
490 crore grant for Uduthore Reservoir Project: MR Manjunath

ಉಡುತೊರೆ ಜಲಾಶಯ ಯೋಜನೆಗೆ 490ಕೋಟಿ ಅನುದಾನ : ಎಮ್ ಆರ್ ಮಂಜುನಾಥ್

ವರದಿ: ಬಂಗಾರಪ್ಪ .ಸಿ.
ಹನೂರು: ರಾಜ್ಯ ಸಚಿವ ಸಂಪುಟದಲ್ಲಿ ಹನೂರು ವಿಧಾನ ಸಭಾಕ್ಷೇತ್ರದ ನೀರಿಗಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನ ಉಡುತೊರೆ ಜಲಾಶಯ ಯೋಜನೆಗೆ 490 ಕೋಟಿ ರೂ.ಅನುದಾನ ನೀಡಿದ್ದು ಇನ್ನೂ ಒಂದುವರೆ ತಿಂಗಳ ಅವಧಿಯಲ್ಲಿ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಶಾಸಕರು ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಇಂಜಿನಿಯರ್ ಮಹೇಶ್ ಮತ್ತು ತಂಡದೊಡನೆ ಸ್ಥಳ ವೀಕ್ಷಣೆ ಮಾಡಿ ಕೆರೆಗೆ ನೀರು ತುಂಬಿಸುವ ಅಚ್ಚುಕಟ್ಟು ಪ್ರದೇಶಗಳು ಮತ್ತು ಅರಣ್ಯ ಪ್ರದೇಶದಲ್ಲಿ ಬರುವಂತಹ ಕೆಲವು ಮಾರ್ಗಗಳನ್ನು ಹಾಗೂ ನೀರಿನ ಚೇಂಬರ್ ಗಳ ಸ್ಥಳಗಳನ್ನು ಖುದ್ದು ಬೇಟಿ ನೀಡಿ ಪರಿಶೀಲನೆ ನಡೆಸಿ ಶಾಸಕರು ಮಾತನಾಡಿದರು.
ಸರ್ಕಾರ ಬಜೆಟ್ ಘೋಷಣೆಯಲ್ಲಿ ರಾಮಪುರ ಅಜ್ಜಿಪುರ ಮಾರ್ಟಳ್ಳಿ ಕೌದಳ್ಳಿ ಭಾಗದ ಗ್ರಾಮಗಳಿಗೆ ತೆರಿಗೆ ನೀರು ತುಂಬಿಸುವ ಯೋಜನೆಗೆ 490 ಕೋಟಿ ರೂ ಅನುದಾನ ನೀಡಿರುವುದು ವರಧಾನವಾಗಿದೆ. ಆ ವಿಚಾರವಾಗಿ ಎಲ್ಲಾ ಸಾಧಕ ಬಾಧಕಗಳನ್ನು ಸರ್ಕಾರಕ್ಕೆ ಈಗಾಗಲೇ ಅಧಿಕಾರಿಗಳ ತಂಡ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ತಿಂಗಳು ಹಣ ಬಿಡುಗಡೆಯಾಗಲಿದೆ ತದನಂತರ ಟೆಂಡರ್ ಕರೆದು ನೀರಾವರಿ ಯೋಜನೆಗೆ ಚಲನೆ ನೀಡಲಾಗುತ್ತದೆ
ಈ ಯೋಜನೆಯಿಂದ ಈ ಭಾಗದ ರೈತಾಪಿ ವರ್ಗದ ಜನರಿಗೆ ಕುಡಿಯುವ ನೀರಿನ ಸೌಕರ್ಯ ಮತ್ತು ವ್ಯವಸಾಯಕ್ಕೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಮತ್ತು ಇದರಿಂದ ಬಾವಿಗಳು ಬೋರ್ವೆಲ್ ಗಳಲ್ಲಿ ಅಂತರ್ಜಲ ವೃದ್ಧಿಯಾಗಿ ನೀರಿನ ಮಟ್ಟ ಹೆಚ್ಚಾಗಲಿದೆ ಕಳೆದ ಐದು ಆರು ವರ್ಷದಿಂದ ಮಳೆ ಇಲ್ಲದೆ ವ್ಯವಸಾಯವು ಕೈಗೂಡದೆ ಸದಾ ತೊಂದರೆಯಲ್ಲಿದ್ದ ಈ ಭಾಗದ ಜನರಿಗೆ ಸರ್ಕಾರದ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ.
