ಕಿರ್ಲೋಸ್ಕರ್ ನಿಂದ ಹೈಟೆಕ್ ಶೌಚಾಲಯ ನಿರ್ಮಾಣ

H.Mallikarjun
H.Mallikarjun - Kalyanasiri
1 Min Read

ಕಿರ್ಲೋಸ್ಕರ್ ನಿಂದ ಹೈಟೆಕ್ ಶೌಚಾಲಯ ನಿರ್ಮಾಣ

ಜಾಹೀರಾತು

ಕೊಪ್ಪಳ: ಶಾಲಾ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ತಾಲೂಕಿನ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ಹೈಟೆಕ್ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಉದ್ಘಾಟನೆ ಇಂದು ಗುರುವಾರ ಜರುಗಿತು.

ಶೈಕ್ಷಣಿಕ ವರ್ಷ ಆರಂಭವಾಗಿದ್ದರಿAದ ಇದೇವೇಳೆ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ವಿತರಿಸಲಾಯಿತು. ಬೆಂಗಳೂರಿನ ಪೀಪಲ್ ಫಾರ್ ಪೀಪಲ್ ಟ್ರಸ್ಟ್ ಇವರು ಕೊಡ ಮಾಡಿದ ಮಕ್ಕಳ ದೈಹಿಕ ಹಾಗೂ ಮಾನಸಿಕ ಕಸರತ್ತಿಗೆ ಪೂರಕವಾದ ಆಟದ ಸಾಮಗ್ರಿಗಳಿಗೂ ಚಾಲನೆ ನೀಡಲಾಯಿತು. ಮಕ್ಕಳಿಗಾಗಿ ಈ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಹಕರಿಸಿದ ಕಿರ್ಲೊಸ್ಕರ್ ಕಂಪನಿಯ ಅಧಿಕಾರಿಗಳು, ಪೀಪಲ್ ಫಾರ್ ಪೀಪಲ್ ಟ್ರಸ್ಟ್ ಬೆಂಗಳೂರು, ಶಾಲಾ ಅಭಿವೃದ್ಧಿ ಸಮಿತಿಯವರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪುರ ಪ್ರಮುಖರಿಗೆ ಎಸ್ ಡಿ ಎಂ ಸಿ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ ಮತ್ತು ಯುವ ಧುರೀಣರಾದ ಹುಲ್ಲೇಶ್ ಕುರಿ ಅವರು ಅಭಿನಂದಿಸಿದರು.

ಕಿರ್ಲೊಸ್ಕರ್ ಪೇರಸ್ ಗ್ರಾಮೀಣಾಭಿರುದ್ಧಿ ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಕಿರಣ್, ಉದ್ದವ್ ಕುಲಕರ್ಣಿ, ಪ್ರಕಾಶ್, ಗ್ರಾ.ಪಂ. ಆಡಳಿತ ಅಧಿಕಾರಿ ಜಗನಾಥ್ ಜೋತಗೊಂಡ, ಅಭಿವೃದ್ಧಿ ಅಧಿಕಾರಿ ಗೀತಾ ಕುಮಾರಿ, ಸರ್ವೋದಯ ಸಂಸ್ಥೆಯ ನಾಗರಾಜ ದೇಸಾಯಿ, ಅಗಳಕೇರಿ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಮಂಜುನಾಥ್ ಕುರಿ, ಗ್ರಾಮದ ಹಿರಿಯ ಧುರೀಣರಾದ ಸುರೇಶ್ ಪಾಟೀಲ್, ಉದ್ಯಮಿ ಗಿರೀಶ್ ಹಿರೇಮಠ್, ಯುವ ಧುರೀಣರಾದ ರಾಘವೇಂದ್ರ ಜೋಷಿ, ಗ್ರಾ.ಪಂ.ಸದಸ್ಯರಾದ ಹಾಲಪ್ಪ ತೋಟದ್, ಮುದ್ದಪ್ಪ ಗೊಂದಿಹೊಸಳ್ಳಿ, ಮುರಳಿಧರ, ಹುಲ್ಲೇಶ್ ಕುರಿ, ಪಾಲಕ-ಪೋಷಕರು, ಎಸ್ ಡಿ ಎಂಸಿ ಉಪಾಧ್ಯಕ್ಷರಾದ ರೇವತಿ, ಸದಸ್ಯರುಗಳಾದ ಹುಲುಗಪ್ಪ, ರಾಮಾಲೆಪ್ಪ, ಮೀನಾಕ್ಷಿ, ವಿಜಯಮ್ಮ, ಹುಲಿಗೆಮ್ಮ, ಲಕ್ಷ್ಮೀದೇವಿ, ರೇಣುಕಾ, ಲಕ್ಷ್ಮವ್ವ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಇದ್ದರು.

Total Views: 1
Share This Article