ಯುವಕ ಕಾಣೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Missing youth: Public urged to help find him




ಯುವಕ ಕಾಣೆ: ಪತ್ತೆಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ

ಜಾಹೀರಾತು


ಕೊಪ್ಪಳ ಮೇ 30 (ಕರ್ನಾಟಕ ವಾರ್ತೆ): ತುಮಕೂರಿನ ಶಿರಣಿ ಬಿಲ್ಡಿಂಗ್ ಉಪ್ಪಾರಹಳ್ಳಿ ರೈಲ್ವೆ ಗೇಟ್ ಹತ್ತಿರದ ನಿವಾಸಿ ನಿರಂಜನ ತಂದೆ ರಾಮಕುಮಾರ ಎಂಬ ಯುವಕ ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸುವಂತೆ ಗದಗ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
 ನಿರಂಜನ ತಂದೆ ರಾಮಕುಮಾರ ಎಂಬ ಯುವಕನು 2026ರ ಫೆಬ್ರವರಿ 15 ರಂದು ವಿಜಯಪುರದಿಂದ ಅರಸೀಕೆರೆಗೆ ವಿಜಯಪುರ-ಮಂಗಳೂರು ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿಕೊಂಡು ಬರುವಾಗ ರೈಲು ಗದಗ ನಿಲ್ದಾಣದಲ್ಲಿ ನಿಂತಾಗ ರೈಲಿನಿಂದ ಇಳಿದು ಹೋಗಿ ಕಾಣೆಯಾಗಿದ್ದಾನೆ ಎಂದು ಕಾಣೆಯಾದ ವ್ಯಕ್ತಿಯ ಅಜ್ಜ ದೂರು ನೀಡಿದ್ದು, ಗದಗ ರೈಲ್ವೆ ಪಿ. ಎಸ್ ಗುನ್ನ ನಂ 08/2026 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ: ನಿರಂಜನ ತಂದೆ ರಾಮಕುಮಾರ ವಯಸ್ಸು 29 ವರ್ಷ, 5 ಅಡಿ ಎತ್ತರ, ಗೋದಿ ಗೆಂಪು ಮೈ ಬಣ್ಣ, ಕೊಲು ಮುಖ, ನೀಟಾದ ಮೂಗು, ತಲೆಯಲ್ಲಿ ಕಪ್ಪು ಕೂದಲು, ಎದೆಯ ಮೇಲೆ ಆಂಕರ ಲೋಗೊ ಅಚ್ಚೆ ಹಾಕಿಸಿರುತ್ತಾನೆ ಹಾಗೂ ವ್ಯಕ್ತಿಗೆ ಕನ್ನಡ ಹಿಂದಿ ಬಾಷೆ ಓದಲು ಬರೆಯಲು ಬರುತ್ತದೆ. ವ್ಯಕ್ತಿಯು ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ ಮತ್ತು ಬಿಳಿ ಮತ್ತೆ ಬೂದು ಬಣ್ಣದ ಚೌಕಳಿವುಳ ತುಂಬು ತೋಳಿನ ಶರ್ಟ ಧರಿಸಿರುತ್ತಾನೆ.
 ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದುಬಂದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ನಂ 08372-278744 ಅಥವಾ ಮೊ ನಂ.9480802128 ಅಥವಾ ಇಮೇಲ್ gadagrly@Ksp.gov.in ಮತ್ತು ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ನಂ.080-22871291 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Total Views: 0
Share This Article