ಜುಲೈ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮ

H.Mallikarjun
H.Mallikarjun - Kalyanasiri
1 Min Read

Measures taken for the distribution of rations for the month of July in accordance with the rules.
ಸಾಂದರ್ಭಿಕ ಚಿತ್ರ

ಜುಲೈ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆಗೆ ಕ್ರಮ

ಜಾಹೀರಾತು

ಕೊಪ್ಪಳ ಜುಲೈ 09, (ಕರ್ನಾಟಕ ವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ಜುಲೈ-2026ರ ಮಾಹೆಗೆ ನಿಯಮಾನುಸಾರ ಪಡಿತರ ವಿತರಣೆ ಮಾಡಲಾಗುವುದು.
ಎಎವೈ ಪಡಿತರ ಚೀಟಿಯಲ್ಲಿ 1 ರಿಂದ 3 ಸದಸ್ಯರಿರುವ ಪಡಿತರಚೀಟಿಗೆ 14 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 35 ಕೆ.ಜಿ ಆಹಾರಧಾನ್ಯ, 4 ಸದಸ್ಯರಿರುವ ಪಡಿತರ ಚೀಟಿಗೆ 19 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 40 ಕೆ.ಜಿ ಆಹಾರಧಾನ್ಯ, 5 ಸದಸ್ಯರಿರುವ ಪಡಿತರ ಚೀಟಿಗೆ 29 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 50 ಕೆ.ಜಿ ಆಹಾರಧಾನ್ಯ, 6 ಸದಸ್ಯರಿರುವ ಪಡಿತರ ಚೀಟಿಗೆ 39 ಕೆ.ಜಿ ಅಕ್ಕಿ 21 ಕೆ.ಜಿ ಜೋಳ ಒಟ್ಟು 60 ಕೆ.ಜಿ ಆಹಾರಧಾನ್ಯ,  7 ಸದಸ್ಯರಿರುವ ಪಡಿತರ ಚೀಟಿಗೆ 49 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 70 ಕೆ.ಜಿ ಆಹಾರಧಾನ್ಯ ಹಾಗೂ  8 ಸದಸ್ಯರಿರುವ ಪಡಿತರ ಚೀಟಿಗೆ 59 ಕೆ.ಜಿ ಅಕ್ಕಿ, 21 ಕೆ.ಜಿ ಜೋಳ ಒಟ್ಟು 80 ಕೆ.ಜಿ ಆಹಾರಧಾನ್ಯ ವಿತರಣೆ ಮಾಡಲಾಗುವುದು.
9 ಮತ್ತು ಹೆಚ್ಚಿನ ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ ಇದೇ ಅನುಪಾತದಲ್ಲಿ ಸದಸ್ಯರ ಅನುಗುಣವಾಗಿ ಪಡಿತರ ವಿತರಣೆ ಮಾಡಲಾಗುವುದು. ಕೇಂದ್ರ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 7 ಕೆ.ಜಿ ಅಕ್ಕಿ 3 ಕೆ.ಜಿ ಜೋಳ ರಂತೆ ಆಹಾರಧಾನ್ಯ ನೀಡಲಾಗುವುದು. ರಾಜ್ಯ ಸರ್ಕಾರದ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿಯಂತೆ ಆಹಾರಧಾನ್ಯ ವಿತರಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Total Views: 0
Share This Article