Teachers should play an important role to build a corruption free society; Justice Santosh Hegde
ಬೆಂಗಳೂರು, ಜ 26: ಬಸವೇಶ್ವರ ಶಿಕ್ಷಣ ಸಂಸ್ಥೆಯ 24ನೇ ವರ್ಷದ ಶಾಲಾ ವಾರ್ಷಿಕೋತ್ಸವಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಚಾಲನೆ ನೀಡಿದರು. ಮೇಡ ಪ್ರತಿಷ್ಠಾನದ ಟ್ರಸ್ಟಿ ರಮೇಶ್ ಕೆ ಮೇಡ, ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟರಾಮೇಗೌಡ, ಕಾಪ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ – ಉದ್ಯಮಿ ಆರ್. ಗಂಗಾಧರ, ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಶ್ರೀನಿವಾಸ, ಪ್ರಾಂಶುಪಾಲೆ ರಂಗಲಕ್ಷ್ಮೀ ಶ್ರೀನಿವಾಸ ಮತ್ತಿರರು ಉಪಸ್ಥಿತರಿದ್ದರು.
ಬಳಿಕ ಸಂತೋಷ್ ಹೆಗಡೆ ಅವರು ಮಾತನಾಡಿ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಸುಂದರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಪಠ್ಯದ ಕಲಿಕೆಯ ಜೊತೆಜೊತೆಗೆ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಅತ್ಯಗತ್ಯ ಎಂದು ಹೇಳಿದರು.
ನಂತರ ಮಾತನಾಡಿದ ವೆಂಕಟರಾಮೇಗೌಡರು, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಕರ ಜೊತೆಗೆ ಪೋಷಕರ ಸಹಕಾರ ಅಗತ್ಯ ಎಂದು ವಿವರಿಸಿದರು.
ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ನೆರವು ನೀಡುವುದಾಗಿ ಇದೇ ವೇಳೆ ಉದ್ಯಮಿ ಗಂಗಾಧರ ಪ್ರಕಟಿಸಿದರು. “ಭಾರತ ಉತ್ಸವ” ಶೀರ್ಷಿಕೆಯಡಿ ವಿದ್ಯಾರ್ಥಿಗಳು ನೀಡಿದ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು. ನಾಡು ನುಡಿಯ ಮಹತ್ವ ತಿಳಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಹಾಸ್ಯ ನಾಟಕ, ಪೌರಾಣಿಕ ನಾಟಕ, ದೇಶಭಕ್ತಿ ಗೀತೆಗಳು ಮಾತ್ರವಲ್ಲದೇ ಕೀಬೋರ್ಡ್ ವಾದನ, ಯೋಗ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
Driver organizations protest against unauthorized Rapido, Ola, Uber, goods portals: innovative protest with empty plates, plates
ಬೆಂಗಳೂರು, ಜ, 25; ಅನಧಿಕೃತವಾಗಿ ನಡೆಯುತ್ತಿರುವ ರಾಪಿಡೋ, , ಓಲಾ, ಉಬರ್, ಹಾಗೂ ಗೂಡ್ಸ್ ಪೋರ್ಟರ್ ನಂತಹ ಆನ್ಲೈನ್ ಸಂಸ್ಥೆಗಳು ವಿರುದ್ಧ ಹಾಗೂ ಇಂತಹ ಕಾನೂನುಬಾಹಿರ ಸಂಸ್ಥೆಗಳನ್ನು ಪೋಷಿಸುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆ ಪ್ರತಿಭಟಿಸಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ಪ್ರತಿನಿಧಿಗಳು ಫ್ರೀಡಂ ಪಾರ್ಕ್ ನ ಭಗತ್ ಸಿಂಗ್ ಪ್ರತಿಮೆ ಎದುರು ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು. ಚಾಲಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಚಾಲಕರು ಖಾಲಿ ಪಾತ್ರೆ ಸಾಮಾನುಗಳನ್ನು ಬಡಿದು, ಕಪ್ಪು ಪಟ್ಟಿ ಧರಿಸಿ ಘೋಷಣೆ ಕೂಗಿದರು. ಕಾನೂನು ಬಾಹಿರ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಸರ್ಕಾರದಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪದೇ ಪದೇ ಮಾಡಿದ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸಾರಿಗೆ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದೇವೆ. ಸರ್ಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ತಾರತಮ್ಯ ಮಾಡುತ್ತಿರುವ ಓಲಾ, ಉಬರ್ ಗೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ. ಚಾಲಕರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೂ ಕೂಡ ನೇರ ಹೊಣೆ. ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜುಕನ್ನಡಿಗ ಮಾತನಾಡಿ, ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕ್ಷುಲ್ಲಕ ಕಾರಣಗಳನ್ನು ನೀಡಿ ಚಾಲಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತಮಟ್ಟದ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
Two separate thefts in Arala village of Gangavati taluk. Thieves who stole money and goods
ವರದಿ : ಪಂಚಯ್ಯ ಹಿರೇಮಠ. ಗಂಗಾವತಿ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಬೀಗಿ ಮುರಿದು ಅಲಮಾರದಲ್ಲಿದ್ದ 2.15 ಲಕ್ಷ ರೂಪಾಯಿ ಮತ್ತು 3.45 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ತಾಲೂಕಿನ ಆರಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ವೀರೇಶ ಅಡಿವೆಪ್ಪ ಪಟ್ಟಣ ಶೆಟ್ಟಿ ಎನ್ನುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಉಡಮಕಲ್ ರಸ್ತೆಯ ಮಾರ್ಗದಲ್ಲಿರುವ ವೀರೇಶ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಾರೆ. ಪತ್ನಿ ಮತ್ತು ಮಗಳು ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮೆನೆಯ ಬೀಗ ಮುರಿದು ಮನೆಯ ಅಲಮಾರದಲ್ಲಿದ್ದ ಹಣ, ಚಿನ್ನದ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ. ವೀರೇಶ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಣೆಗೆ ವಿಭೂತಿ ಹಚ್ಚಿ 12 ಸಾವಿರ ಅಪಹರಣ,,
ಆರಾಳ ಗ್ರಾಮದಲ್ಲಿ ಮತ್ತೋಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವಿ ಬಟ್ಟೆ ಧರಿಸಿ ಬಂದ ಪೂಜಾರಿಗಳು ವ್ಯಕ್ತಿಯ ಹಣೆಗೆ ವಿಭೂತಿ ಹಚ್ಚಿ 12 ಸಾವಿರ ರೂಪಾಯಿ ಅಪಹರಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಮನೆಯೊಂದಕ್ಕೆ ಹೋಗಿದ್ದ ನಾಲ್ವರು ಕಾವಿಧಾರಿಗಳು ಕಾಣಿಕೆ ಕೊಡುವಂತೆ ಕೋರಿದ್ದಾರೆ. ಆಗ ಮನೆಯಲ್ಲಿದ್ದ ವ್ಯಕ್ತಿ 20 ರೂಪಾಯಿ ನೀಡಲು ಮುಂದಾಗಿದ್ದಾರೆ. ಅದನ್ನು ನಿರಾಕರಿಸಿದ ಕಾವಿಧಾರಿಗಳು ದೇವಸ್ಥಾನಕ್ಕೆ 2 ಚೀಲ ಸಿಮೇಂಟ್ ಕೇಳಿದ್ದಾರೆ. ಅಲ್ಲದೆ ಕುಡಿಯಲು ನೀರು ಕೇಳಿದ್ದಾರೆ. ನೀರು ಕೊಟ್ಟು 100ರೂಪಾಯಿ ಕಾಣಿಕೆ ನೀಡಿ ನಮಸ್ಕರಿಸುತ್ತಿದ್ದಾಗ ಹಣೆಗೆ ವಿಭೂತಿ ಹಚ್ಚಿದ್ದಾರೆ. ಕೆಲವೇ ಕ್ಷಣದಲ್ಲಿ ವ್ಯಕ್ತಿ 12 ಸಾವಿರ ನೀಡಿದ್ದಾರೆ.
