ಹನೂರು :ರೈತರು ಈ ದೇಶದ ಬೆನ್ನೆಲುಬು ಆದರೆ ನಾವು ಸಾಕಿದ ಹಸುವಿನಿಂದ ಹಾಲು ಕರೆದು ಡೈರಿಗಳಿಗೆ ನೀಡಿದರೆ ನಮಗೆ ಮೋಸವಾಗುತ್ತದೆ ಅದರಿಂದ ನೊಂದವರಿಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡಲಾಗುವುದು ಎಂದು ಹನೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಹರೀಶ್ ರವರು ತಿಳಿಸಿದರು .
ತಾಲ್ಲೂಕಿನ ತೋಮಿಯರ್ ಪಾಳ್ಯದ ಹಾಲು ಉತ್ಪಾದಕರ ಒಕ್ಕೂಟದ ಶಾಖೆಯಲ್ಲಿ ಮಾತನಾಡಿದ ರೈತ ಮುಖಂಡರಾದ ಬೋಸ್ಕೊ ರೈತರ ಹಣವು ಈಗಾಗಲೇ
54 ಲಕ್ಷ ಹಣದ ದುರುಪಯೋಗಿರುವ ಬಗ್ಗೆ ತನಿಕೆ ಮಾಡಲು ರೈತ ಸಂಘದವರಿಂದ ಪ್ರತಿಭಟನೆ ಮಾಡುತ್ತಿದ್ದು , ಇದೇ ಡೈರಿಯಲ್ಲಿ
ಹಾಲಿಗೆ ನೀರು ಬೆರೆಕೆ .ಮತ್ತು ಹತ್ತು ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ಒಂದು ಲಿಟರ್ ಹಾಲನ್ನು ಹಾಲು ಉತ್ಪಾದಕರ ಹತ್ತಿರ ಹಾಕಿಸುಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ,ಇಲ್ಲಿರುವ ದೊಡ್ಡ ಕಟ್ಟಡದಲ್ಲಿ ಸಿಸಿ ಟಿವಿ ಬಳಕೆ ಯನ್ನು ಸಹ ಮಾಡಿಲ್ಲ ಹದಿನೇಳು ಜನರ ಖಾತೆಗೆ ಅಕ್ರಮ ಹಣ ವರ್ಗಾವಣೆ ಮಾಡಿರುವ ಅರೋಪ ಹೋಂದಿದ್ದರು ಎಂದು ತಿಳಿಸಿದರು .
ಈ ಸಂಭಂದವಾಗಿ ಮಾತನಾಡಿದ ಚಾಮುಲ್ ನಿರ್ದೇಶಕರಾದ ಶಾಹುಲ್ ಅಹ್ಮದ್ ಮಾತನಾಡಿ ನಾವು ಈಗಾಗಲೇ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೆವಿ ಅದರಂತೆ ಅವರ ವರದಿ ನೋಡಿ ಮುಂದಿನ ದಿನಗಳಲ್ಲಿ ಸತ್ಯಸತ್ಯಾತೆಯನ್ನು ಅರಿತು ಹಣವನ್ನು ತಲುಪದವರಿಗೆ ತಲುಪಿಸುವವರಿಗೂ ನಾವು ಸೂಚಿಸುತ್ತೆವೆ ಎಂದರು .
ಇದೇ ಸಮಯದಲ್ಲಿ ಚಾಮುಲ್ ನಿರ್ದೇಶಕರಾದ ಉದ್ನೂರು ಮಹಾದೇವ ಪ್ರಸಾದ್ , ರೈತ ಸಂಘದ ಅಧ್ಯಕ್ಷರಾದ ಹರೀಶ್ , ಬೋಸ್ಕೊ , ಚಾರ್ಲ್ಸ್ , ಹನೂರು : ತಾಲೂಕಿನ ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ (ರಿ), ಸಮೂಹ ಹಾಲು ಶೀಥಲೀಕರಣ ಕೇಂದ್ರ ಮುಂಭಾಗ ಹಾಲು ಉತ್ಪಾದಕರು ಹಾಗೂ ಭಾರತ ಕಿಸಾನ್ ಸಂಘದ ಪದಾಧಿಕಾರಿಗಳು , ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ರಾಜಕಣ್ಣ, ಕಾರ್ಯದರ್ಶಿ ಮೊದಲೈಮುತ್ತು ಪ್ರತಿಭಟನ ಸ್ಥಳಕ್ಕೆ ಬೇಟಿ ನನ್ನಿಂದ ಯಾವುದೇ ಲೋಪದೋಷಗಳನ್ನು ಮಾಡಿದರು ಸಹ ಅದರ ತನಿಕೆ ಸಹಕರಿಸುತ್ತೆನೆ ಎಂದರು.
ಪ್ರತಿಭಟನೆಯಲ್ಲಿ ಭಾರತ್ ಕಿಸನ್ ಸಂಘದ ಮುಖಂಡರಾದ ಡಾನ್ ಬೊಸ್ಕೊ, ಮಲ್ಲಿಕಾರ್ಜುನ, ಮಣಿಗಾರ ಪ್ರಸಾದ್ ಹಾಗೂ ತೋಮಿಯರ್ ಪಾಳ್ಯ ಹಾಲು ಉತ್ಪಾದಕರು ಚಾರ್ಲೆಸ್, ಸಾಗಯರಾಜ್, ಜ್ಞಾನ ಪ್ರಕಾಶ್, ಚಾರ್ಲೆಸ್, ಜಾನ್, ಪತ್ತಿನಾಧನ್, ಮಂಗಳ, ಚಾರ್ಲ್ಸ್ ಸೇರಿದಂತೆ ಮಹಿಳೆಯರು ಒಳಗೊಂಡು ನೂರಾರು ಹಾಲು ಉತ್ಪಾದಕರು ಪಾಲ್ಗೊಂಡಿದ್ದರು.
ಇನ್ನಿತರರು ಹಾಜರಿದ್ದರು