ಈ ಯೋಜನೆಯಿಂದ ಸಮರ್ಪಕವಾಗಿ ನೀರಾವರಿ ಯೋಜನೆ ರೈತರಿಗೆ ದೊರೆಯಲಿದೆ. ಇದರಿಂದ ಕೆಲಸ ಇಲ್ಲದೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದ ಯುವಕರು ಈಗಾಗಲೇ ಹಳ್ಳಿ ತೊರೆದು ನಗರ ಪಟ್ಟಣಗಳಿಗೆ ಉಧ್ಯೋಗ ಹುಡಿಕಿಕೊಂಡು ಹೋಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿಯೆ ಉದ್ಯೋಗ ದೊರೆಯುವುದರಿಂದ ಸದ್ಯದಲ್ಲೇ ಯುವಕರು ತಮ್ಮ ಸ್ವಗ್ರಾಮದಲ್ಲಿ ಬಂದು ನೆಲೆಯುರುವ ವಿಶ್ವಾಸ ನಮಗಿದೆ.
ಈ ಯೋಜನೆಯಿಂದ ಎಷ್ಟೋ ಮಂದಿ ಕೂಲಿ ಕಾರ್ಮಿಕರು ಬಡ ಜನರಿಗೆ ಉದ್ಯೋಗ ದೊರೆಯಲಿದೆ. ವ್ಯವಸಾಯ ಕೃಷಿ ಚಟುವಟಿಕೆಗಳು ಬಿರುಸಾಗಲಿದೆ. ಹಾಗೆಯೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ದೂರ ಆಗಲಿದೆ. ಈ ಭಾಗದ ಎಲ್ಲಾ ಹಳ್ಳಿಗಳ ಕೆರೆಗೆ ನೀರು ತುಂಬುತ್ತದೆ. ಹಳ್ಳ ಚೆಕ್ ಡ್ಯಾಂ ಗಳಲ್ಲಿ ಸದಾ ನೀರಿನ ಹರಿವು ಇರುವುದರಿಂದ ಅಂತರ್ಜಲ ಮಟ್ಟವು ಹೆಚ್ಚಾಗಲಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಅಧೀಕ್ಷಕ ಇಂಜಿನಿಯರ್ ಮಹೇಶ್ ಮಾತನಾಡಿ ಈಗಾಗಲೆ ಶಾಸಕರು ಮತ್ತು ಅಧಿಕಾರಿಗಳ ಜೊತೆ ಅಲವಾರು ಸಭೆಗಳನ್ನು ನಡೆಸಲಾಗಿದೆ. ಈ ಯೋಜನೆಯ ಸಾಧಕ ಭಾಧಕಗಳ ಬಗ್ಗೆ ಕೂಲಂಕೂಸವಾಗಿ ಚೆರ್ಚೆಸಲಾಗಿದ್ದು ಅಂತಿಮ ವರಧಿಯನ್ನು ಸರ್ಕಾರಕ್ಕೆ ಅನುಮೋಧನೆ ಸಲ್ಲಿಸಲಾಗಿದೆ. ಇನ್ನೂ 2-3 ತಿಂಗಳಲ್ಲಿ ಈ ಯೋಜನೆ ಕಾರ್ಯ ರೂಪಕ ಬರಲಿದೆ. ಎಂದರು.
ಇದೇ ಸಮಯದಲ್ಲಿ ಕಾವೇರಿ ನೀರವಾರಿ ನಿಗಮದ ಮುಖ್ಯ ಇಂಜಿನಿಯರ್ ಮಹೇಶ್, ಆಧೀಕ್ಷಕ ಇಂಜಿನಿಯರ್ ರಘುಪತಿ, ಕಾರ್ಯಪಾಲಕ ಇಂಜಿನಿಯರ್ ಕೆ.ಎಂ.ಉಮೇಶ್ ಎಇಇ ಗಳಾದ ರಾಮಕೃಷ್ಣ, ಕರುಣಾಮಯಿ, ಇಂಜಿನಿಯರ್ ಬಸವೇಶ್, ವಿಕಾಸ್, ಹಾಗೂ ಮುಖಂಡರುಗಳಾದ ಮಂಜೇಶ್ ಗೌಡ, ರಾಜುನಾಯ್ಡು ಚಿನ್ನವೆಂಕಟ್ ಎಸ್.ಆರ್ ಮಹದೇವ್,ಡಿ ಆರ್ ಹಾರ್ಡ್ವೇರ್ ಸೀನಣ್ಣ,ಶ್ರೀರಂಗ, ನಾಗಣ್ಣ,ಮಣಿ, ಜಪಮಾಲೆ ಸೇರಿದಂತೆ ಇತರರು ಇದ್ದರು.
