Breaking News

ಬಸವನಗೌಡ ಪಾಟೀಲ್ ಯತ್ನಾಳ್‌ರವರ ಶಾಸಕ ಸ್ಥಾನವನ್ನು ರದ್ದು ಪಡಿಸುವಂತೆ ಮನವಿ

Petition to cancel the MLA seat of Basavanagowda Patil Yatnal

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಟಿಪ್ಪು ಸುಲ್ತಾನ್ ಸಂಘ ತಾಲೂಕು ಘಟಕದ ವತಿಯಿಂದ ರಾಜ್ಯಪಾಲರಿಗೆ ಉಪತಹಸೀಲ್ದಾರ್ ವಿರುಪಣ್ಣರವರ ಮೂಲಕ ತಾಲೂಕು ಘಟಕದ ಅಧ್ಯಕ್ಷರಾದ ಖಲೀಲ್ ಖುರೇಶಿ ಮನವಿ ಸಲ್ಲಿಸಿ ಮಾತನಾಡಿ ಸೇ.೧೯ ರಂದು ಮುಧೋಳ್ ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಜರತ್ ಟಿಪ್ಪುಸುಲ್ತಾನ್ ರವರ ಚರಿತ್ರೆಯನ್ನು ತ್ಯಾಗ, ಬಲಿದಾನ,ದೇಶಕ್ಕಾಗಿ ನಡೆಸಿದ ಹೋರಾಟಗಳ ಬಗ್ಗೆ ಸರಿಯಾದ ಇತಿಹಾಸವನ್ನು ತಿಳಿಯದೆ ಅವರ ಬಗ್ಗೆ ಅತ್ಯಂತ ಅವಹೋಳನಕಾರಿಯಾಗಿ ಮಾತನಾಡುವ ಮೂಲಕ ರಾಜ್ಯದಲ್ಲಿನ ಹಜರತ್ ಟಿಪ್ಪುಸುಲ್ತಾನ್ ರವರ ಅಭಿಮಾನಿಗಳಿಗೆ ಹಾಗೂ ಅಲ್ಪಸಂಖ್ಯೆತ ಸಮುದಾಯದವರ ಭಾವನೆಗಳಿಗೆ ಹಾನಿ ಮಾಡಿದ್ದು . ಇವರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಒಂದು ಸಮುದಾಯದವರ ವಿರುದ್ದವಾಗಿ ಮಾತನಾಡುವ ಮೂಲಕ ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಗೆ ಧಕ್ಕೆಯಾಗುವ ರೀತಿ ಹಾಗೂ ರಾಜ್ಯದಲ್ಲಿ ಕೋಮುಸಂಘರ್ಷ ಉಂಟುಮಾಡುವ ರೀತಿಯಾಗಿ ಪ್ರಚೋದನಕಾರಿ ಭಾಷಣಗಳಿಂದ ಸಮಾಜದಲ್ಲಿನ ಹಲವು ಸಮುದಾಯಗಳವಾರ ಭಾವನೆಗಳಿಗೆ ದಕ್ಕೆ ತರುತ್ತಿರುವುದರಿಂದ ಕೂಡಲೇ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರವರ ಶಾಸಕ ಸ್ಥಾನವನ್ನು ರದ್ದು ಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಹಜರತ್ ಟಿಪ್ಪು ಸುಲ್ತಾನ್ ವೃತ್ತದಿಂದ ಡಾ.ಅಂಬೇಡ್ಕಾರ್ ವೃತ್ತದ ಮೂಲಕ ಬಸವ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಚಾಲಕರಾದ ಸೈಯಾದ್ ಹುಸೇನ್ ಸಾಹೇಬ್,ತಾ.ಕಾರ್ಯಧ್ಯಕ್ಷರಾದ ಮೋಹಮ್ಮದ್ ರೆಹಮತ್ ಅಲಿ,ಹಮೀದ್ ಖಾನ್,ಅಬ್ದುಲ್ ಲತೀಫ್,ಮುಸ್ತಪ ಕಪಗಲ್, ಮುಸ್ತಫಾ ಖುರೇಶಿ, ಎಂ.ಡಿ.ಇಸ್ಮಾಯಿಲ್ , ಸಾಧೀಕ ಹುಸೇನ್ ಖುರೇಶಿ, ಮಿರ್ಜಾ ಆದಂ ಬೇಗ್, ನುಸರತ್ ಗಾಪೂರ್,ಎ.ಕೆ.ಜಾಗೀರದಾರ್ ಸಾಹೇಬ್ ಗುರು,ಸೈಯಾದ್ ಸಜ್ಜದ್ ಹುಸೇನಿ ಮತವಾಲೆ,ಸೈಯಾದ್ ಮುಸ್ತಾಕ್ ಖಾದ್ರಿ,ನಾಸೀರ್ ಅಲಿ, ಜಿಲಾನಿ ಖುರೇಶಿ, ಹಾಕಿಮ್‌ಖುರೇಶಿ,ಜಾವೇದ್ ಖಾನ್ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದವರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *