
Free mass circumcision camp at Sharanabasaveshwara camp a success.

ಶರಣಬಸವೇಶ್ವರ ಕ್ಯಾಂಪ್ ನಲ್ಲಿ ಉಚಿತ ಸಾಮೂಹಿಕ ಖತ್ನಾ ಶಿಬಿರ ಯಶಸ್ವಿ.

ಮುಸ್ಲಿಂ ಸಮುದಾಯದ ಹಿರಿಯರು-ಯುವಕರ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಸೇವಾ ಕಾರ್ಯ
ಗಂಗಾವತಿ, ಏಪ್ರಿಲ್ 18, ನಗರದ 13ನೇ ವಾರ್ಡ್ ಶರಣಬಸವೇಶ್ವರ ಕ್ಯಾಂಪ್ ನಲ್ಲಿ ಆಶ್ರಯ ಕಾಲೋನಿಯ ಮುಸ್ಲಿಂ ಸಮುದಾಯದ ಹಿರಿಯರು, ಪ್ರಮುಖರು ಮತ್ತು ಯುವಕರು ಸೇರಿ ಪ್ರತಿವರ್ಷದಂತೆ ಆಯೋಜಿಸಿದ್ದ ಉಚಿತ ಸಾಮೂಹಿಕ ಖತ್ನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿತು.
ಶರಣಬಸವೇಶ್ವರ ಕ್ಯಾಂಪ್ ನಲ್ಲಿರುವ ಮದರಸಾ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಶಿಬಿರದಲ್ಲಿ 25ಕ್ಕೂ ಹೆಚ್ಚು ಬಡ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಖತ್ನ ಮಾಡಿಸಲಾಯಿತು.
ಅನುಭವಿ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ತಂಡ ಆಗಮಿಸಿ ಶುಚಿತ್ವ ಮತ್ತು ಸುರಕ್ಷತೆಯೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ಯಾರಂಟಿ ಸಮಿತಿ,ಸದಸ್ಯರಾದ ಹಮೀದ್ ಮುಲ್ಲಾ ಮಾತನಾಡಿ, “ಕಳೆದ 2 ವರ್ಷಗಳಿಂದ ಶರಣಬಸವೇಶ್ವರ ಕ್ಯಾಂಪ್ ನಲ್ಲಿ ಈ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಖತ್ನ ಮಾಡಿಸಲು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಸಂಪೂರ್ಣ ಉಚಿತವಾಗಿ ಶಿಬಿರವನ್ನು ಮಾಡಿಸುತ್ತಿದ್ದಾರೆ. ಇದಕ್ಕೆ ಊರಿನ ದಾನಿಗಳು, ಯುವಕರು ಕೈಜೋಡಿಸುತ್ತಾರೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ವರ ಸಹಕಾರ:
ಕಾರ್ಯಕ್ರಮಕ್ಕೆ ಕಾಲೋನಿಯ ಹಿರಿಯರು,ಮತ್ತು, ಯುವಕರು ಸೇರಿ 30ಕ್ಕೂ ಹೆಚ್ಚು ಸ್ವಯಂಸೇವಕರು ಈ ಶಿಬಿರದಲ್ಲಿ ಶ್ರಮಿಸಿದರು.
“ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಸಮುದಾಯಗಳ ನಡುವೆ ಸೌಹಾರ್ದತೆ ಬೆಸೆಯುತ್ತವೆ. ಶರಣಬಸವೇಶ್ವರ ಕಾಲೋನಿಯ ಹೆಸರಿಗೆ ತಕ್ಕಂತೆ ಇಲ್ಲಿ ಎಲ್ಲರೂ ಶರಣರಂತೆ ಸೇವಾ ಮನೋಭಾವದಿಂದ ಬದುಕುತ್ತಿದ್ದಾರೆ” ಎಂದು ಗಂಗಾವತಿ ಗ್ಯಾರಂಟಿ ಸಮಿತಿ. ಸದಸ್ಯರಾದ ಹಮೀದ್ ಮುಲ್ಲಾ ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ, ಮುಸ್ಲಿಂ ಸಮುದಾಯದ ಮುಖಂಡರಾದ ಟೈಲರ್ ಬಾಬುಸಾಬ್, ಹೆಚ್.ಎಸ್. ಮುಧೋಳ್, ವಲಿಸಾಬ್,
ಮೆಹಬೂಬ್, ಬುಡನ್ ಸಾಬ್,ಹೊನ್ನೂರ್ ಸಾಬ, ಯಮನೂರ ಸಾಬ್ ಟೈಲರ್, ರಮೇಶ್ ಹತ್ತಿಮರದ,ದುರ್ಗೆಶ್ ದೊಡ್ಡಮನಿ,ಉಮೇಶ್ ಬಂಡಿ,ಇಮಾಮ ಸಾಬ್,ಹಾಗೂ ಮುಸ್ಲಿಂ ಸಮುದಾಯದ ಯುವಕರು ಸೇರಿದಂತೆ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
