ಉತ್ತರ ಕರ್ನಾಟಕದ ಪ್ರತಿಭೆಗಳ ಸಂಗಮ ‘ಚಂದ್ರಹಾಸ’ ಚಿತ್ರಕ್ಕೆ ಕಾರಟಗಿಯಲ್ಲಿ ಉತ್ತಮ ಪ್ರತಿಕ್ರಿಯೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು

ಉತ್ತರ ಕರ್ನಾಟಕದ ಪ್ರತಿಭೆಗಳ ಸಂಗಮ ‘ಚಂದ್ರಹಾಸ’ ಚಿತ್ರಕ್ಕೆ ಕಾರಟಗಿಯಲ್ಲಿ ಉತ್ತಮ ಪ್ರತಿಕ್ರಿಯೆ

The gathering of North Karnataka talents, the movie ‘Chandrahassa’, received great response in Karnataka

 

 

ಪದ್ಮಾವತಿ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ – ಸ್ಥಳೀಯ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರ ಮೆಚ್ಚುಗೆ

 

ಕಾರಟಗಿ: ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳ ಸಂಗಮವಾಗಿರುವ ‘ಚಂದ್ರಹಾಸ’ ಕನ್ನಡ ಚಲನಚಿತ್ರ ಕಾರಟಗಿಯ ಪದ್ಮಾವತಿ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಜಾಹೀರಾತು

ಅಕ್ಟೋಬರ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿತ್ತು.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು ನಾಯಕನಾಗಿ ನಟಿಸಿರುವ ಈ ಚಿತ್ರ ಅವರ ಮೊದಲ ಸಿನಿಮಾ ಎಂಬ ವಿಶೇಷತೆಯನ್ನು ಹೊಂದಿದೆ. ಆನಂದ ಕಲಕಬಂಡಿ ಜೋಳದಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಮೈಲಾಪುರ ಗ್ರಾಮದ ಬಸನಗೌಡ ಪಾಟೀಲ್ ಅವರ ಅಮರಶ್ರೀ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಚಿತ್ರದ ಕಥಾಹಂದರ:

‘ಚಂದ್ರಹಾಸ’ ಚಿತ್ರದಲ್ಲಿ ಪ್ರೀತಿ, ಪ್ರೇಮ, ಗೆಳೆತನ, ವಾತ್ಸಲ್ಯ ಹಾಗೂ ಭಾವನಾತ್ಮಕ ಸನ್ನಿವೇಶಗಳೊಂದಿಗೆ ಮಧ್ಯಮ ವರ್ಗದ ಜನರ ಬದುಕಿನ ನೈಜ ಜಂಜಾಟಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಚಂದ್ರ ಎಂಬ ಸ್ನೇಹಿತನ ಸುತ್ತ ಸಾಗುವ ಕಥೆಯಲ್ಲಿ ಹಾಸ್ಯ, ಭಾವನೆ ಹಾಗೂ ಜೀವನದ ಮೌಲ್ಯಗಳಿಗೆ ಆದ್ಯತೆ ನೀಡಲಾಗಿದೆ.

ನೈಜ ಬದುಕಿನ ಕಥೆಯೇ ಚಿತ್ರದ ಜೀವಾಳ:

ನಿರ್ದೇಶಕ ಆನಂದ ಕಲಕಬಂಡಿ ಮಾತನಾಡಿ, ಚಂದ್ರಹಾಸ ಚಿತ್ರದ ಕಥೆ ಜೀವನದಲ್ಲಿ ಕಂಡ ಹಲವು ವ್ಯಕ್ತಿಗಳು ಮತ್ತು ಪಾತ್ರಗಳ ಅನುಭವಗಳಿಂದ ರೂಪುಗೊಂಡಿದೆ. ಸಮಾಜದಲ್ಲಿ ಕಾಣುವ ನೈಜ ಬದುಕಿನ ಸನ್ನಿವೇಶಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ನಾಯಕ ನಟ ಹರೀಶ್ ಹಿರಿಯೂರು ಮಾತನಾಡಿ, ತಾವು ರಂಗಭೂಮಿಯಿಂದ ಬಂದ ಕಲಾವಿದರಾಗಿದ್ದು, ಆರಂಭದಲ್ಲಿ ಹಾಸ್ಯದ ಮೂಲಕ ಗುರುತಿಸಿಕೊಂಡಿದ್ದೇನೆ. ಇದೀಗ ‘ಚಂದ್ರಹಾಸ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸುತ್ತಿರುವುದು ಸಂತಸ ತಂದಿದೆ. ಈ ಚಿತ್ರದ ಮೂಲಕ ‘ರಂಗರತ್ನ’ ಎಂಬ ಬಿರುದು ದೊರೆತಿರುವುದು ಹೆಮ್ಮೆಯ ಸಂಗತಿ. ಉತ್ತರ ಕರ್ನಾಟಕದ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಆಗಮಿಸಿ ಸಿನಿಮಾ ವೀಕ್ಷಿಸುವ ಮೂಲಕ ಕಲಾವಿದರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಚಿತ್ರ ನಿರ್ಮಾಣಕ್ಕೆ ತನು, ಮನ, ಧನದಿಂದ ಸಹಕಾರ ನೀಡಿದ ಬಸವಂತಗೌಡರು ಮಾತನಾಡಿ, ‘ಚಂದ್ರಹಾಸ’ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಲಾಪುರ ಗ್ರಾಮದ ಬಸವರಾಜ ಕಲಮಂಗಿ, ದೊಡ್ಡಬಸವ ಕುರಕೋಟಿ, ದೇವರಾಜಗೌಡ ಪೊಲೀಸ್ ಪಾಟೀಲ್, ಬಸವರಾಜ ಕುರ್ತಕೋಟಿ, ಬಸವರಾಜ ಗೋನಾಳ, ಮಲ್ಲೇಶಪ್ಪ ಮಕಾಶಿ, ದೇವೇಂದ್ರಪ್ಪ ಬೊಮ್ಮನಾಳ, ಶಿವರಾಜ ಹಾದಿಮನಿ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಚಿತ್ರದ ವಿವರಗಳು:

Total Views: 1
ಜಾಹೀರಾತು
Share This Article
Leave a Comment