
Magalamani urges MLAs to focus on protecting the Anegundi monument and the environment.

ಆನೆಗುಂದಿ ಸ್ಮಾರಕ ಹಾಗೂ ಪರಿಸರ ರಕ್ಷಣೆಗೆ ಶಾಸಕರು ಗಮನಹರಿಸಲು ಮ್ಯಾಗಳಮನಿ ಆಗ್ರಹ.

ಗಂಗಾವತಿ– 28- ಆನೆಗುಂದಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ, ಶೌಚಾಲಯ, ಪಾರ್ಕಿOಗ್, ಸೇರಿದಂತೆ ಇನ್ನಿತರ ಸೌಲಭ್ಯ ಗಳನ್ನು ಕಲ್ಪಿಸಲಾಗುವದೆಂದು ಶಾಸಕ ಗಾಲಿ ಜನಾರ್ಧನ್ ರಡ್ಡಿಯವರ ಕಾರ್ಯವನ್ನು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಸ್ವಾಗತಿಸಿದ್ದಾರೆ. ಶಾಸಕರು ಹೋಂ ಸ್ಟೇ ಗಳಿಗೆ ಹೆಚ್ಚು ಒತ್ತು ಕೊಡುವದರ ಬದಲು ಅಲ್ಲಿನ ಸುಮಾರು 15 ಗ್ರಾಮಗಳಲ್ಲಿ ಕುಡಿಯುವ ನೀರು ಶೌಚಾಲಯ, ವಿದ್ಯುತ್,ರಸ್ತೆ, ಮನೆ ನಿರ್ಮಾಣಕ್ಕೆ ಅನುಮತಿಗೆ ಇರುವ ನಿಯಮಗಳನ್ನು ಸಡಿಲಿಸಬೇಕು.ಮನೆ ನಿರ್ಮಾಣಕ್ಕೆ ಸರಕಾರದಿಂದ ಹಣಕಾಸಿನ ಸೌಲಭ್ಯ, ಮನೆ ನಿರ್ಮಾಣ ಕ್ಕಾಗಿ ಬ್ಯಾಂಕ್ ಸಾಲ ದೊರೆಯಲು ಮತ್ತು ಖಾತಾ ವರ್ಗಾವಣೆಗೆ ಇರುವ ಸಮಸ್ಯೆಗಳು ಸೇರಿದಂತೆ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಲು ಹೆಚ್ಚು ಒತ್ತು ನೀಡಬೇಕು. ಆನೆಗುಂದಿ ಭಾಗದಲ್ಲಿರುವ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು, ಅಂಜನಾದ್ರಿ ಮತ್ತು ಆನೆಗುಂದಿಯ ಸುತ್ತಲಿನ ಪ್ರದೇಶಗಳಲ್ಲಿ ಇರುವ ನದಿ ಬೆಟ್ಟ, ಗಿಡ, ಮರಗಳು ನಾಶವಾಗದಂತೆ ನೈಜ ಪ್ರಕೃತಿ ಸೌಂದರ್ಯ ಇರುವಂತೆ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕೃತಿ ಸೌಂದರ್ಯ ಸವಿಯಲು ಮತ್ತು ಸ್ಮಾರಕ ಗಳನ್ನು ವೀಕ್ಷಿಸಲು ಪ್ರವಾಸಿಗರು, ವಿದೇಶಿಗರು ಆಗಮಿಸುತ್ತಿದ್ದಾರೆ ವಿನಃ ಇಲ್ಲಿನ ಯಾವುದೇ ಭವ್ಯವಾದ ಕಟ್ಟಗಳನ್ನು ನೋಡಲು ಅಲ್ಲ. ಅವರಲ್ಲಿಯೇ ದೊಡ್ಡ ದೊಡ್ಡ ಕಟ್ಟಡ ಗಳಿವೆ, ಆದ್ದರಿಂದ ನೈಜ ಪ್ರಕೃತಿಗೆ ತೊಂದರೆ ಯಾಗಬಾರದು. ಹಾಗೂ ಆನೆಗುಂದಿ ಉತ್ಸವ ಆಚರಿಸಲು ಮುಂದೊಂದು ದಿನ ಸ್ಥಳದ ಅಭಾವ ಉಂಟಾಗಲಿದೆ ಆದ್ದರಿಂದ ಕೂಡಲೇ ಉತ್ಸವಕ್ಕಾಗಿ ಜಿಲ್ಲಾಆಡಳಿತ ಭೂಮಿ ಸ್ವಾದೀನ ಪಡಿಸಿಕೊಳ್ಳಲು ಒತ್ತಾಯಿಸಬೇಕು ಹಾಗೂ ಈ ಬಾರಿಯೂ ಉತ್ಸವ ಆಚರಿಸಲು ವಿಫಲ ರಾಗುತ್ತಿರುವಿರಿ, ಕೂಡಲೇ ಸರ್ಕಾರವನ್ನು ಪರಿಣಾಮಕಾರಿಯಾಗಿ ಒತ್ತಾಯ ಮಾಡುವದರ ಮೂಲಕ ಉತ್ಸವ ಆಚರಿಸಬೇಕೆಂದು ಮ್ಯಾಗಳಮನಿ ಶಾಸಕರನ್ನು ಆಗ್ರಹಿಸಿದ್ದಾರೆ
