Breaking News

ಕೊಪ್ಪಳ ಆರ್‌ಸೆಟಿ: ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

Koppal RSETI: Applications invited for various trainings
ಕೊಪ್ಪಳ ಸೆಪ್ಟೆಂಬರ್ 26 (ಕರ್ನಾಟಕ ವಾರ್ತೆ): ಸ್ಟೇಟ್್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ವಿವಿಧ ತರಬೇತಿಗಳನ್ನು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಿAದ 13 ದಿನಗಳ ಕೃಷಿ ಉದ್ಯಮಿ(ಕುರಿ ಸಾಕಾಣಿಕೆ, ಹೈನುಗಾರಿಕೆ) ತರಬೇತಿ, 13 ದಿನಗಳ ಅಣಬೆ ಬೇಸಾಯ ತರಬೇತಿ, 30 ದಿನಗಳ ಬ್ಯೂಟಿ ಪಾರ್ಲರ್ ತರಬೇತಿ ಹಾಗೂ 31 ದಿನಗಳ ಮಹಿಳಾ ಹೊಲಿಗೆ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಬ್ಯಾಂಕಿನಿAದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಕ್ಟೋಬರ್ 6 ರಂದು ಸಂದರ್ಶನ ನಡೆಯಲಿದ್ದು, ಅ.7 ರಂದು ತರಬೇತಿ ಪ್ರಾರಂಭಿಸಲಾಗುವುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 45 ವರ್ಷದ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು. ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.
ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್‌ಕಾರ್ಡ್, ಎಸ್‌ಬಿಐ ಬ್ಯಾಂಕ್ ಪಾಸ್‌ಬುಕ್, ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳು ಹಾಗೂ ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂ.ಸಂ.: 08539-231038, 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದು ಎಂದು ಎಸ್‌ಬಿಐ ಆರ್‌ಸೆಟಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.