ಆ ಸಂದರ್ಭ ವಿಭೂತಿ ಹಚ್ಚಿಸಿಕೊಂಡಿದ್ದ ವ್ಯಕ್ತಿಗೆ ಪ್ರಜ್ಞೆ ಇಲ್ಲದಂತಾಗಿದೆ. ಎಚ್ಚರವಾಗಿ ನೋಡಿದಾಗ ಕಾವಿಧಾರಿಗಳು ಇರಲಿಲ್ಲ. ಮನೆಯಲ್ಲಿದ್ದ 12 ಸಾವಿರ ಕೊಟ್ಟಿದ್ದು ನೆನಪಿಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಪಟ್ಟಣದಲ್ಲಿ ಎಲ್ಲೆಡೆ ಸ್ವಾನಗಳ. ಹಾವಳಿ ,ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ
ಕೊಟ್ಟೂರು ಪಟ್ಟಣದ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸ್ನಾನಗಳ ಹಾವಳಿ ಹೆಚ್ಚಾಗುತ್ತಿದೆ ಆದರೆ ಪಟ್ಟಣ ಪಂಚಾಯಿತಿ ಯಿಂದ ಜಾಣ ಕುರುಡು ಪ್ರದರ್ಶನ ಮುಂದುವರಿದಿದೆ.
ಮುಖ್ಯವಾಗಿ ಪುಟ್ಟರಾಜು ಬಡಾವಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ, ಬಸವೇಶ್ವರ ಬಡಾವಣೆ, ಮುದುಕನ ಕಟ್ಟೆ, ಕೆಳಗೇರಿ ರಾಜೀವ ನಗರ ನಾಯಿ ಗಳ ಹಾವಳಿ ಬಹಳವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು ಸಣ್ಣ ಮಕ್ಕಳು ರಸ್ತೆಯಲ್ಲಿ ಆಟ ಆಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರು ವಯೋ ವೃದ್ಧರು ರಸ್ತೆಗಳಲ್ಲಿ ಓಡಾಡುವಾಗ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ಬಂದೊದಗಿದೆ.
ನಾಯಿಗಳ ಹಾವಳಿಯ ಬಗ್ಗೆ ಸಾರ್ವಜನಿಕರು ಹಲವಾರು ಸಂಘ ಸಂಸ್ಥೆಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌ಗಳ ಮೂಲಕ ಅಲ್ಲಲ್ಲಿ ನಾಯಿಗಳು ಆಟವಾಡುತ್ತಿರುವ ಮಕ್ಕಳ ಮೇಲೆ. ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳುವ ಮಹಿಳೆಯರು, ಹಿರಿಯ ನಾಗರಿಕರಿಗೆ ತೊಂದರೆ ಕೊಡುತ್ತಾ ಹಲ್ಲೆ ಆಗಿರುವ ಘಟನೆಗಳು ಈ ಹಿಂದೆ ನಡೆದಿವೆ ಮುಂದಿನ ದಿನಗಳಲ್ಲಿ ನಡೆದಂತೆ ಕ್ರಮವಹಿಸುವಂತೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರಾದ ಹಿರಿಯ ನಾಗರಿಕರ ಮಹಾಂತೇಪ್ಪ, ಮಂಜುನಾಥ್ , ಮಂಡಕ್ಕಿ ಪ್ರಕಾಶ್,ಶಫೀ ಪತ್ರಿಕೆಗೆ ತಿಳಿಯಪಡಿಸಿದ್ದಾರೆ.
ಕೊಟ್ -1 ಕೊಟ್ಟೂರು ಪಟ್ಟಣದ್ಯಂತ ಒಂದು ಅಂದಾಜನ ಪ್ರಕಾರ 500 ರಿಂದ 600ಕ್ಕೂ ಹೆಚ್ಚು ನಾಯಿಗಳಿದ್ದು ಹಲವಾರು ಬಡಾವಣೆಗಳಲ್ಲಿ ಇವುಗಳ ತೊಂದರೆ ಬಹಳ ಮಿತಿಮೀರಿ ಹೋಗಿದೆ ಈ ಹಿಂದೆ ಹಲವಾರು ಮಕ್ಕಳಿಗೆ. ಯುವಕರಿಗೆ ವೃದ್ಧರಿಗೆ ಕಚ್ಚಿ ಬಹಳಷ್ಟು ತೊಂದರೆ ಕೊಡುತ್ತಿವೆ ಕೆಲವರು ಪಟ್ಟಣ ಪಂಚಾಯಿತಿ ಸದಸ್ಯರ ಬಳಿ ದೂರುತ್ತಾರೆ.ಕೆಲವರು ದೂರಿದರೂ ಪ್ರಯೋಜನ ವಿಲ್ಲ ಎಂದು ತಮ್ಮ ಪಾಡಿಗೆ ತಾವು ಚಿಕಿತ್ಸೆಯನ್ನ ಮಾಡಿಸಿಕೊಳ್ಳುತ್ತಾರೆ.
