ಚೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ ಅವರಿಗೆ ‘ಉತ್ತಮ ಸೇವಕ ಸನ್ಮಾನ’

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Good Servant Award' for Assistant Executive Engineer Rangaswamy of the Chescom Department

ಚೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ ಅವರಿಗೆ ‘ಉತ್ತಮ ಸೇವಕ ಸನ್ಮಾನ’

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು: ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅತ್ಯಂತ ವೈಭವದ ಬಸವ ಜಯಂತಿ ಕಾರ್ಯಕ್ರಮದಲ್ಲಿ, ಹನೂರು ತಾಲ್ಲೂಕು ಚೆಸ್ಕಾಂ (CHESCOM) ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ರಂಗಸ್ವಾಮಿ ಅವರಿಗೆ ಅವರ ನಿರಂತರ ಸಾರ್ವಜನಿಕ ಸೇವೆ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ‘ಉತ್ತಮ ಸೇವಕ ಸನ್ಮಾನ’ ನೀಡಿ ಗೌರವಿಸಲಾಯಿತು. ತಾಲ್ಲೂಕು ಕೇಂದ್ರದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತಿ ಮಹೋತ್ಸವದ ವೇದಿಕೆಯಲ್ಲಿ ಪ್ರಮುಖ ಗಣ್ಯರು ಹಾಗೂ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಈ ಗೌರವ ಸಮರ್ಪಣೆ ನಡೆಯಿತು.

ರಂಗಸ್ವಾಮಿ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಸೇವೆಯನ್ನು ಶ್ಲಾಘಿಸಿದ ಗಣ್ಯರು: ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಹಾಗೂ ಗಣ್ಯರು, “ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ತತ್ವಕ್ಕೆ ಪ್ರಸ್ತುತ ದಿನಗಳಲ್ಲಿ ಅಧಿಕಾರಿಯಾಗಿಮಾದರಿಯಾಗಿದ್ದಾರೆ .

ಹನೂರು ತಾಲ್ಲೂಕಿನಲ್ಲಿ ವಿದ್ಯುತ್‌ ಸಂಪರ್ಕದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾ, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ, ಕಳೆದ 10 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು ಯಾವುದೇ ಆರೋಪಗಳಿಲ್ಲದೆ, ಇಲಾಖೆಯ ಕರ್ತವ್ಯದ ಜೊತೆಗೆ ಸಮಾಜ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಹಲವು ಸರ್ಕಾರಿ ಶಾಲೆಗಳಿಗೆ ಲ್ಯಾಪ್ಟಾಪ್, ಸ್ಮಾರ್ಟ್ ಟಿವಿ, ಸಮವಸ್ತ್ರ ಇತ್ಯಾದಿ ನೀಡುತ್ತಾ ಬಂದಿರುವುದಲ್ಲದೆ, ಹಲವು ಮಕ್ಕಳಿಗೆ ಶಾಲಾ ಶುಲ್ಕವನ್ನು ನೀಡುತ್ತಾ ಬಂದಿರುತ್ತಾರೆ.

ಹಲವಾರು ಅನಾಥಶ್ರಮಗಳಿಗೆ ದವಸಧಾನ್ಯಗಳು, ಅಗತ್ಯ ವಸ್ತುಗಳನ್ನು ನೀಡುತ್ತಾ ಬಂದಿರುತ್ತಾರೆ. ಅಧಿಕಾರಿ ರಂಗಸ್ವಾಮಿ ಅವರು ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ. ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹಗಲಿರುಳು ಶ್ರಮಿಸುವ ಇಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ಈ ಪ್ರಶಸ್ತಿ ಸಂದಿರುವುದು ಅತ್ಯಂತ ಸೂಕ್ತವಾಗಿದೆ” ಎಂದು ಶ್ಲಾಘಿಸಿದರು.
ಕೃತಜ್ಞತೆ ಸಲ್ಲಿಸಿದ ಅಧಿಕಾರಿ ರಂಗಸ್ವಾಮಿ:ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಗಸ್ವಾಮಿ ಅವರು, “ವಿಶ್ವಗುರು ಬಸವಣ್ಣನವರ ಜಯಂತಿಯ ಪವಿತ್ರ ದಿನದಂದು ಈ ಗೌರವ ಸಿಕ್ಕಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರ (ಜನರ) ಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ನನ್ನ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಹನೂರು ತಾಲ್ಲೂಕಿನ ಸಾರ್ವಜನಿಕರ ಸಹಕಾರದಿಂದ ಈ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. ಈ ಗೌರವವನ್ನು ನನ್ನ ಇಡೀ ಚೆಸ್ಕಾಂ ಇಲಾಖೆಗೆ ಅರ್ಪಿಸುತ್ತೇನೆ” ಎಂದು ಭಾವನಾತ್ಮಕವಾಗಿ ನುಡಿದರು.

ಈ ಸಂದರ್ಭದಲ್ಲಿ ಶಂಕರ್ ಬಿದರಿ IPS (rtrd) ರಾ.ಅ.ಭಾ.ವೀ.ಲಿಂ.ಮ.ಅಧ್ಯಕ್ಷರು ಬೆಂಗಳೂರು, ವೀಣಾ ಕಾಷಪ್ಪನವರ್ ರಾಷ್ಟ್ರಧ್ಯಕ್ಷರು ಅ.ಭಾ.ವೀ.ಲಿ.ಮಹಿಳಾ ಕಾಂಗ್ರೆಸ್ ಬಾಗಲಕೋಟೆ. ಮಂಜುನಾಥ್ ಶಾಸಕರು ಹನೂರು ವಿಧಾನಸಭೆ ಕ್ಷೇತ್ರ, ಪರಿಮಳನಾಗಪ್ಪ ಮಾಜಿ ಶಾಸಕರು ಹನೂರು ವಿಧಾನಸಭೆ ಕ್ಷೇತ್ರ, ದತ್ತೇಶ್ ಕುಮಾರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು, ನಿಶಾಂತ್ ಸಮಾಜ ಸೇವಕರು, ಅ.ಭಾ.ವಿ.ಲಿಂ.ಮಹಾಸಭೆಯ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ತಾಲ್ಲೂಕು ಮಟ್ಟದ ಪ್ರಮುಖ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು, ವಿವಿಧ ಮಠಾದೀಶ ಸ್ವಾಮೀಜಿ ರವರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದು, ಸನ್ಮಾನಿತ ಅಧಿಕಾರಿಗೆ ಶುಭ ಹಾರೈಸಿದರು.

Total Views: 0
Share This Article