Breaking News

ಮಾಧ್ಯಮ ಆಲೋಚನೆಗಳನ್ನು ಪ್ರಚೋದಿಸಬೇಕು, ಪ್ರಚೋದನಕಾರಿಯಾಗಬಾರದು: ಪತ್ರಿಕೋದ್ಯಮದಲ್ಲಿ ಆಂತರಿಕ ಧರ್ಮ ಪರಿಪಾಲಿಸಬೇಕು – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್





Media should stimulate ideas, not be provocative: Journalism should practice internal religion - Supreme Court Justice Arvind Kumar
  • ವಕೀಲರ ವಾಹಿನಿಯಿಂದ “ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ನಿರ್ಬಂಧ, ಸಮತೋಲನ ಕಾಯ್ದೆ” ಕುರಿತು ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಸ್ಮಾರಕ ಉಪನ್ಯಾಸ
  • ಬೆಂಗಳೂರು,ಜು.4: ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಇದು ಅಧಿಕಾರವನ್ನು ರಕ್ಷಿಸುವುದಲ್ಲ, ಬದಲಿಗೆ ಆಲೋಚನೆಗಳನ್ನು ಪ್ರಚೋದಿಸಬೇಕು. ಆದರೆ ಪ್ರಚೋದನಕಾರಿಯಾಗಬಾರದು. ಸ್ವಾತಂತ್ರ್ಯವನ್ನು ಉತ್ತೇಜಿಸುವ ಜೊತೆಗೆ ನಿಷ್ಠುರವಾಗಿರಬೇಕು ಮತ್ತು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್ ಹೇಳಿದ್ದಾರೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ವಕೀಲರ ವಾಹಿನಿ ಮೂಲಕ ಆಯೋಜಿಸಿದ್ದ “ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ನಿರ್ಬಂಧ, ಸಮತೋಲನ ಕಾಯ್ದೆ” ಕುರಿತು ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಸ್ಮಾರಕ ಉಪನ್ಯಾಸ ನೀಡಿದ ಅವರು, ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯಬೇಕು. ಮಾಧ್ಯಮದ ನಾಲಿಗೆಗೆ ಸ್ವಾತಂತ್ರ್ಯವಿರಬಹುದು. ಆದರೆ ವಿವೇಚನೆ ಹೊಂದಿರಬೇಕು. ಸಂಪಾದಕರು, ನಿರೂಪಕರು, ಡಿಜಿಟಲ್ ಪ್ರಭಾವಿಗಳು ಮಾಧ್ಯಮವನ್ನು ಪ್ರಚೋದನೆಗಾಗಿ ಬಳಸಿಕೊಳ್ಳಬಾರದು. ನೈತಿಕ ಸ್ಫೂರ್ತಿಯ ಮೂಲಕ ಸ್ವಧರ್ಮವನ್ನು ಕಾಪಾಡಬೇಕು. ಪತ್ರಿಕೋದ್ಯಮದಲ್ಲಿ ಆಂತರಿಕ ಧರ್ಮವನ್ನು ಪರಿಪಾಲಿಸಬೇಕು. ಪತ್ರಿಕೋದ್ಯಮ ಎಂದರೆ ಸತ್ಯ ಪರಿಶೋಧನೆಯಾಗಿದ್ದು, ಯಾರಿಗೂ ಹಾನಿ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಜವಾಬ್ದಾರಿತನದಿಂದ ಮುನ್ನಡೆಯಬೇಕು ಎಂದು ಹೇಳಿದರು.

ಜಾಹೀರಾತು

ಮಾಧ್ಯಮಗಳು ತನಿಖಾ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಹಾಗೆಂದು ತೀರ್ಪು ನೀಡಲು ಹೋಗಬಾರದು. ಮಾಧ್ಯಮ ಸ್ವಾತಂತ್ರ್ಯ ಪ್ರಕಟಣೆಗಷ್ಟೇ ಸೀಮಿತವಲ್ಲ, ಬದಲಿಗೆ ವ್ಯವಸ್ಥೆಗೆ ಒಂದು ಸ್ಪಷ್ಟ ಸ್ವರೂಪ ನೀಡಬೇಕು. ಪತ್ರಿಕೋದ್ಯಮ ಮುಕ್ತವಾಗಿ ಅಷ್ಟೇ ಅಲ್ಲದೇ ಸರಿಯಾಗಿ ಮಾತನಾಡಬೇಕು. ಮಾಧ್ಯಮ ಎಂಬುದು ಋಷಿಯಂತೆ. ಸತ್ಯಕ್ಕಾಗಿ ನಿರಂತರವಾಗಿ ಪ್ರಶ್ನೆ ಮಾಡಬೇಕು. ವೈಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಮಾಧ್ಯಮ ಸ್ವಾತಂತ್ರ್ಯ ಎಂದರೆ ಅದು ಸಾಂವಿಧಾನದ ನೈತಿಕತೆಯಾಗಿದ್ದು, ಅದು ಕಾನೂನಿನ ಹಕ್ಕು ಅಲ್ಲ. ಅದು ನೈತಿಕತೆಯನ್ನು ಕಾಪಾಡಿಕೊಂಡು ಹೋಗುವಂತಿರಬೇಕು. ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು. ಪತ್ರಕರ್ತರು ಮತ್ತು ವೈದ್ಯರು ಸಾಮಾಜಿಕ ವೈದ್ಯರು ಎಂದು ವಿಶ್ಲೇಷಿಸಿದರು.