ಪಟ್ಟಣ ಪಂಚಾಯಿತಿ ಸದಸ್ಯರುಗಳು ತಮ್ಮ ವಾರ್ಡ್ಗಳಲ್ಲಿ ಓಡಾಡುವುದೇ ತೊಂದರೆಯಾಗಿದೆ ಹಲವಾರು ರೀತಿಯಲ್ಲಿ ಬೈಗುಳ ತಿನ್ನಬೇಕಾಗಿದೆ .ಪಟ್ಟಣ ಪಂಚಾಯಿತಿ ದೂರಿದರೆ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲ ಇದರಿಂದ ಸಾರ್ವಜನಿಕರು ಹಾಗೂ ಋಷಿ ಹೋಗಿದ್ದೇವೆ ಕೂಡಲೇ ಇದಕ್ಕೊಂದು ಪರಿಹಾರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಎಂದು ಹೆಸರು ಇಚ್ಛೆಸದ ಪಟ್ಟಣ ಪಂಚಾಯಿತಿ ಸದಸ್ಯರು
ಕೊಟ್ -2 ಪಟ್ಟಣದ ಎಲ್ಲಾ ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು ಹಾವಳಿ ಹೆಚ್ಚಾಗಿದ್ದು .ಸಾರ್ವಜನಿಕರಿಗೆ ತೊಂದರೆ ಆಗದಂತೆ ಈ ವಿಷಯದ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಗಮನಕ್ಕೆ ತಂದು ಸರಿಪಡಿಸಲು ತಿಳಿಸುತ್ತೇವೆ. ಎಂದು ಪಟ್ಟಣ ಪಂಚಾಯತಿ ಸದಸ್ಯೆ ಲಕ್ಷ್ಮಿ ಚನ್ನಪ್ಪ ಅವರು ತಿಳಿಸಿದರು
Heroor appeals to Union Finance Minister Nirmala Sitarama for railway line grant
ಗಂಗಾವತಿ:ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ರೈಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೂತನ 31.30 ಕಿ.ಮಿ.ಬ್ರಾಡ್ ಗೇಜ್ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ರೂ.919.49 ಕೋಟಿ ಹಣ ಮತ್ತು ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗದ ಅಂದಾಜು ಮೊತ್ತದಲ್ಲಿ ಕೇಂದ್ರ ಸರಕಾರದ ಪಾಲನ್ನು ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಹಿಂದಿನ ನಿರ್ದೇಶಕ ಅಶೋಕಸ್ವಾಮಿ ಹೇರೂರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರಿಗೆ ಮನವಿ ಮಾಡಿದ್ದಾರೆ.
ಸಧ್ಯ ಗಂಗಾವತಿ ನಗರದಿಂದ ಬಳ್ಳಾರಿ ನಗರಕ್ಕೆ ರಸ್ತೆ ಮಾರ್ಗವಾಗಿ ಕೇವಲ 60 ಕಿ.ಮಿ.ಅಂತರವಿದ್ದು ರೇಲ್ವೇ ಮಾರ್ಗದ ಮೂಲಕ ಬಳ್ಳಾರಿ ತಲುಪಬೇಕಾದರೆ, ಗಂಗಾವತಿಯಿಂದ ಗಿಣಿಗೇರಾ ರೈಲ್ವೆ ನಿಲ್ದಾಣಕ್ಕೆ ವಿರುದ್ಧ ಧಿಕ್ಕಿನಲ್ಲಿ (28.ಕಿ.ಮಿ.) ತಲುಪಿ, ಅಲ್ಲಿ ಇಂಜಿನ್ ಬದಲಿಸಿ, ಅಲ್ಲಿಂದ ಹೊಸಪೇಟೆ ಮಾರ್ಗವಾಗಿ ದರೋಜಿ ರೈಲ್ವೆ ನಿಲ್ದಾಣ ತಲುಪಬೇಕು (64 ಕಿ.ಮಿ.) ಅಲ್ಲಿಂದ ಬಳ್ಳಾರಿ (27ಕಿ.ಮಿ.) ಇದರಿಂದ ಒಟ್ಟು 119 ಕಿ.ಮಿ.ಅಂತರವನ್ನು ಕ್ರಮಿಸಿ ಬಳ್ಳಾರಿ ನಗರವನ್ನು ತಲುಪಬೇಕಾಗುತ್ತದೆ. ಇದರಿಂದ ಇಂಧನ ಮತ್ತು ಸಮಯದ ವ್ಯಯವಾಗುತ್ತಿದೆ.ಪ್ರಯಾಣ ಮತ್ತು ಸರಕು ಸಾಗಾಟದ ವೆಚ್ಚ ಹೆಚ್ಚಾಗುತ್ತಿದೆ.
ಈಗ ಸಂಚರಿಸುತ್ತಿರುವ ಸಿಂಧನೂರು-ಬೆಂಗಳೂರು ರೈಲ್ವೆ ಇದೇ ಮಾರ್ಗದಲ್ಲಿ (ಸಿಂಧನೂರು-ಗಂಗಾವತಿ-ಗಿಣಿಗೇರಾ-ಹೊಸಪೇಟೆ- ಬಳ್ಳಾರಿ ಮಾರ್ಗ) ಸಂಚರಿಸುತ್ತಿದೆ.ಇದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ಹಿಡಿಯುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಹಾಗೂ ಸರಕು ಸಾಗಾಟಕ್ಕೂ ಅಡಚಣೆಯಾಗಿದೆ.ಉದ್ದೇಶಿತ ಗಂಗಾವತಿ-ದರೋಜಿ ರೈಲ್ವೆ ಲೈನ್ ನಿರ್ಮಾಣವಾದರೆ,ಗಂಗಾವತಿ ನಗರದಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಇದರಿಂದ ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಹಾಗೂ ಗುಂತಕಲ್ ರೈಲ್ವೆ ಜಂಕ್ಷನ್ ತಲುಪಲು ಸರಳ ಸಾಧ್ಯವಾಗುತ್ತದೆ.ಗಂಗಾವತಿ ತಾಲೂಕು (ಕೊಪ್ಪಳ ಜಿಲ್ಲೆ) ಮತ್ತು ಸಿಂಧನೂರು ತಾಲೂಕಿನಲ್ಲಿ (ರಾಯಚೂರು ಜಿಲ್ಲೆ) ಅತಿ ಹೆಚ್ಚು ಭತ್ತ ಬೆಳೆಯುವುದರಿಂದ ಅಕ್ಕಿಯನ್ನು ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ರವಾನಿಸಲು ಸರಳವಾಗುತ್ತದೆ.ಭತ್ತದ ಕೊಯ್ಲು ಯಂತ್ರಗಳನ್ನು ಸಾಗಿಸಲು ಮತ್ತು ತರಿಸಿಕೊಳ್ಳಲು ಅನುಕೂಲವಾಗುತ್ತದೆ.
