ಪುಣೆ : ಬಸವ ಭೂಷಣ ಪುರಸ್ಕಾರ ಮತ್ತು  ಲಿಂಗಾಯತ ಧರ್ಮದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Pune: Basava Bhushan Award and awards for talented children of Lingayat religion




ಪುಣೆ : ಬಸವ ಭೂಷಣ ಪುರಸ್ಕಾರ ಮತ್ತು  ಲಿಂಗಾಯತ ಧರ್ಮದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

ಜಾಹೀರಾತು

ಪುಣೆ :ಬಸವ ಜಯಂತಿ, ಬಸವ ಭೂಷಣ ಪುರಸ್ಕಾರ ಮತ್ತು ಬಸವ ತತ್ವ ಸಿದ್ದಾಂತ ಪಾಲಿಸುವವರಿಗೆ ಲಿಂಗಾಯತ ಧರ್ಮದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ದಿನಾಂಕ 18/04/2026ರಂದು ವಿಜೃಂಭಣೆಯಿಂದ ಜರುಗಿತ್ತು:

ಬಸವ ತತ್ವ ತಿಳುವಳಿಕೆ ಮತ್ತು ಸಂಶೋಧನೆ ಸಂಸ್ಥೆ ಪುಣೆ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ವತಿಯಿಂದ ಬಸವ ಜಯಂತಿಯನ್ನು ಗ ದಿ ಮಾಡಗೋಲ್ಕರ ಹಾಲ್ ಅಕ್ರುಡ್ ಪುಣೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

ಸಾನಿಧ್ಯ ಪೂಜ್ಯ ಡಾ ಸಿದ್ಧರಾಮ ಶರಣರು ಬೆಲ್ದಾಳ ಮತ್ತು ಪೂಜ್ಯ ಜಗದ್ಗುರು ಡಾ ಚೆನ್ನಬಸವಾನಂದ ಸ್ವಾಮೀಜಿ ಬೆಂಗಳೂರು ವಹಿಸಿ ಮಾತನಾಡಿದರು , ಅಧ್ಯಕ್ಷತೆ ಶ್ರೀ ಚಂದ್ರಶೇಖರ ಗಾಣಿಗೇರ, ಪ್ರಾಸ್ತಾವಿಕ ಡಾ ಶಶಿಕಾಂತ ಪಟ್ಟಣ ಮಾತನಾಡಿದ್ದರು, ಉದ್ಘಾಟಕ ಶ್ರೀ ಬಸವರಾಜ ಕುಳ್ಳೋಳಿ ಕೈಗಾರಿಕ ಉದ್ಯಮಿ ಮಾತನಾಡಿದರು, ಮುಖ್ಯ ಅತಿಥಿ ಡಾ ಅಜಿತ ಮಹದೇವಪ್ಪ ರಾಮಪುರೆ ಮುಖ್ಯ ಕಾರ್ಯವಾಹಕ ಅಧಿಕಾರಿ ಡೀನ್ ಆಯಿರೋಸ ವೈದ್ಯಕೀಯ ವಿಶ್ವವಿದ್ಯಾಲಯ ಟೊರಾಂಟೋ ಕೆನಡಾ ಮಾತನಾಡಿದ್ದರು, ಅತಿಥಿ ಆಗಿ ಶ್ರೀಮತಿ ರಾಜಶ್ರೀ ಸ್ವಾಮಿ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಮತ್ತು ಮಾಜಿ ಅಧ್ಯಕ್ಷೆ ಜಿಲ್ಲಾ ಪಂಚಾಯತ್ ಬೀದರ ಮತ್ತು ಶ್ರೀ ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಸಂಚಾಲಕ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಮಾತನಾಡಿದರು, ವೇದಿಕೆ ಮೇಲೆ ಶ್ರೀ ಮನೀಶ್ ಮಹಾಜನ ವಕೀಲರು, ಶ್ರೀ ಸಂಜಯ ಇಂಡೇ, ಶ್ರೀಮತಿ ಜಯಶ್ರೀ ಕೊಗನೂರು, ಡಾ ಏ ವಿ ಅರಕೇರಿ ಮತ್ತು ಪ್ರೊ ರಾಜಶೇಖರ ನಂದುರ್ಗಿ ಉಪಸ್ಥಿತರಿದ್ದರು.

ಬಸವ ಭೂಷಣ ಪುರಸ್ಕಾರ ಡಾ ಸಿದ್ಧರಾಮ ಶರಣರು ಬೆಲ್ದಾಳ ಮತ್ತು ಶ್ರೀ ಭೀಮರಾವ ಪಾಟೀಲ ನೀಡಲಾಯಿತು, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸ್ವಾಗತ ಶ್ರೀಮತಿ ಡಾ ಜಯಶ್ರೀ ಪಟ್ಟಣ, ಸಂಚಾಲನ ಶ್ರೀ ಮತ್ತು ವಂದನಾರ್ಪಣೆ ಡಾ ಶಾಂತ ಆರಕೇರಿ ಮಾಡಿದರು. ಸಮಾಜದ ಹಲವಾರು ಪ್ರತಿಭಾನಿತರಿಗೆ ಶ್ರೀಮತಿ ಜಯಶ್ರೀ ಶ್ರೀ ಸತೀಶ ಪಾಟೀಲ ದಂಪತಿಗಳು, ಶ್ರೀಮತಿ ನೀತಾ ಕಡೋಲೆ ಮತ್ತು ಶ್ರೀ ಯೋಗೇಶ ಕರಂಜೆ ಸನ್ಮಾನಿಸಿದರು. ಪುಣೆ, ಸತಾರಾ, ಮುಂಬೈ , ಕೊಲ್ಹಾಪುರ ಸುತ್ತಮುತ್ತಲಿನ ಜನರು ಭಾಗವಹಿಸಿದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ಕಾರ್ಪೊರೇಟ್ ಕಾರ್ಯಕ್ರಮ ತರಹ ನೆರವೇರಿಸಲಾಗಿತ್ತು, ಬೇಸಿಗೆ ಇದ್ದ ಕಾರಣ ಸಂಪೂರ್ಣ ತಂಪು ವಾಯು ನಿಯಂತ್ರಣದಲ್ಲಿ ನೆರವೇರಿಸಲಾಯಿತು.

ಡಾ ಶಶಿಕಾಂತ ಪಟ್ಟಣ ಪತ್ನಿ ಡಾ ಜಯಶ್ರೀ ಪಟ್ಟಣ ಮತ್ತು ಸಂಗಡಿಗರಿಗೆ ಪುಣೆ ನಗರದಲ್ಲಿ ಇಂತಹ ಕಾರ್ಯಕ್ರಮ ನೆರವೇರಿಸಿದಕ್ಕೆ ಧನ್ಯವಾದಗಳು.

Total Views: 0
Share This Article