ಜಸ್ಟೀಸ್ ಕೆ.ಆರ್, ಗೋಪಿ ವಲ್ಲಭ ತುಮಕೂರಿನವರು, ಆಗಿನ ಮೈಸೂರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನಿಟ್ಟೂರು ಶ್ರೀನಿವಾಸ ರಾವ್ ಅವರಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದರು. ಒಮ್ಮೆ ನಿಟ್ಟೂರು ಶ್ರೀನಿವಾಸ್ ಅವರಲ್ಲಿ ನಾನು ಕೇಳಿದ್ದೆ ನಿಮ್ಮ ಕಿರಿಯ ವಕೀಲರು ಯಾರು ಉತ್ತಮರು ಎಂದು ಪ್ರಶ್ನಿಸಿದಾಗ ಜಸ್ಟೀಸ್ ಕೆ.ಆರ್, ಗೋಪಿ ವಲ್ಲಭ ಅಯ್ಯಂಗಾರ್ ಎಂದು ಹೇಳಿದ್ದರು. ಹೇಗೆ ಪ್ರಕರಣಗಳಲ್ಲಿ ಹೇಗೆ ವಾದಿಸಬೇಕು. ವಕೀಲರ ನೀತಿ, ಸಿದ್ಧಾಂತಗಳು, ಶಿಸ್ತು ಹೇಗಿರಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ಇತರೆ ವಕೀಲರಿಗೆ ಅವರು ಮಾದರಿಯಾಗಿದ್ದರು ಎಂದರು.

ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರ ಮೊಮ್ಮಗಳು ಮತ್ತು ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾಮೂರ್ತಿ ಮಾತನಾಡಿ, ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಭವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ಅವರು ಮೌನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ತಪ್ಪು ಮಾಡಿದ್ದರೆ ಅದನ್ನು ಅರ್ಥಮಾಡಿಕೊಂಡು ನಾವೇ ತಿದ್ದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಹಲವಾರು ಹಿರಿಯ ವಕೀಲರು, ನ್ಯಾಯಾಂಗದ ಗಣ್ಯರ ಜೊತೆ ಸಂವಾದ ನಡೆಸಲು ತಮಗೆ ಸಾಧ್ಯವಾಯಿತು ಎಂದರು.

ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ್ ಹೊಳ್ಳ ಮಾತನಾಡಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಾಧ್ಯಮದ ಪಾತ್ರ ಅನನ್ಯ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮಗಳು ಪ್ರಜಾತಂತ್ರ ರಕ್ಷಣೆಗಾಗಿ ಮಾಡಿದ ಹೋರಾಟ ಮರೆಯಲು ಸಾಧ್ಯವೇ ಇಲ್ಲ ಎಂದರು.

ವಕೀಲರ ವಾಹಿನಿ ಸಂಪಾದಕರು ಮತ್ತು ಪ್ರಕಾಶಕರಾದ ಡಾ.ಡಿ.ಎಂ. ಹೆಗ್ಡೆ ಮಾತನಾಡಿ, ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ನ್ಯಾಯಾಂಗ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ವಕೀಲ ಸಮುದಾಯ ಅನುಸರಿಸುವಂತಾಗಬೇಕು ಎಂದು ಹೇಳಿದರು.