ಇದೇ ರೀತಿ ಭತ್ತ ಬೆಳೆಯಲು ಬೇಕಾದ ಗೊಬ್ಬರ ಹಾಗೂ ಕ್ರಿಮಿನಾಶಕಗಳ ವಹಿವಾಟಿಗೆ ಸಹಾಯವಾಗುತ್ತದೆ. ಸಿಮೆಂಟ್,ಕಬ್ಬಿಣ ಸೇರಿದಂತೆ ಇತರ ಸಾಮಗ್ರಿಗಳನ್ನು ತರಿಸಿಕೊಳ್ಳಲು ಸರಳವಾಗುತ್ತದೆ. ಇಡೀ ಭಾರತದಲ್ಲಿಯೇ ಅತ್ಯಧಿಕ ಸಂಖ್ಯೆಯ ಟ್ರಾಕ್ಟರ್ ಮತ್ತು ಆಟೋಮೊಬೈಲ್ ಗಳನ್ನು ಹೊಂದಿರುವ ಎರಡನೆಯ ಪ್ರಮುಖ ಸ್ಥಳವಾದ ಸಿಂಧನೂರು ಭಾಗಕ್ಕೆ ಟ್ಯಾಕ್ಟರ್ ಹಾಗೂ ಆಟೊಮೊಬೈಲ್ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಅನುಕೂಲವಾಗುತ್ತದೆ.
ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲ್ವೆ ಲೈನ್ ಮಾರ್ಗದಿಂದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರಾಶಸ್ತ್ರ ಕೊಟ್ಟಂತಾಗುತ್ತದೆ. ಆದ್ದರಿಂದ ದಯವಿಟ್ಟು ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲ್ವೆ ಲೈನ್ ನಿರ್ಮಾಣಕ್ಕಾಗಿ ಮತ್ತು ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ತೀವ್ರ ಒತ್ತು ಕೊಟ್ಟು ಕಾಮಗಾರಿಗೆ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.
MLA M R Manjunath who gave agricultural services to the farmers.
ವರದಿ: ಬಂಗಾರಪ್ಪ .ಸಿ . ಹನೂರು : ರೈತರೆ ನಮ್ಮ ದೇಶದ ಬೆನ್ನೆಲುಬು, ಸರ್ಕಾರವು ಕೃಷಿಗೆ ಹೆಚ್ಚಿನ ಒತ್ತು ಕೊಟ್ಟು ಆಧುನಿಕ ಸ್ಪರ್ಶ ನೀಡಿದರೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು ಎಂದು ಶಾಸಕ ಮಂಜುನಾಥ್ ಸಲಹೆಯನ್ನು ನೀಡಿದರು . ಹನೂರು ಪಟ್ಟಣದ ಕೃಷಿ ಇಲಾಖೆಯಲ್ಲಿನ ಆವರಣದಲ್ಲಿ ಆಯೋಜಿಸಿದ ರೈತ ಫಲಾನುಭವಿಗಳಿಗೆ ಪರಿಕಾರಗಳ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನಮ್ಮ ಜೀವನಾಡಿಯೆ ರೈತರು ನಾವೆಲ್ಲರು ಭೂಮಿಯನ್ನೆ ಆಶ್ರಯಿಸಿ ಜೀವಿಸುತ್ತಿದ್ದೆವೆ .ನಿಮಗೆ ಉಪಯುಕ್ತ ಸಲಕರಣೆ ನೀಡುವುದರಿಂದ ಸಂತೋಷದ ವಿಷಯವಾಗಿದೆ ,ಸಾಕಷ್ಟು ಮಾಹಿತಿ ಕೊರತೆಯಿಂದ ಹಲವಾರು ರೈತರು ಬಂದಿಲ್ಲ ಮುಂದಿನ ದಿನಗಳಲ್ಲಿ ಎಲ್ಲಾರಿಗೂ ತಿಳಿಸಿ , ಇದರಿಂದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಬೇಕು ,ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರ ಬಹಳ ಮುಖ್ಯವಾಗಿದೆ ಇದರಿಂದ ನಿರುದ್ಯೋಗ ನಿವಾರಣೆಯಾಗಿದೆ ಹೆಚ್ಚಿನ ತಂತ್ರಜ್ಞಾನದ ಮೂಲಕ ರೈತರ ಬೆಳವಣಿಗೆ ನಾವು ಸಹಕಾರ ನೀಡಬೇಕು , ರೈತರಿಗೆ ನೀರು ಮತ್ತು ವಿದ್ಯುತ್ ನೀಡಿದರೆ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿದಂತಾಗುತ್ತದೆ ,ಹಲವಾರು ರೈತರು ತಮ್ಮ ಮಕ್ಕಳು ಇಂಜನಿಯರಿಂಗ್ ವೃತ್ತಿ ಮಾಡಿದರು ಸಹ ತಮ್ಮ ಕಸುಬನ್ನು ಬಿಡುತ್ತಿಲ್ಲ ಇದು ಖುಷಿಯ ವಿಷಯ ಎಂದರು. ಇದೇ ಸಮಯದಲ್ಲಿ ಮಾತನಾಡಿದ ಕೃಷಿ ಇಲಾಖೆ ಅಧಿಕಾರಿ ರಂಗಸ್ವಾಮಿ ಮಾತನಾಡಿ ರಾಷ್ಟ್ರದ ಲ್ಲೆ ಡಿಜಿಟಲ್ ನೊಂದಣೆಯಲ್ಲಿ ಕರ್ನಾಟಕ ಕೃಷಿ ಇಲಾಖೆಯು ಮುಂದಿದೆ ಇದರಿಂದ ಪಾರದರ್ಶಕತೆಯನ್ನು ಕಾಣಬಹುದು .ಪ್ರತಿ ಹಳ್ಳಿಯಲ್ಲಿರುವ ಎಲ್ಲಾ ರೈತರಿಗೆ ತಲುಪಿಸುವ ಗುರಿ ಹೊಂದಿದೆ ,ಭೂಮಿಯನ್ನು ಸಿದ್ದತೆ ಮಾಡಿಕೊಳ್ಳುವ ಎಲ್ಲಾ ರೀತಿಯ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದರು .ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಂಜೇಶ್ ,ರಾಜೂಗೌಡ ,ಪ್ರಮೋದ್ ,ರಮೇಶ್ , ಸಹಾಯಕ ಕೃಷಿ ತಹಶಿಲ್ದಾರರಾದ ಗುರುಪ್ರಸಾದ್ . ಕೃಷಿ ಅಧಿಕಾರಿ ನಾಗೇಂದ್ರ ಎಸ್ ಆರ್ , ಮನೋಹರ್ ವಿ. ಹರಿಶ್ , ಆತ್ಮ ಸಿಬ್ಬಂದಿ ಧರ್ಮೇಂದ್ರ ,ವಿನಯ್ ಎಸ್ ,ಉಪೇಂದ್ರ ಎಸ್ ಎನ್ ನೌಕರರು ,ಆಕಾಶ್ ಚಂದ್ರಶೇಖರ್, ರೈತ ಪಲಾನುಭವಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು .
