶ್ಯ ಸಮಾಜದ ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆ: ಆಹ್ವಾನ ಪತ್ರಿಕೆ ಬಿಡುಗಡೆ.

H.Mallikarjun
H.Mallikarjun - Kalyanasiri
1 Min Read

Arya Vaishya Samaj's fifth annual Mantralaya Padayatra: Invitation letter released.

ಆರ್ಯವೈಶ್ಯ ಸಮಾಜದ ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆ: ಆಹ್ವಾನ ಪತ್ರಿಕೆ ಬಿಡುಗಡೆ.

ಜಾಹೀರಾತು

ಗಂಗಾವತಿ:ಸ್ಥಳೀಯ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ವತಿಯಿಂದ ಆಯೋಜಿಸಲಾಗಿರುವ ‘ಐದನೇ ವರ್ಷದ ಮಂತ್ರಾಲಯ ಪಾದಯಾತ್ರೆ’ಯ ಆಹ್ವಾನ ಪತ್ರಿಕೆಯನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದಲ್ಲಿ ಬಿಡುಗಡೆ ಮಾಡಲಾಯಿತು.
ಹುಣ್ಣಿಮೆಯ ಶುಭ ಸಂದರ್ಭದಲ್ಲಿ, ಪಾದಯಾತ್ರೆಯು ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ನೆರವೇರಲಿ ಎಂದು ಪ್ರಾರ್ಥಿಸಿ ವಿಶೇಷ ಸಂಕಲ್ಪ ಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಅವರ ಅನುಪಸ್ಥಿತಿಯಲ್ಲಿ.ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ನರಸಿಂಹ ಶ್ರೇಷ್ಠಿ, ಜಿ.ಆರ್.ಎಸ್. ಸತ್ಯನಾರಾಯಣ, ಚಿದಂಬರ ಸೇರಿದಂತೆ ಆರ್ಯವೈಶ್ಯ ಸಮಾಜದ ಅನೇಕ ಬಾಂಧವರು ಪಾಲ್ಗೊಂಡು ಭಕ್ತಿಭಾವ ಮೆರೆದರು.ಈ ಪಾದಯಾತ್ರೆಯು ಇದೇ ಬರುವ ದಿನಾಂಕ 19.07.2026ರಂದು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ.

Total Views: 0
Share This Article