Breaking News

ಬೈಕ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸವಾರರು ಗಂಭೀರ ಗಾಯ,,,

Bike and bike head-on collision, rider seriously injured,,,

ಜಾಹೀರಾತು

ಕೊಪ್ಪಳ : ಬೈಕ್ ಹಾಗೂ ಬೈಕ್ ಮದ್ಯೆ ಮುಖಾ ಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರರು ಗಂಭಿರ ಗಾಯವಾದ ಘಟನೆ ಶುಕ್ರವಾರದಂದು ನಡೆದಿದೆ.

ಶುಕ್ರವಾರದಂದು ಮಧ್ಯಾಹ್ನ 3.30 ಗಂಟೆಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಹತ್ತಿರ ನಡೆದಿದೆ ಎನ್ನಲಾಗಿದೆ.

ಒಂದು ಬೈಕ್ ನಲ್ಲಿ ನಿಂಗಪ್ಪ ಮತ್ತು ಮಾರುತಿ ಎನ್ನುವ ಯುವಕರು ಕೆಂಪಳ್ಳಿಯಿಂದ ಯಲಬುರ್ಗಾಕ್ಕೆ ತಮ್ಮ ಸ್ವಂತದ ಕೆಲಸಕ್ಕಾಗಿ ತೆರಳುತ್ತಿದ್ದರು.

ಚಿಕ್ಕಮ್ಯಾಗೇರಿಯಿಂದ ಕೆಂಪಳ್ಳಿಗೆ ಹೋಗುತ್ತಿದ್ದ ಕಲ್ಲಿನಾಥ, ಹಾಗೂ ಅಂಬರೀಶ್ ಪೊಲೀಸ್ ಪಾಟೀಲ್ ಚಿಕ್ಕಮ್ಯಾಗೇರಿಯವರಾಗಿದ್ದು ಕೆಂಪಳ್ಳಿಗೆ ಹೋಗುವಾಗ ಮುಖಾ ಮುಖಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ಸ್ಥಳೀಯರು ಅಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಘಟನೆಯಲ್ಲಿ ನಿಂಗಪ್ಪ ಎನ್ನುವವರಿಗೆ ತಲೆಗೆ ಪೆಟ್ಟಾಗಿದ್ದು, ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂಳಿದಂತೆ ಈ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕೈ ಕಾಲುಗಳಿಗೆ ಪೆಟ್ಟಾಗಿ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಯಲಬುರ್ಗಾ ಠಾಣೆಯಲ್ಲಿ ಅಪಘಾತ 281/125A/125B ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ವರದಿ : ಪಂಚಯ್ಯ ಹಿರೇಮಠ,,

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.