Self-employment is the beacon for self-reliant living
ರಾಯಚೂರು ಜ.23 (ಕರ್ನಾಟಕ ವಾರ್ತೆ): ಜಿಲ್ಲೆಯ ಜನರು ಆರ್ಥಿಕ ಅಭಿವೃದ್ಧಿ ಹೊಂದಲು ಬೇಡಿಕೆ ಇರುವ ಸಣ್ಣ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಮುಂದೆ ಬರಬೇಕೆಂದು ಸಿಡಾಕ್ ಜಂಟಿ ನಿರ್ದೇಶಕರಾದ ಜಿ. ಯು. ಹುಡೇದ ಅವರು ಹೇಳಿದರು. ಜನವರಿ 22ರ ಬುಧವಾರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ (ಕೆ.ಕೆ.ಆರ್.ಡಿ.ಬಿ.), ಕಲಬುರಗಿ, ಕೌಶಲ್ಯಾಬೀವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಕೆ.ಕೆ.ಆರ್.ಡಿ.ಬಿ. ಉದ್ಯೋಗ ಆವಿಷ್ಕಾರ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಹಾರ್ಡವೇರ & ನೆಟ್‌ವರ್ಕಿಂಗ್ ಬಗ್ಗೆ 30 ದಿನಗಳ ನಿರ್ದೀಷ್ಟ ವಲಯಾಧಾರಿತ ಉದ್ಯಮಶೀಲತಾಬಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಕ್ರೀಯಾಶೀಲತೆಯಿಂದ ಯಾವುದೇ ಕಾರ್ಯ ಮಾಡಿದರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಕ್ಶೌಶಲ್ಯಾಧಾರಿತ ಸೇವಾ ವಲಯಗಳ ಉದ್ಯಮಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ ಅದರಲ್ಲಿಯೂ ವಿಶೇಷವಾಗಿ ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್‌ವರ್ಕಿಂಗ್ ಉದ್ಯಮಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇವು ಸೂಕ್ತವಾದ ತರಬೇತಿ ಕಾರ್ಯಕ್ರಮಗಳಾಗಿದ್ದು, ಪಡೆದ ತರಬೇತಿಯ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಉದ್ಯಮ ಪ್ರಾರಂಭಿಸಿ ಆರ್ಥಿಕವಾಗಿ ಮುಂದುವರೆಯಬೇಕು ಎಂದು ತಿಳಿಸಿ, ಸಿಡಾಕ್ ಮುಖಾಂತರ ಹಮ್ಮಿಕೊಂಡಿರುವ ಈ ತರಬೇತಿಗಳು ಉತ್ತಮ ಆಯ್ಕೆಯಾಗಿವೆ ಮತ್ತು ತರಬೇತಿಯು ವ್ಯವಸ್ಥಿತವಾಗಿ ನಡೆಸಲಾಗಿದೆ ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ತಾಲೂಕು ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ರುಕ್ಮಿಣಿ ಬಾಯಿ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ ವರ್ಕಿಂಗ್‌ನಿಂದ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ ಅನೇಕ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿ ಪರಿಶಿಷ್ಠ ವರ್ಗಗಳ ಇಲಾಖೆಯ ಯೋಜನೆಗಳ ಬಗ್ಗೆ ಸಮಾರಂಭದಲ್ಲಿ ವಿವರಿಸಿದರು. ಈ ವೇಳೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಪಾಲರರಾದ ಯಂಕಣ್ಣ ಅವರು ಮಾತನಾಡಿ, ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಿ ಉದ್ಯಮಗಳನ್ನು ಸ್ವಯಂ ಉದ್ಯೋಗಿಗಳಾಗುವದರ ಜೊತೆಗೆ ಬೇರೆಯವರಿಗೂ ಕೆಲಸಕೊಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರವಿ., ಶಿಭಿರಾರ್ಥಿಗಳಿಗೆ ಪೇರೇಪಿಸುತ್ತಾ ಸಿಕ್ಕಿರುವಂತ ಅವಕಾಶಗಳನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಂಡು ಮುಂದಿನ ದಿನದಲ್ಲಿ ಉದಯೋನ್ಮುಖ ಉದಮಶೀಲಾರಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಆರ್.ವಿಕಾಂತನವರ್, ಬೇತುದಾರರಾದ ಶ್ರೀಸೈಯದ್, ಪೈಯಾಝ ಅಲಿ, ನಾಗರಾಜ ಕೆ, ಶಿವಕುಮಾರ ಸೇರಿದಂತೆ ಇತರರು ಇದ್ದರು.
