Spraying of mosquito control drugs in public places.
ಸಿಂಧನೂರು :-ಸೆ 4 ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ್ ಚಾರಿಟಬಲ್ ಟ್ರಸ್ಟ್ ಸಿಂಧನೂರು ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆ ನಿಯಂತ್ರಣ ಉದ್ದೇಶದಿಂದ ಔಷಧಿ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ.
ನಗರದ ಕೇಂದ್ರ ಬಸ್ ನಿಲ್ದಾಣ ದಲ್ಲಿ ಶುಕ್ರವಾರ ದಂದು ಹೆಚ್.ಮರಿಯಪ್ಪ ವಕೀಲರು ಹೆಡಿಗಿಬಾಳ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಸರಕಾರಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಗರದ ಸ್ಲಂ ಏರಿಯಗಳಲ್ಲಿ ಸೊಳ್ಳೆ ನಿಯಂತ್ರಣ ಮಾಡುವ ಉದ್ದೇಶದಿಂದ ಔಷಧಿ ಸಿಂಪರಣೆ ಮಾಡುವ ಕಾರ್ಯಕ್ರಮಕ್ಕೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಇಂದು ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿ ವಿಪರೀತವಾಗಿ ಹರಡುವುದರಿಂದ ಹೆಚ್. ಮರಿಯಪ್ಪ ವಕೀಲರು ಸಮಾಜ, ಸಾರ್ವಜನಿಕವಾಗಿ ಮತ್ತು ಮಾನವೀಯತೆಯ ದೃಷ್ಟಿಯಿಂದ ಆಲೋಚನೆ ಮಾಡಿ ಸರಕಾರದ ಜೊತೆ ಸಾಮಾನ್ಯರು ಕೈಜೋಡಿಸಬೇಕೆನ್ನುವ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಯಂತ್ರ ಖರೀದಿಸಿ ಸೊಳ್ಳೆ ನಿಯಂತ್ರಣ ಮಾಡುವಲ್ಲಿ ನಮ್ಮ ಟ್ರಸ್ಟಿನ ಅಳಿಲು ಸೇವೆ ಒದಗಿಸುವ ಉದ್ದೇಶದಿಂದ ಸದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗುರುಗಳಾದ ಶ್ರೀ ಸದಾನಂದ ಶರಣರು, ಎಸ್ ಆರ್ ಖಾದ್ರಿ ಮುಕುಂದ ವಕೀಲರು, ಮುಸ್ಲಿಂ ಧರ್ಮದ ಗುರುಗಳು ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತರಾದ ಮಂಜುನಾಥ್ ಗುಂಡೂರ್, ಮುಖ್ಯ ವೈದ್ಯ ಅಧಿಕಾರಿಗಳು ಡಾ. ನಾಗರಾಜ್ ಕಟ್ಟಾ, ವಕೀಲರಾದ ಜೆ.ರಾಯಪ್ಪ ವೇದಿಕೆಯಲ್ಲಿದ್ದರು.
ಅಧ್ಯಕ್ಷತೆಯನ್ನು ಕೇಂದ್ರ ಬಸ್ ನಿಲ್ದಾಣದ ವ್ಯವಸ್ಥಾಪಕರಾದ ಪ್ರಕಾಶ್ ದೊಡ್ಡಮನಿ ವಹಿಸಿ ಮಾತನಾಡಿ ಟ್ರಸ್ಟಿನ ಈ ಸೇವೆಯನ್ನು ಮೆಚ್ಚಿಕೊಂಡರು ಸ್ವತ ಹೆಚ ಮರಿಯಪ್ಪ ವಕೀಲರು ಸೊಳ್ಳೆ ನಿಯಂತ್ರಣ ಯಂತ್ರವನ್ನು ಚಲಾಯಿಸಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು ಸದರಿ ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷ ಹೆಚ್ ಮರಿಯಪ್ಪ ವಕೀಲರು ಹೆಡಗಿಬಾಳ ಹಾಗೂ ಉಪಾಧ್ಯಕ್ಷರಾದ ಕೆ.ಮಹೇಶ್ ಸುಕಲ್ಪೇಟೆ , ಸದಸ್ಯರಾದ ವಿಜಯಕುಮಾರ್ ಕೆ. ಸಿ ವಕೀಲರಾದ ಶಿವಕುಮಾರ ಶಿವನಗುತ್ತಿ, ಜಾವೀದ್ ಮುಲ್ಲಾ, ವಕೀಲರು, ಮಂಜುನಾಥ ಸಾಸಲಮಾರಿ ಮಾಧ್ಯಮ ವಕ್ತಾರರು ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.