
Daytime robbery at Gangavathi bus stand under the pretext of toilet: Passengers outraged

ಗಂಗಾವತಿ ಬಸ್ ನಿಲ್ದಾಣದಲ್ಲಿ ಶೌಚಾಲಯ ನೆಪದಲ್ಲಿ ಹಗಲು ದರೋಡೆ: ಪ್ರಯಾಣಿಕರ ಆಕ್ರೋಶ

ಗಂಗಾವತಿ. ಜೂನ್ 11: ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯದಲ್ಲಿ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದು ಪ್ರಯಾಣಿಕರ ಮೇಲೆ ಹಗಲು ದರೋಡೆ ನಡೆಸಿದಂತಾಗಿದೆ ಎಂದು ಕರವೇ ಟಿ.ಎ.ನಾರಾಯಣಗೌಡ ಬಣದ ಗಂಗಾವತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ ಆರೋಪಿಸಿದ್ದಾರೆ.
ಬಸ್ ನಿಲ್ದಾಣಕ್ಕೆ ಆಗಮಿಸುವ ಮಹಿಳೆಯರು, ವೃದ್ಧರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಶೌಚಾಲಯ ಬಳಸಲು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಈಗಾಗಲೇ ಸಾಕಷ್ಟು ಬಾರಿ ಡಿಪೋ ಮ್ಯಾನೇಜರ್ ಗೆ ಮನವಿಯನ್ನು ಕೊಟ್ಟರು ಇದರ ಬಗ್ಗೆ ತನಿಖೆ ಮಾಡಿಲ್ಲಾದ್ರೇ ಇವರು ಕೂಡ. ಶಾಮಿಲ್ ಇದ್ದಾರೆ ಎಂದು ಸಾರ್ವಜನಿಕರಿಗೆ ಅನುಮಾನ ಇದೆ ಆದಕಾರಣ ದಯವಿಟ್ಟು ಮೂಲಭೂತ ಸೌಲಭ್ಯವಾಗಿರುವ ಶೌಚಾಲಯವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿರುವ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರವೇ ಗಂಗಾವತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.