Delhi Republic Day Stills: Enthusiastic stills from the crowd Exciting stills at rehearsals: Confident of winning awards for state stills Commissioner Hemanta Nimbalkar
ನವದೆಹಲಿ, ಜನವರಿ 23 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ಈ ಬಾರಿ “ಲಕ್ಕುಂಡಿಯ ಶಿಲ್ಪಕಲೆಯ ತೊಟ್ಟಿಲು”ವಿಷಯಾಧಾರಿತ ಸ್ತಬ್ಧಚಿತ್ರವು ಅತ್ಯಂತ ಅತ್ಯಾಕರ್ಷಣೀಯವಾಗಿದ್ದು,
ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿರುವ ರಾಜ್ಯದ ಸ್ತಬ್ಧಚಿತ್ರವು ಪ್ರಶಸ್ತಿ ಪಡೆಯುವ ವಿಶ್ವಾಸವಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದಿಂದ ಭಾಗವಹಿಸಲಿರುವ ಸ್ತಬ್ಧಚಿತ್ರವು ಗದಗಿನ ಲಕ್ಕುಂಡಿಯಲ್ಲಿರುವ ಮಂದಿರಕ್ಕೆ ಹೋಲುವಂತಿರುವ ಸ್ತಬ್ಧಚಿತ್ರವನ್ನು ಅಂತರರಾಷ್ಟ್ರೀಯ ಕಲಾವಿದ ಶಶಿಧರ ಅಡಪ ವಿನ್ಯಾಸಗೊಳಿಸಿದ್ದು, ದೆಹಲಿಯ ರಾಷ್ಟ್ರೀಯ ರಂಗಶಾಲಾ ಕ್ಯಾಂಪಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯದ 50ಕ್ಕೂ ಹೆಚ್ಚು ಜನ ಕಲಾವಿದರು,ಕುಶಲ ಕರ್ಮಿಗಳು ಮೈಕೊರೆಯುವ ಚಳಿಯಲ್ಲಿ ಸ್ತಬ್ಧಚಿತ್ರವನ್ನು ನಿರ್ಮಾಣಗೊಳಿಸಿದ್ದಾರೆ. ಜ.23ರ ಗುರುವಾರ ನವದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ತಬ್ಧಚಿತ್ರದ ಪೂರ್ವಾಭ್ಯಾಸದಲ್ಲಿ ರಾಜ್ಯದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರಕ್ಕೆ ಎರಡೂ ಬದಿಯಲ್ಲಿ ನೆರೆದ ಜನಸ್ತೋಮವು ತಮ್ಮ ಹತ್ತಿರ ಸ್ತಬ್ಧಚಿತ್ರ ಬಂದಾಗ ಅದರ ವಿನ್ಯಾಸ, ಶಿಲ್ಪಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ ಕಲಾವಿದರ ದೃಶ್ಯವನ್ನು ಕಂಡ ಜನರು ಕರತಾಡನ ಮೂಲಕ ಅಭೂತಪೂರ್ವವಾಗಿ ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಕರ್ತವ್ಯಪಥದಲ್ಲಿ ಸೇರಿದ ಜನರಿಂದ ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ದೊರೆಯಲಿದೆ ಎಂಬ ವಿಶ್ವಾಸವನ್ನು ಆಯುಕ್ತರಾದ ಹೇಂಮಂತ್ ನಿಂಬಾಳ್ಕರ್ ಅವರು ವ್ಯಕ್ತಪಡಿಸಿದರು. ಕರ್ತವ್ಯ ಪಥದಲ್ಲಿ ಸಾಗಿದ ಸ್ತಬ್ದಚಿತ್ರಕ್ಕೆ ಕನ್ನಡ ಸಾಹಿತ್ಯ ಇರುವ “ಶಿಲ್ಪಕಲೆಯ ತೊಟ್ಟಿಲು ನಮ್ಮ ಗದುಗಿನ ಲಕ್ಕುಂಡಿ” ಎಂಬ ಹಾಡಿಗೆ ಹೆಸರಾಂತ ಕಲಾವಿದ ಪ್ರವೀಣ ಡಿ.ರಾವ್ ಅವರ ಸಂಗೀತ ಸಂಯೋಜನೆಯ ನೀನಾದಕ್ಕೆ ಗದಗ, ಬೆಂಗಳೂರು, ಮೈಸೂರು ಹಾಗೂ ಧಾರವಾಡದಿಂದ ಆಗಮಿಸಿದ ಸ್ತಬ್ಧಚಿತ್ರದ ಕಲಾವಿದರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ಹೆಚ್ಚಿನ ಮೆರಗು ತಂದಿದ್ದಲ್ಲದಲೇ ಅಲ್ಲಿ ಸೇರಿದವರನ್ನು ರೋಮಾಂಚನಗೊಳಿಸಿತು. ಸ್ತಬ್ದಚಿತ್ರದ ಮೇಲ್ಭಾಗದಲ್ಲಿ 10 ಜನ ಕಲಾವಿದರು ಸೇರಿದಂತೆ 18 ಜನ ಕಲಾವಿದರಿದ್ದು, ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ನಾಲ್ಕು ಪುರುಷ-ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದು, ಸ್ತಬ್ಧಚಿತ್ರಕ್ಕೆ ಇನ್ನಷ್ಟು ಮೆರಗು ತಂದಿತು. ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, ಕ್ರಿ. ಶ. 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ. ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ. ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.
All India campaign launched to increase the number of local tourists from Kerala
ಮುಂದೆ ಬರುವ ಬೇಸಿಗೆ ರಜಾ ದಿನಗಳಿಗೆ ಕುಟುಂಬಗಳು/ಕುಟುಂಬದ ರಜಾದಿನಗಳನ್ನು ಯೋಜಿಸುವವರ ಗುರಿ
ಬೆಂಗಳೂರು, ಜನವರಿ 23: “ಬೇಸಿಗೆ ರಜಾ ಋತುವು ವೇಗವಾಗಿ ಬರುತ್ತಿದ್ದು ನಾವು ಶಾಲಾ ರರಜಾದಿನಗಳು ಮತ್ತು ಕುಟುಂಬದ ಜನರನ್ನು ಉದ್ದೇಶಿಸಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದೇವೆ” ಎಂದು ಪ್ರವಾಸೋದ್ಯಮ ಸಚಿವ ಶ್ರೀ ಪಿ.ಎ. ಮೊಹಮ್ಮದ್ ರಿಯಾಸ್ ಹೇಳಿದರು. ಈ ಸಮಯದಲ್ಲಿ ಅಭಿಯಾನವು ನಿರ್ದಿಷ್ಟವಾಗಿ ಉತ್ತರ ಕೇರಳಕ್ಕೆ ಮುಖ್ಯವಾಗಿ ಬೇಕಲ್, ವಯನಾಡ್ ಮತ್ತು ಕೋಳಿಕ್ಕೋಡ್ ಗಳಿಗೆ ಆದ್ಯತೆ ನೀಡಿದ್ದು ಇದಲ್ಲದೆ ಅಪಾರ ಸುಧಾರಿಸಿದ ಮೂಲಸೌಕರ್ಯಗಳ ಕಡಿಮೆ ಅರಿವಿನ ತಾಣಗಳನ್ನೂ ಸೇರ್ಪಡೆ ಮಾಡಿದ್ದೇವೆ ಎಂದರು.
ಈ ಅಭಿಯಾನವು ಕೇರಳವನ್ನು ತನ್ನ ಅಸಂಖ್ಯ ಛಾಯೆಗಳಲ್ಲಿ ಪ್ರದರ್ಶಿಸಲಿದ್ದು ಇದು ಈ ತಾಣಗಳಿಗೆ ಮತ್ತು ರಾಜ್ಯವು ಒದಗಿಸುವ ವಿಶಿಷ್ಟ ಪ್ರವಾಸೋದ್ಯಮ ಉತ್ಪನ್ನಗಳಿಗ ವಿಸಿಬಿಲಿಟಿ ಹೆಚ್ಚಿಸುವ ಆವಿಷ್ಕಾರಕ ಉತ್ತೇಜನ ಕಾರ್ಯತಂತ್ರವಾಗಿದೆ ಅಲ್ಲದೆ ಪ್ರಮುಖ ಮೂಲ ನಗರಗಳಿಂದ ಸಂಭವನೀಯ ಸಂದರ್ಶಕರನ್ನು ನೇರವಾಗಿ ಸಂಪರ್ಕಿಸುತ್ತದೆ ಎಂದು ಶ್ರಿ ರಿಯಾಸ್ ಹೇಳಿದರು.
ಪ್ರವಾಸಿಗರನ್ನು ಸೆಳೆಯುವ ಹೊಸ ಆಕರ್ಷಣೆಗಳಲ್ಲಿ ಹೆಲಿ-ಟೂರಿಸಂ ಮತ್ತು ಸಮುದ್ರದ ವಿಮಾನದ ಉಪಕ್ರಮಗಳಿದ್ದು ಅವು ರಾಜ್ಯದಲ್ಲಿನ ತಾಣಗಳನ್ನು ಸಂಪರ್ಕಿತ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ ಎಂದು ಕೇರಳ ಸರ್ಕಾರದ ಕಾರ್ಯದರ್ಶಿ ಶ್ರೀ ಬಿಜು ಕೆ. ಹೇಳಿದರು.
ಹೊಸ ಉತ್ಪನ್ನಗಳೊಂದಿಗೆ ರಾಜ್ಯದ ಪ್ರಮುಖ ಸಂಪತ್ತುಗಳಾದ ಕಡಲತೀರಗಳು, ಗಿರಿಧಾಮಗಳು, ದೋಣಿಮನೆಗಳು ಮತ್ತು ಹಿನ್ನೀರಿನ ವಲಯವು ಸಂದರ್ಶಕರ ಅನುಭವದ ಪೂರ್ಣತೆಯನ್ನು ಎತ್ತರಿಸಲಿದೆ ಎಂದು ಶ್ರೀ ಬಿಜು ಹೇಳಿದರು.
ತನ್ನ ಪ್ರಶಾಂತ ನೈಸರ್ಗಿಕ ಸೌಂದರ್ಯ, ಉಜ್ವಲ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಗೆ ಖ್ಯಾತಿ ಪಡೆದಿರುವ ಕೇರಳ ತನ್ನ ಸಂದರ್ಶಕರಿಗೆ ಸಾಂಸ್ಕೃತಿಕ ಸಂತೋಷ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ರಂಜಿಸುತ್ತದೆ. ರಾಜಧಾನಿ ನಗರವು ಫೆಬ್ರವರಿ 15ರಿಂದ 21ರವರೆಗೆ ಕನಕಕ್ಕುನ್ನು ಪ್ಯಾಲೇಸ್ ನಲ್ಲಿ ನಿಶಾಗಂಧಿ ನೃತ್ಯೋತ್ಸವ ಆಯೋಜಿಸಿದ್ದು ಅದರಲ್ಲಿ ಭಾರತದ ಮೂಲೆ ಮೂಲೆಯ ಖ್ಯಾತ ನೃತ್ಯಗಾರರು ಮೋಹಿನಿಯಾಟ್ಟಂ, ಕಥಕ್, ಕೂಚಿಪುಡಿ, ಭರತನಾಟ್ಯ ಮತ್ತು ಮಣಿಪುರಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ” ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಶ್ರೀಮತಿ ಸಿಖಾ ಸುರೇಂದ್ರನ್ ಹೇಳಿದರು.
