ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು

ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ

 

Open house program for students at the police station

ಜಾಹೀರಾತು

 

 

ಪೊಲೀಸರ ಕಾರ್ಯವೈಖರಿ ಪರಿಚಯ, ಕಾನೂನು ಅರಿವು ಜತೆಗೆ ಅಪರಾಧ ತಡೆಗೆ ಜಾಗೃತಿ

 

 

ಗಂಗಾವತಿ, ನ.5: ವಿದ್ಯಾರ್ಥಿಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ, ಕಾನೂನು ಅರಿವು ಹಾಗೂ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಪೊಲೀಸ್ ಠಾಣೆಯಲ್ಲಿ ವಿದ್ಯಾನಗರದ ಎನ್.ಆರ್.ಸಿ.ಬಿ. ಶಾಲೆಯ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಎಎಸ್‌ಐ ಶಿವಶರಣ ಅವರು ಪೊಲೀಸ್ ಠಾಣೆಯ ಕಾರ್ಯವೈಖರಿ, ದೂರು ಸ್ವೀಕಾರ, ಎಫ್‌ಐಆರ್ ದಾಖಲಾತಿ, ಅಪರಾಧ ತನಿಖೆ ಹಾಗೂ ಸಾರ್ವಜನಿಕರ ರಕ್ಷಣೆಯಲ್ಲಿ ಪೊಲೀಸರ ಪಾತ್ರದ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಆನ್‌ಲೈನ್ ವಂಚನೆ ಹಾಗೂ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ದೂರವಿದ್ದು, ಕಾನೂನು ಪಾಲನೆ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಪೊಲೀಸ್ ಠಾಣೆಯ ಬಗ್ಗೆ ಇದ್ದ ಭಯ ಮತ್ತು ತಪ್ಪು ಕಲ್ಪನೆಗಳನ್ನು ದೂರಮಾಡಿ, ಪೊಲೀಸರೊಂದಿಗೆ ಆತ್ಮೀಯತೆ ಬೆಳೆಸುವ ಪ್ರಯತ್ನ ಮಾಡಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಚನ್ನಯ್ಯಸ್ವಾಮಿ ಹಿರೇಮಠ, ಅಮರೇಶ ತಲ್ಲೂರು, ಶಾಲಾ ಶಿಕ್ಷಕರಾದ ಪ್ರಕಾಶ ಚಕ್ರಸಾಲಿ, ಸುನಿತಾ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article
Leave a Comment