ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಕೆ

H.Mallikarjun
H.Mallikarjun - Kalyanasiri
3 Min Read
Installation of speed breakers on the national highway
 

ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಕೆ

ಜಾಹೀರಾತು

 

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು : ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ – ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಮೋಟಗಿ ತೋಟ ಶಾಲೆಯ 9 10ನೇ ತರಗತಿವರೆಗೆ ಆರಂಭ ಮೇಲ್ದರ್ಜೆ ಹಾಗೂ ರಸ್ತೆ-ಗಟಾರ್ ನೈರ್ಮಲ್ಯಕ್ಕೆ ನಿವಾಸಿಗಳ ಆಗ್ರಹ

ಅಥಣಿ ತಾಲೂಕಿನ ಶಿವಯೋಗಿ ನಗರದ ಮೂಲಕ ಹಾದುಹೋಗುವ ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಅಭಾವ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಜೀವಭಯದಲ್ಲೇ ಕಾಲ ಕಳೆಯುವಂತಾಗಿದೆ.

​ಅಪಘಾತಗಳ ಭಯ – ಸ್ಪೀಡ್ ಬ್ರೇಕರ್ ಅಳವಡಿಕೆಗೆ ಆಗ್ರಹ:
ಶಿವಯೋಗಿ ನಗರದ ಬಳಿ ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. ಇಲ್ಲಿ ‘ಮೋಟಗಿ ತೋಟ ಶಾಲೆ’ಯಿದ್ದು, ನಿತ್ಯ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ರಸ್ತೆಯನ್ನು ದಾಟಬೇಕಾಗಿದೆ.

ದೃಶ್ಯಾವಳಿಯಲ್ಲಿ ನೀವು ನೋಡಬಹುದು

ಆದರೆ ಇಲ್ಲಿ ಯಾವುದೇ ವೇಗ ನಿಯಂತ್ರಕಗಳು (ಸ್ಪೀಡ್ ಬ್ರೇಕರ್) ಇಲ್ಲದಿರುವುದರಿಂದ ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿ, ಹಲವರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಜೀವ ರಕ್ಷಣೆಗಾಗಿ ತಕ್ಷಣವೇ ಇಲ್ಲಿ ರೋಡ್ ಬ್ರೇಕರ್ ಅಳವಡಿಸಬೇಕಿದೆ.
ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿ ಪ್ರಾರಂಭಕ್ಕೆ ಮನವಿ:

ಶಿವಯೋಗಿ ನಗರ ಹಾಗೂ ಸುತ್ತಮುತ್ತಲಿನ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಅನುಕೂಲಕ್ಕಾಗಿ ಪ್ರಸ್ತುತ ಇರುವ ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿಗಳನ್ನು ನೂತನವಾಗಿ ಆರಂಭಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ. ಇದರಿಂದ ಹೆಣ್ಣುಮಕ್ಕಳು ಹಾಗೂ ದೂರದ ಶಾಲೆಗಳಿಗೆ ತೆರಳಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ತಮ್ಮದೇ ಬಡಾವಣೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ.
​ರಸ್ತೆ ಮೇಲೆ ಹರಿಯುವ ಕೊಳಚೆ ನೀರು – ಸ್ವಚ್ಛತೆಯ ಅಭಾವ:
ಬಡಾವಣೆಯಲ್ಲಿ ಸೂಕ್ತ ರಸ್ತೆಗಳು ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿ ಗಟಾರ್ ಅನ್ನು ರಸ್ತೆಯ ಒಂದು ಬದಿಯಲ್ಲಿ ಮಾತ್ರ ನಿರ್ಮಿಸಲಾಗಿದ್ದು, ಎರಡೂ ಬದಿಗಳಲ್ಲಿ ಶಾಶ್ವತ ಗಟಾರ್ ಇಲ್ಲದಿರುವುದರಿಂದ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇಡೀ ರಸ್ತೆ ಗಲೀಜಿನಿಂದ ಕೂಡಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
​ಅಸಮರ್ಪಕ ಬೀದಿ ದೀಪಗಳು:
ಬಡಾವಣೆಯ ಕೆಲವೊಂದು ಕಡೆ ಮಾತ್ರ ಬೀದಿ ಲೈಟ್‌ಗಳನ್ನು ಅಳವಡಿಸಲಾಗಿದ್ದು, ಇನ್ನು ಹಲವು ಭಾಗಗಳಲ್ಲಿ ಕತ್ತಲು ಆವರಿಸಿದೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಸಂಚರಿಸಲು ಸಾರ್ವಜನಿಕರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

​ಸ್ಥಳೀಯ ನಿವಾಸಿಗಳ ಮಾತು:
ಶಿವಯೋಗಿ ನಗರದ ನಿವಾಸಿಗಳಾದ ಮೈಬೂಬ್ ಭಗವಾನ್ ಹಾಗೂ ಇರ್ಷಾದ್ ಮುಕ್ಕೇರಿ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ವೇಗಕ್ಕೆ ಮಿತಿ ಇಲ್ಲದೆ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ‘ಸ್ಪೀಡ್ ಬ್ರೇಕರ್’ ಅಳವಡಿಸಬೇಕು. ಮೋಟಗಿ ತೋಟ ಶಾಲೆಯಲ್ಲಿ 9 ಮತ್ತು 10ನೇ ತರಗತಿಗಳನ್ನು ಆರಂಭಿಸಬೇಕು. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿ ನೈರ್ಮಲ್ಯ ಕಾಪಾಡಬೇಕು ಹಾಗೂ ಎಲ್ಲಾ ಭಾಗಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಬೇಕು” ಎಂದು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
​ಸಂಬಂಧಪಟ್ಟ ತಾಲೂಕು ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಶಿವಯೋಗಿ ನಗರದ ಈ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.

ತಾಲೂಕ ಸಂಬಂಧಪಟ್ಟ ಅಧಿಕಾರಿಗಳು ತಾಲೂಕಾ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಶಿಕ್ಷಣ ಸಚಿವರು ಸಾರಿಗೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ರಾಜ್ಯಪಾಲರು ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಶಾಸಕರು ಶಿವಯೋಗಿ ನಗರದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಅಥವಾ ಯಥಾ ಸ್ಥಿತಿ ಮುಂದುವರಿಸುತ್ತಾರೆ

​ವರದಿ: ವಿಶೇಷ ವರದಿಗಾರರು, ಮಹೇಶ್ ಶರ್ಮಾ

Total Views: 0
Share This Article