Kanneriya Kadasiddheshwara Swamy apologizes for using vulgar language

ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಬಸವತತ್ವ ಮತ್ತು ಬಸವ ತತ್ವನಿಷ್ಟರನ್ನು ಮನ ಬಂದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವುದು ಬಸವ ಪರ ಸಂಘಟನೆಗಳನ್ನ ಕೆರಳಿಸುವಂತಾಗಿದೆ.
ಅಕ್ಟೊಬರ್ 9 ರಂದು ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳನ್ನು ಸೂಳೆ ಮಕ್ಕಳೆಂದೂ, ಪದ ಬಳಸಿ ಚಪ್ಪಲಿ ತೆಗೆದುಕೊಂಡು ಹೊಡೆಯಬೇಕೆಂದು ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಪ್ರಚೋಧಿಸುವಂತೆ ಮಾತನಾಡಿದ್ದಾರೆ. ಈ ಸನಾತನಿ ಕೃಪಾಪೋಷಿತ ಕಾಡಸಿದ್ಧೇಶ್ವರ ಸ್ವಾಮೀಯವರನ್ನು ಸರಕಾರವು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕು.
ಸಿದ್ಧೇಶ್ವರ ಸ್ವಾಮಿಗಳ ಶಿಷ್ಯರೆಂದು ಹೇಳಿಕೊಳ್ಳಲು ಇವರಿಗೆ ನಾಚಿಕೆಯಾಗಬೇಕು. ಸಿದ್ಧೇಶ್ವರ ಸ್ವಾಮಿಗಳ ಕಾಲಿನ ಧೂಳಿಗೂ ಸಮವಲ್ಲದ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ಹೆಸರಿಗೆ ದೊಡ್ಡ ಕಳಂಕವಾಗಿದ್ದಾರೆ. ಕ್ರಿಮಿನಲ್ ಮಾತುಗಳನ್ನಾಡುವ ಸ್ವಾಮಿಗಳಿಗೆ ಕಾವಿ ಬಟ್ಟೆ ಬೇರೆ ಕೇಡು.

ಬಸವನ ಬಾಗೆವಾಡಿಯಿಂದ ಪ್ರಾರಂಭಗೊಂಡು ರಾಜ್ಯಾದ್ಯಂತ ಅಭೂತಪೂರ್ವ ಯಶಸ್ವಿಯಾಗಿ ನಡೆದ ಬಸವ ಸಂಸ್ಕೃತಿ ಅಭಿಯಾನದಿಂದ ಕಂಗೆಟ್ಟು ಹೋದ ಸನಾತನಿ ಸ್ವಾಮೀಜಿಗೆ ನಿದ್ರೆ ಬರುತ್ತಿಲ್ಲವೆಂದು ಕಾಣುತ್ತಿದೆ. ಅದಕ್ಕಾಗಿ ಹುಚ್ಚನಾಗಿ ತಲೆ ಕೆಟ್ಟಂತೆ ಈ ತರಹದ ಹೇಳಿಕೆಯನ್ನು ನೀಡಿದ್ದಾರೆ.
ಬಸವಭಕ್ತರನ್ನು ನಿಂದಿಸುತ್ತಿರುವ ಸ್ವಾಮಿಗಳು ಬಸವಭಕ್ತರ ಮತ್ತು ಬಸವಪರ ಮಠಾಧೀಶರ ಕ್ಷಮೆ ಕೇಳಬೇಕು ಇಲ್ಲವಾದರೆ ಬಸವ ಪರ ಸಂಘಟನೆಗಳ ಹೋರಾಟದ ಮೂಲಕ ಕಾನೂನಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಯಲಬುರ್ಗಾ ತಾಲೂಕಿನ ರಾಷ್ಟ್ರೀಯ ಬಸವ ದಳದ ಬಸವರಾಜ ಹೂಗಾರ ಪತ್ರಿಕೆ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.
✍🏿👏🏽 ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