
"Consultation meeting of Lingayat religion of Basavadi Sharan on 28th"


ಬೀದರ್: ದಿನಾಂಕ 28/06/2026ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಬಸವ ಮಹಾಮನೆ, ಬಸವ ಧರ್ಮ ಪೀಠ ಬಸವಕಲ್ಯಾಣದಲ್ಲಿ “ಬಸವಾದಿ ಶರಣರ ಲಿಂಗಾಯತ ಧರ್ಮದ ಸಮಾಲೋಚನೆ ಸಭೆ” ಬಸವ ಧರ್ಮ ಪೀಠದ ರಾಷ್ಟ್ರೀಯ ಬಸವ ದಳ ಮತ್ತು ಬಸವ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ರಾಜ್ಯದಂತ ಬಸವಾಭಿಮಾನಿಗಳು ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಸಮಾಲೋಚನೆ ಸಭೆ ನೆರವೇರಿಸಬೇಕು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಹೋರಾಟ ರೂಪು ರೇಷ ತಯ್ಯಾರಿ ಮಾಡಲು ಮತ್ತು ಬಸವ ತತ್ವ ಸಿದ್ದಾಂತ ಪ್ರಚಾರ ಮಾಡಲು ಯಾವ ರೀತಿ ಕಾರ್ಯಕ್ರಮಗಳು ಹಾಕಿಕೊಳ್ಳಬೇಕು ಎನ್ನುವ ಅತಿ ಮುಖ್ಯ ಚರ್ಚೆ ನಡೆಸಲಾಗುತ್ತದೆ.
ರಾಜ್ಯದಂತೆ ಬಸವಾದಿ ಶರಣರ ಮತ್ತು ಲಿಂಗಾಯತ ಧರ್ಮದ ಮಠಾಧಿಪತಿಗಳು, ಪೂಜ್ಯರು, ಮಾತಾಜಿಯವರು ಮತ್ತು ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.
ಆದರಿಂದ ಬೀದರ ಜಿಲ್ಲೆಯ ಸಮಸ್ತ ಬಸವಾದಿ ಶರಣರ ಪೂಜ್ಯರು, ಮಠಾಧಿಪತಿಗಳು, ಮಾತೆಯವರು ಮತ್ತು ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ವಿಚಾರಗಳು ಹಂಚಿಕೊಳ್ಳಬೇಕು ಎಂದು ಎಲ್ಲರಲ್ಲಿ ವಿನಂತಿ. ಎಂದು ಪ್ರಕಟಣೆಯ ಮೂಲಕ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕ, ಶ್ರೀ ಶ್ರೀಕಾಂತ ಸ್ವಾಮಿ, ತಿಲಿಸಿದ್ದಾರೆ.
