“ಏನಾಯಿತು” ಮುಹೂರ್ತದೊಂದಿಗೆ ಚಿತ್ರೀಕರಣ ಆರಂಭ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Filming begins with the "What Happened" muhurat




“ಏನಾಯಿತು” ಮುಹೂರ್ತದೊಂದಿಗೆ ಚಿತ್ರೀಕರಣ ಆರಂಭ

ಜಾಹೀರಾತು


ಹುಬ್ಬಳ್ಳಿ :ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ತಯಾರಾಗಲಿ. ಇಲ್ಲಿನ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಸ್ವರ್ಣ ಗ್ರೂಪ್ ಕಂಪನಿ ಎಂಡಿ ಡಾ. ಸಿ.ಎಚ್.ವಿ.ಎಸ್.ವಿ ಪ್ರಸಾದ್ ಹೇಳಿದರು.


ಅವರು ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ನಡೆದ ವಿಸ್ಮಯ ವೆಂಚರ್ಸ್ ನಿರ್ಮಾಣದ “ಏನಾಯಿತು” ಕನ್ನಡ ಚಲನಚಿತ್ರಕ್ಕೆ ಕ್ಯಾಮೆರಾ ಚಾಲನೆ ನೀಡಿ ಉತ್ತಮ ಸದಬಿರುಚಿಯ ಚಿತ್ರಗಳು ಹೆಚ್ಚು ಹೊರಬರಬೇಕಿದೆ. ಉತ್ತರ ಕರ್ನಾಟಕದಲ್ಲಿ ಹಲವು ಕಲಾವಿದರು ತಂತ್ರಜ್ಞರು ಇದ್ದಾರೆ ಇವರಿಗೆಲ್ಲ ಇನ್ನಷ್ಟು ಅವಕಾಶ ಸಿಗಬೇಕಾಗಿದೆ ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಿನಿಮಾ ಕೆಲಸಗಳು ಹೆಚ್ಚು ನಡೆಯಬೇಕಿದೆ ಎಂದರು. ಕ್ಲಾಪ್ ಮಾಡಿದ ಸಿದ್ಧಾರೂಢ ಮಠ ಟ್ರಸ್ಟ್ ಚೇರ್ಮನ್ ಬಾಳು ಮಗಜಿಕೊಂಡಿ ಮಾತನಾಡಿ ಇಡೀ ಕುಟುಂಬದವರು ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ಹೊರಬರಲಿ ಎಂದರು. ಮುಖ್ಯ ಅತಿಥಿಗಳಾಗಿ ಎವಿಕೆ ಫೌಂಡೇಶನ್ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ. ರಾಮು ಮುಲಗಿ ಹಾಗೂ ನಾಯಕ ನಟ ಈಶಾನ್ ರಘುರಾಜನ್, ನಟಿ ಚೈತ್ರ ತೋಟದ್, ನಿರ್ದೇಶಕ ತಮನ್ನಾ, ಚಲನಚಿತ್ರ ಪತ್ರಕರ್ತ, ಪಿ.ಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ವಿನಾಯಕ ಶೆಟ್ಟಿ, ನವೀನ ಪಾಟೀಲ ಜೈನ್ ,ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಚಿತ್ರ ತಂಡದವರು ಪಾಲ್ಗೊಂಡಿದ್ದರು.
ಛಾಯಾಗ್ರಹಣ ಗೌರಿ ವೆಂಕಟೇಶ , ಕಥೆ ಡಾ.ಶೈಲಜಾ ಶರ್ಮ, ಸಾಹಿತ್ಯ ಸಂಭಾಷಣೆ-ಚಿತ್ರಕಥೆ ಈಶಾನ ರಘುರಾಜನ್, ಸಂಗೀತ ವಿ.ಮನೋಹರ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ನಿರ್ದೇಶನ ತಮನ್ನ ಅವರದಿದೆ. ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ , ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ ಎಂದು ನಿರ್ದೇಶಕ ತಮನ್ನ ತಿಳಿಸಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

Total Views: 0
Share This Article