
Good response to the “Our River – Our Responsibility” campaign: Cleanliness should not be a one-day idea: Jyoti


ನಮ್ಮ ನದಿ – ನಮ್ಮ ಹೊಣೆ” ಅಭಿಯಾನಕ್ಕೆ ಉತ್ತಮ ಸ್ಪಂದನೆ ಸ್ವಚ್ಚತೆ ಅನ್ನುವದು ಒಂದು ದಿನದ ಆಲೋಚನೆ ಆಗಬಾರದು : ಜ್ಯೋತಿ

ಕೊಪ್ಪಳ: ತಾಲೂಕಿನ ಐತಿಹಾಸಿಕ ಹುಲಿಗಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ “ನಮ್ಮ ನದಿ – ನಮ್ಮ ಹೊಣೆ” ಎಂಬ ಘೋಷಣೆಯಡಿ ತುಂಗಭದ್ರಾ ನದಿ ತಟದಲ್ಲಿ ಸ್ವಚ್ಛತಾ ಹಾಗೂ ಜಾಗೃತಿ ಅಭಿಯಾನವನ್ನು ಆರಂಭಿಸಲಾಯಿತು.
ಈ ಅಭಿಯಾನದಲ್ಲಿ ಅಂಗಳ ಟ್ರಸ್ಟ್‌ನ ಹಾಗೂ ವಿಸ್ತಾರ ಸಂಸ್ಥೆಯವರು ಸೇರಿ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ರವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕಾರ್ಯ ಒಂದು ದಿನದ ಅಭಿಯಾನವಾಗಿ ಉಳಿಯಬಾರದು. ಜನರು ಸ್ವಾಭಾವಿಕವಾಗಿ ಸೇರಿಕೊಂಡು ನಿರಂತರವಾಗಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ಭಾಗವಹಿಸಬೇಕು ಎಂಬ ಆಶಯ ತಮ್ಮದು,
ಪರಿಸರ ಉಳಿಸುವ ಮನೋಭಾವದಿಂದ ಎಲ್ಲರೂ ಕೈಜೋಡಿಸಿ
ನದಿ, ಪರಿಸರ ಮತ್ತು ಸಮಾಜವನ್ನು ಉಳಿಸುವ ಕೆಲಸ ಆಗಬೇಕು.
ಇದು ಇಲಾಖೆಗಳು, ಪ್ರಾಧಿಕಾರ, ಸಂಘಟನೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ನದಿಯನ್ನು ಉಳಿಸಲು ಸಾಧ್ಯ
“ಹುಲಿಗಿ ಜಾತ್ರಾ ಮಹೋತ್ಸವದಲ್ಲಿ ಆರಂಭವಾದ ಈ ಹೆಜ್ಜೆ ಮುಂದೆಯೂ ನಿರಂತರವಾಗಿ ನಡೆಯಲಿದೆ, ಜಾತ್ರೆ ನಂತರ ಬೃಹತ್ ಸ್ವಚ್ಚತಾ ಕಾರ್ಯ ಮಾಡಬೇಕಿದೆ ಎಂದರು.
ಇಲ್ಲಿ ಸರಿಯಾದ ಮಾಹಿತಿ ಫಲಕ ಹಾಕಬೇಕಿದೆ, ಅದರಲ್ಲಿ ಜನರು ಅಲ್ಲಿ ತೆಗೆದ ಬಟ್ಟೆಗಳನ್ನು ಹಾಕಲು ಪ್ರತ್ಯೇಕವಾಗಿ ದೊಡ್ಡ ದೋಣಿ ಆಕಾರದಲ್ಲಿ ಸ್ಥಳ ಮಾಡಬೇಕು, ಎಲ್ಲಾ ಕಸ ಹಾಕಲು ಡಬ್ಬಿಗಳಲ್ಲಿ ಹಾಕುವ ಹಾಗೆ ಮಾಡಬೇಕು, ಈ ನಿಟ್ಟಿನಲ್ಲಿ ಪ್ರಾಧಿಕಾರ ಮೊದಲ ಆದ್ಯತೆಯ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಲ್ಲದೆ ಸ್ಥಳೀಯ ಪೌರಕಾರ್ಮಿಕರು ಸಹ ಕೈಜೋಡಿಸಿ ಸಹಕರಿಸಿದರು.
ಕಾರ್ಯಕ್ರಮದ ವೇಳೆ “ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ – ಬಟ್ಟೆ ಚೀಲ ಬಳಸಿ”, “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ”, “ನದಿಗೂ ಜೀವಿಸುವ ಹಕ್ಕಿದೆ” ಎಂಬ ಘೋಷಣೆಗಳ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ನದಿಯನ್ನು ಕೇವಲ ನೀರಿನ ಮೂಲವಾಗಿ ಅಲ್ಲದೆ ದೇವಿಯಷ್ಟೇ ಪೂಜ್ಯವಾಗಿ ಕಾಣಬೇಕು ಎಂಬ ಸಂದೇಶ ನೀಡಲಾಯಿತು.
ಅಂಗಳ ಸಂಸ್ಥೆಯ ಜ್ಯೋತಿ ಹಿಟ್ನಾಳ ಮಾತನಾಡಿ, ತುಂಗಭದ್ರಾ ನದಿ ಇಂದು ಹೆಚ್ಚುತ್ತಿರುವ ಪ್ಲಾಸ್ಟಿಕ್ ಹಾಗೂ ಕಸದ ಸಮಸ್ಯೆಯಿಂದ ತನ್ನ ಸ್ವಚ್ಛತೆಯನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ನದಿ ತೀರದಲ್ಲಿ ಶೌಚಾಲಯ ವ್ಯವಸ್ಥೆಯ ಕೊರತೆ, ಕಸ ವಿಲೇವಾರಿ ವ್ಯವಸ್ಥೆಯ ಅಭಾವ ಹಾಗೂ ಸ್ವಚ್ಛತಾ ಸೌಲಭ್ಯಗಳ ಕೊರತೆ ಪರಿಸರಕ್ಕೆ ಹಾನಿಯಾಗುತ್ತಿರುವುದು ಅಭಿಯಾನದ ವೇಳೆ ಗಮನಿಸಲಾಯಿತು. ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ತಂಡದಲ್ಲಿ ಇದ್ದ ಎಲ್ಲರೂ ಸಂಸದ ಕೆ. ರಾಜಶೇಖರ ಹಿಟ್ನಾಳ ಮತ್ತು ಪ್ರಾಧಿಕಾರ ಸದಸ್ಯರನ್ನು ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನಾಗರತ್ನ, ಕಾವೇರಿ, ಕೆಂಚಪ್ಪ, ಸುಜಾತ, ಜ್ಯೋತಿ, ಶಂಕ್ರವ್ವ, ಕವಿತಾ, ಪಾರ್ವತಿ, ವಿಜಯಲಕ್ಷ್ಮಿ, ಅಲಸಾಬ್, ರವಿ ಅನೇಕರಿದ್ದರು.


