ಶ್ರೀ ಬಲಮುರಿ ಗಣೇಶ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವಕ್ಕೆ ಚುಂಚನಗಿರಿ ಶ್ರೀ ಗಳು ಆಗಮನ .

H.Mallikarjun
H.Mallikarjun - Kalyanasiri
1 Min Read
ಜಾಹೀರಾತು





The arrival of the Chunchanagiri Sris for the Kumbhabhishek festival of the Sri Balamuri Ganesh Temple.

ಶ್ರೀ ಬಲಮುರಿ ಗಣೇಶ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವಕ್ಕೆ ಚುಂಚನಗಿರಿ ಶ್ರೀ ಗಳು ಆಗಮನ .

ಜಾಹೀರಾತು

ವರದಿ: ಬಂಗಾರಪ್ಪ .ಸಿ.
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಲೀಲ್ಯಾಕ್ಸ್‌ ಅಸೋಸಿಯೇಷನ್ ವತಿಯಿಂದ ಶ್ರೀಬಲಮುರಿ ಗಣೇಶ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವ ಮತ್ತು 55ನೇ ವರ್ಷದ ಶ್ರೀ ಅಣ್ಣಮ್ಮ ದೇವಿ ಮಹೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 29ರಿಂದ ಮೇ 3ರವರೆಗೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಲೀಲಾಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಉಮೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಏ. 29 ರ ಬೆಳಿಗ್ಗೆ 10ಗಂಟೆಗೆ ಆದಿಚುಂಚನಗಿರಿ ಮಠದ ಶ್ರೀಶ್ರೀಶ್ರೀ ನಿರ್ಮಾಲನಂದನಾಥ ಸ್ವಾಮೀಜಿರವರು ಕುಂಭಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ದಿನೇಶ್ ಗುಂಡೂರಾವ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಏ.30ರಂದು ಬೆಳಿಗ್ಗೆ ಶ್ರೀಅಣ್ಣಮ್ಮದೇವಿಯನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು.

ಸಂಜೆ ಶ್ರೀಅಣ್ಣಮ್ಮದೇವಿಗೆ ವಿಶೇಷ ಅಲಂಕಾರ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಮೇ.1ರಂದು ಶುಕ್ರವಾರ ಸಂಜೆ 4 ರಿಂದ 6ಗಂಟೆಗೆ ಪ್ರತಿ ಮನೆ ಮುಂದೆ ರಂಗು
ರಂಗಿನ ರಂಗೋಲಿ ಬಿಡಿಸಿದರಿಗೆ ಲಾಟರಿ ಕೂಪನ್ ನೀಡಲಾಗುವುದು.

ಮೇ.2ರಂದು ಶ್ರೀ ಅಣ್ಣಮ್ಮದೇವಿ ವಿಶೇಷ ಅಲಂಕಾರ ನಡೆಸಲಾಗುವುದು.

ಮಧ್ಯಾಹ್ನ 12-30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.”

ಮೇ.3ರಂದು ಶ್ರೀಅಣ್ಣಮ್ಮದೇವಿಯನ್ನು ಹೂವಿನ ಪಲಕ್ಕಿಯೊಂದಿಗೆ ವಿವಿಧ ಕಲಾತಂಡಗಳ ಜೊತೆಯಲ್ಲಿ ಭವ್ಯ ಮೆರವಣಿಗೆಯು ಶೇಷಾದ್ರಿಪುರಂ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.

ಕಾಂಗ್ರೆಸ್ ಪಕ್ಷದ ಮಾಜಿ ಪಾಲಿಕೆ ಸದಸ್ಯರು, ಬ್ಲಾಕ್ ಅಧ್ಯಕ್ಷರುಗಳು, ಪ್ರಮುಖ ಮುಖಂಡರು ಕಾರ್ಯಕರ್ತರು ಹಾಗೂ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Total Views: 1
Share This Article