
Karnataka State Farmers' Association staged a protest demanding the repair of the clean drinking water unit.
ಶುದ್ದ ಕುಡಿಯುವ ನೀರಿನ ಘಟಕವನ್ನು ಸರಿ ಪಡಿಸುವಂತೆ ಆಗ್ರಹಿಸಿ ಕಾರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನೆಡೆಸಿದ್ರು

ಕೃಷ್ಣರಾಜಪೇಟೆ ತಾಲ್ಲೂಕಿನ ಗಡಿ ಗ್ರಾಮವಾದ ಆನೆಗೊಳ ಗ್ರಾಮದಲ್ಲಿ ಇರುವ ಶುದ್ದು ಕುಡಿಯುವ ನೀರಿನ ಘಟಕವು ಕಳೆದ 20 ದಿನದಿಂದ ಕೆಟ್ಟು ನಿಂತಿದ್ದು ಇದನ್ನು ಸರಿ ಪಡಿಸಿವಂತೆ ಆಗ್ರಹಿಸಿ ಆನೆಗೊಳ ಪಂಚಾಯತಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ವಿರುದ್ದ ಘೋಷಣೆ ಕೋಗಿ ಪ್ರತಿಭಟನೆ ನೆಡೆಸಿದ್ರು..
ಕಾರ್ನಾಟಕ ರಾಜ್ಯ ರೈತ ಸಂಘ ಆನೆಗೂಳ ಘಟಕದ ಅಧ್ಯಕ್ಷ ಚಿಕ್ಕತರಹಳ್ಳಿ ಮಂಜೇಗೌಡ ಸದ್ಯಸ್ಯ ಪುನೀತ್ ಮಾತನಾಡಿ ಆನೆಗೊಳ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಶುದ್ದ ಕುಡಿಯುವ ನೀರಿನ ಘಟಕವು ಕೆಲ ದಿನದಿಂದ ಕೆಟ್ಟು ನಿಂತಿದ್ದು ಇದನ್ನು ಸರಿ ಪಡಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅದಿಕಾಗಳಿಗೆ ತಿಳಿಸಿದ್ರು ಯಾವುದೇ ಪ್ರಯೋಜನ ಆಗಿಲ್ಲ ಅದಲ್ಲದೆ ದಿನ ನಿತ್ಯದ ಶುದ್ದ ಕುಡಿಯುವ ನೀರಿನ ಘಟದಕ್ಕೆ ಮಹಿಳೆ ಮಕ್ಕಳು ನೀರು ಪಡೆಯುವು ಬರುತ್ತಾರೆ ಆದರೆ ನೀರಿನ ಘಟಕದ ಎದುರು ಮಾಂಸಹಾರದ ಪಾಸ್ ಪುಡ್ ಹೋಟೇಲ್ ಹಾಕುವುದರಿಂದ ಇಲ್ಲಿ ರಾತ್ರಿಯಾದ್ರೆ ಸಾಕು ಮದ್ಯ ಸೇವೆನೆ ಘಟಕ ಮತ್ತು ಮೂತ್ರವಿಸರ್ಜನಾ ಘಟಕವಾಗಿ ಪರಿವರ್ತನೆ ಆಗುತ್ತಿದೆ ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಘಟವನ್ನು ಸರಿ ಪಡಿಸಿ ಸುತ್ತಲೂ ಸ್ವಚ್ಚತೆ ಪಡಿಸಿ ಇಲ್ಲಿ ಯಾರು ಮದ್ಯಪಾನ, ಮತ್ತು ಮೂರ್ತವಿಸರ್ಜನೆ ಮಾಡದಂತೆ, ಮತ್ತು ಪಕ್ಕದಲ್ಲೇ ಹೋಟೇಲ್ ಹಾಕದಂತೆ ನಾಮಫಲಕ ಅಳಿವಡಿಸಿವಂತೆ ಆಗ್ರಹಿಸಿ ಆಕ್ರೋಷ ವೈಕ್ತಪಡಿಸಿದ್ರು…
ರೈತ ಸಂಘದ ಆನೆಗೊಳ ಘಟಕದ ಅಧ್ಯಕ್ಷ ಚಿಕ್ಕತರಹಳ್ಳಿ ಮಂಜೇಗೌಡ, ಕಾರ್ಯದರ್ಶಿ ಸುಮಾ ಹರೀಶ್, ಘಟಕದ ಉಸ್ತುವಾರಿ ಆನೆಗೊಳ ಮಂಜೇಗೌಡ, ಸದಸ್ಯರಾದ ಪುನೀತ್, ಗೋವಿಂದೇಗೌಡ್ರು, ಕಾಂತರಾಜು, ಪುರುಷೋತ್ತಮ್, ಪುಟ್ಟರಾಜು, ಕುಮಾರ್, ಸೊಂಬಣ್ಣ, ಅಂಚೇಬೀರನಹಳ್ಳಿ ಮಂಜುನಾಥ್, ಮತ್ತು ಆನೆಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರುಗಳು ಇದ್ದರು..
ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ
