ಮಹಾನ ಕಿಡ್ಸ್ ಶಾಲೆಯಲ್ಲಿ ಸಂಭ್ರಮದ ನೂಲ ಹುಣ್ಣಿಮೆ; ರಕ್ಷಾಬಂಧನ ಆಚರಣೆ

H.Mallikarjun
H.Mallikarjun - Kalyanasiri
1 Min Read

Grand Kids School celebrates a joyful New Moon; Rakshabandhan celebration

 

ಮಹಾನ ಕಿಡ್ಸ್ ಶಾಲೆಯಲ್ಲಿ ಸಂಭ್ರಮದ ನೂಲ ಹುಣ್ಣಿಮೆ; ರಕ್ಷಾಬಂಧನ ಆಚರಣೆ

ಜಾಹೀರಾತು

 

ಗಂಗಾವತಿ, ಆ.28: ನಗರದ ಮಹಾನ ಕಿಡ್ಸ್ ಶಾಲೆಯಲ್ಲಿ ನೂಲ ಹುಣ್ಣಿಮೆ ಹಬ್ಬದ ವಿಶೇಷತೆ ಹಾಗೂ ಮಹತ್ವವನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ ರಕ್ಷಾಬಂಧನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಸಹೋದರಿ ವಿದ್ಯಾರ್ಥಿನಿಯರು ತಮ್ಮ ಸಹೋದರ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ, ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯ ಹಾಗೂ ಭ್ರಾತೃತ್ವದ ಸಂದೇಶ ಸಾರಿದರು. ಸಹೋದರ ವಿದ್ಯಾರ್ಥಿಗಳು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು. ವಿದ್ಯಾರ್ಥಿನಿಯರು ಸಹೋದರರಿಗೆ ಸಿಹಿ ತಿನಿಸಿ ಸಂತಸ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿಯರಾದ ಪೂರ್ಣಿಮಾ, ಕುಮುದಿನಿ, ಅಶ್ವಿನಿ, ಚಂಪಾರಾಣಿ, ಸಹನ, ಶಾಂತ, ಅರುಣ, ಜ್ಯೋತಿ, ದೀಪ, ರೇಷ್ಮಾ, ಶಿಲ್ಪ, ಮುಬಿನ, ಸವಿತಾ, ಇಂದು, ಮುಸ್ಕಾನ್, ಪೌಜಿಯ ಹಾಗೂ ಶಿಕ್ಷಕರಾದ ಸಿದ್ದೇಶ್ ಕುಮಾರ್, ಪಂಪಾಪತಿ, ಈರಯ್ಯ, ಕನಕರಾಯ ಸೇರಿದಂತೆ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article