ವಕೀಲರ ವಾಹಿನಿ ಸ್ಥಾಪಕರಾದ ಅರವಿಂದ್ ನೆಗಲೂರು, ಮುಖ್ಯ ಸಂಪಾದಕ ಎಸ್.ಎನ್. ಪ್ರಶಾಂತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್
ನನ್ನ ತಂದೆ ಎಚ್.ಕೆ. ಕುಮಾರ ಸ್ವಾಮಿ ಮೂಲತಃ ಸಹಕಾರಿ ಧುರೀಣರು. ಜೊತೆಗೆ ಪತ್ರಕರ್ತರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಾಲ್ಕು ವರ್ಷ ಮೈಸೂರು ಜೈಲಿನಲ್ಲಿದ್ದರು. ಆಗ ಮೂರನೇ ವರ್ಷ ಅವರಿಗೆ ಸ್ವಲ್ಪ ಸ್ವಾತಂತ್ರ್ಯ ದೊರೆತಿತ್ತು. ಮನೆಯಿಂದ ಒಂದು ಹೊತ್ತಿನ ಊಟ ತರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮನೆಯಿಂದ ಪ್ರತಿದಿನ ಟಿಫಿನ್ ಬಾಕ್ಸ್ ಬರುತ್ತಿದ್ದು. ಆಗ ಈ ಅವಕಾಶವನ್ನು ಬಳಸಿಕೊಂಡು ಸಾಧ್ವಿ ಪತ್ರಿಕೆಗೆ ನಮ್ಮ ತಂದೆ ಪ್ರತಿದಿನ ಲೇಖನ ತಲುಪಿಸುತ್ತಿದ್ದರು. ಇದು ತಿಳಿದ ನಂತರ ಅವರನ್ನು ಮೈಸೂರಿನಿಂದ ಹಾಸನ ಜೈಲಿಗೆ ವರ್ಗಾಯಿಸಿದ್ದರು. ಹಾಸನದಲ್ಲಿ ಅವರಿಗೆ ಹಾರ್ನಳ್ಳಿ ರಾಮಸ್ವಾಮಿ ಜೊತೆಯಾದರು. ತನ್ನ ಕೊನೆಯ ಹಂತದವರೆಗೆ ನನ್ನ ತಂದೆ ಪತ್ರಕರ್ತ ಎನ್ನುವ ಹಣೆಪಟ್ಟಿಯನ್ನು ಅಂಟಿಕೊಂಡಿಸಿದ್ದರು.

  • ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್

  • “Media Must Provoke Thought, Not Incite Emotion: Supreme Court Judge Justice Aravind Kumar
    Upholding Inner Integrity is Essential in Journalism
    Bengaluru, July 4:
    “The media is the fourth pillar of the Constitution—not to protect power, but to provoke thought. However, it must not become an instrument of provocation,” stated Supreme Court Judge Justice Aravind Kumar during the Justice K.R. Gopi Vallabha Iyengar Memorial Lecture held in the city. The lecture on “Freedom and Restrictions of Media – A Balance of Law” was organised by Vakilara Vahini (Lawyers’ Forum) at Bharatiya Vidya Bhavan.
    Addressing the gathering, Justice Kumar emphasized that while the media must celebrate freedom, it must also maintain responsibility and balance. “Freedom of expression is vital, but discernment is equally essential. Editors, anchors, and digital influencers must not misuse the power of media for incitement. Instead, the profession must uphold its moral purpose with an inner sense of discipline,” he remarked.
    He described journalism as a pursuit of truth that should not cause harm to anyone. “The media must act in public interest, guided by responsibility and fairness. Investigative journalism should be encouraged—but not at the cost of delivering verdicts. Media freedom should not remain merely a matter of legal declaration, but a reflection of constitutional morality,” he noted.
    “Journalists must self-regulate. Media, like sages, must persistently question in pursuit of truth, without infringing on individual liberties. Freedom of the press is a moral responsibility, not merely a legal entitlement,” he observed, further adding that “journalists and doctors are both social healers.”
    Reflecting on the legacy of Justice K.R. Gopi Vallabha Iyengar, Justice Kumar recalled a conversation with legendary Mysore Chief Justice Nittur Srinivasa Rao. When asked who his most distinguished junior advocate was, Justice Rao had named Iyengar. “Justice Iyengar set high standards in ethics, advocacy, and discipline, serving as a model for fellow lawyers,” he noted.
    Speaking on the occasion, Dr. Pratima Murthy, Director of NIMHANS and granddaughter of Justice K.R. Gopi Vallabha Iyengar, said, “He left behind a remarkable legacy in the judiciary. He used silence as a powerful tool, inspiring people to introspect and reform. I had the opportunity to engage with several eminent legal minds, thanks to his legacy.”
    Senior Advocate and former Advocate General Uday Holla emphasized the irreplaceable role of the media in preserving democracy. “We can never forget the courageous role the media played during the Emergency to safeguard democratic values,” he said.
    Dr. D.M. Hegde, Editor and Publisher of Vakilara Vahini, said, “Justice Iyengar has left an indelible mark in the legal world. It is our responsibility to walk the path he paved and uphold his principles in the legal community.”
    Also present at the event were Vakilara Vahini founder Aravind Negalur, Editor-in-Chief S.N. Prashanth Chandra, and several dignitaries from the legal fraternity.

    Box Item
    “My father, H.K. Kumaraswamy, was a cooperative leader and journalist. During the freedom movement, he was imprisoned for four years in Mysore Jail. In his third year, he was granted a small privilege—to receive a home-cooked meal once a day. He used this opportunity to send daily articles to Sadhvi Patrike through the tiffin box. When authorities discovered this, he was transferred to Hassan Jail, where he was joined by Harnalli Ramaswamy. Until his final days, my father carried the identity of being a journalist with pride.”
    Justice Aravind Kumar, Supreme Court of India

About Mallikarjun

Check Also

ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಗೆ ಗೈರು ಹಾಜರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ: ನಿರುಪಾದಿ ಹಡಪದ

Disciplinary action demanded against government officials who were absent from the preliminary meeting held as …

Leave a Reply

Your email address will not be published. Required fields are marked *