ಕೇರಳ ಲಿಟರೇಚರ್ ಫೆಸ್ಟಿವಲ್ (ಕೆ.ಎಲ್.ಎಫ್.) ಗಮನಾರ್ಹ ವಾರ್ಷಿಕ ಕಾರ್ಯಕ್ರಮವಾಗಿದ್ದು ಜನವರಿ 23-26ರವರೆಗೆ ಕೋಳಿಕ್ಕೋಡ್ ಸಮುದ್ರತೀರದಲ್ಲಿ ನಡೆಯುತ್ತದೆ. ಈ ಉತ್ಸವವು ಸಮಾಜದ ವೈವಿಧ್ಯಮಯ ಹಿನ್ನೆಲೆಯ ವಿಸ್ತಾರ ಶ್ರೇಣಿಯ ಲೇಖಕರು, ಕಲಾವಿದರು, ನಟರು, ಸೆಲೆಬ್ರಿಟಿಗಳು, ಚಿಂತಕರು ಮತ್ತು ಆಕ್ಟಿವಿಸ್ಟ್ ಗಳನ್ನು ಒಗ್ಗೂಡಿಸಲಿದ್ದು ಓದುಗರು ಮತ್ತು ಲೇಖಕರ ನಡುವೆ ಸಂಪರ್ಕ ವೃದ್ಧಿಸಲಿದೆ. ಕೆ.ಎಲ್.ಎಫ್. 12ಕ್ಕೂ ಹೆಚ್ಚು ದೇಶಗಳ 400ಕ್ಕೂ ಹೆಚ್ಚು ಭಾಷಣಕಾರರನ್ನು ಹೊಂದಿದ್ದು ಕೋಳಿಕ್ಕೋಡ್ ನಗರದ ಐದು ಸ್ಥಳಗಳಲ್ಲಿ 200 ಅಧಿವೇಶನಗಳನ್ನು ನಡೆಯುತ್ತವೆ. ಐಷಾರಾಮ ಮತ್ತು ವಿರಾಮವನ್ನು ಸಂಯೋಜಿಸುವ ಕೇರಳವು ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಎಂಐಸಿಇ (ಮೀಟಿಂಗ್ಸ್, ಇನ್ಸೆಂಟಿವ್ಸ್, ಕಾನ್ಫರೆನ್ಸಸ್ ಅಂಡ್ ಎಕ್ಸಿಬಿಷನ್ಸ್) ಕಾರ್ಯಕ್ರಮಗಳ ಆದ್ಯತೆಯ ಕೇಂದ್ರವಾಗುತ್ತಿದೆ. ದಾಖಲೆಗಳ ಪ್ರಕಾರ ಹೆಚ್ಚು ಹೆಚ್ಚು ಭಾರತೀಯರು ಮತ್ತು ವಿದೇಶಿಯರು ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ತನ್ನ ಅತ್ಯಾಕರ್ಷಕ ಪ್ರದೇಶಗಳು, ವಿಶ್ವಮಟ್ಟದ ಸೌಲಭ್ಯಗಳು ಮತ್ತು ಸಂಪ್ರದಾಯ ಹಾಗೂ ಆಧುನಿಕತೆಯ ಸರಿಸಾಟಿ ಇರದ ಸಂಯೋಜನೆಯಿಂದ ಈ ರಾಜ್ಯವು ವಿಶಿಷ್ಟ ಅನುಭವ ನಿರೀಕ್ಷಿಸುವ ಈವೆಂಟ್ ಪ್ಲಾನರ್ ಗಳು, ದಂಪತಿಗಳು ಮತ್ತು ಕಾರ್ಪೊರೇಟ್ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಖಾ ಸುರೇಂದ್ರನ್ ಹೇಳಿದರು. ಈ ರಾಜ್ಯವು ದೋಣಿಮನೆಗಳು, ಕಾರಾವಾನ್ ವಸತಿ, ಪ್ಲಾಂಟೇಷನ್ ಭೇಟಿಗಳು, ಜಂಗಲ್ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಆಯುರ್ವೇದ ಆಧರಿತ ವೆಲ್ ನೆಸ್ ಪರಿಹಾರಗಳು, ಸಾಹಸ ಚಟುವಟಿಕೆಗಳು ಮತ್ತು ಚಾರಣ ಒಳಗೊಂಡು ಗ್ರಾಮೀಣ ಪ್ರದೇಶದ ನಡೆದಾಟಗಳಿಗೆ ಖ್ಯಾತಿ ಪಡೆದಿದೆ. ಕೇರಳವು ಸ್ಥಳೀಯ ಪ್ರವಾಸಿಗರ ಆಗಮನಗಳಲ್ಲಿ ತೀವ್ರ ಏರುಗತಿ ಕಾಣುತ್ತಿದ್ದು 2022ರಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರುತ್ತಿದ್ದು 2023ರಲ್ಲಿ ದಾಖಲೆ ಸಂಖ್ಯೆಯ ಪ್ರವಾಸಿಗರಿಗೆ ಹೆಚ್ಚಳವಾಗಿದೆ. ಈ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವು 2024ರಲ್ಲಿ ಮುಂದುವರಿದಿದ್ದು ಮೊದಲ ಸೆಮಿಸ್ಟರ್ ನಲ್ಲಿ (ಜನವರಿ-ಜೂನ್) ಒಟ್ಟು 1,08,57,181 ಪ್ರವಾಸಿಗರು ಭೇಟಿ ನೀಡಿದ್ದು ಈ ವರ್ಷ ಕೋವಿಡ್ ಪೂರ್ವ ಮಟ್ಟಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು ಅದು ರಜಾಋತುವಿನಲ್ಲಿ ಪ್ರಸ್ತುತ ನಡೆಯುತ್ತಿರುವ ಬುಕಿಂಗ್ ಗಳಿಂದ ಸಾಬೀತಾಗಿದೆ. ಬೇಸಿಗೆಯ ರಜಾದಿನದಲ್ಲಿ ಸ್ಥಳೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳದಿಂದ ಕೇರಳ ಟೂರಿಸಂ ಪ್ರವಾಸದ ವ್ಯಾಪಾರ ಜಾಲ ನಿರ್ಮಾಣದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಬಿ2ಬಿ ರೋಡ್ ಶೋಗಳಿಂದ ವಿಸ್ತಾರ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿದ್ದು ಇದಲ್ಲದೆ ಪ್ರಮುಖ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲಿದೆ.
ಜನವರಿ 21ರಂದು ಹೈದರಾಬಾದ್ ನಲ್ಲಿ ಬಿ2ಬಿ ಟ್ರಾವೆಲ್ ಮೀಟ್ ಪ್ರಾರಂಭಿಸಿದ್ದು ಈ ಅಭಿಯಾನವು ಜನವರಿ- ಮಾರ್ಚ್ ಅವಧಿಯಲ್ಲಿ ಅಹಮದಾಬಾದ್, ಚಂಡೀಗಢ, ದೆಹಲಿ, ಜೈಪುರ, ಚೆನ್ನೈ ಮತ್ತು ಕೊಲ್ಕತಾಗಳಲ್ಲಿ ಬಿ2ಬಿ ಸಭೆಗಳ ಸರಣಿ ಕಾಣಲಿದ್ದು ಹಲವಾರು ಪರಿವರ್ತನೀಯ ಉಪಕ್ರಮಗಳು ಮತ್ತು ಜನಪ್ರಿಯ ತಾಣಗಳನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಮುಂಚೂಣಿಯ ಪಾಲುದಾರರ ಮುಂದೆ ಪ್ರದರ್ಶಿಸಲಿದೆ.
Ramesh Kale, district president of Karnataka Jansainya Sangathan, strongly condemned the use of police force against the militants.
ಗಂಗಾವತಿ: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದಿಂದ ಜಿಲ್ಲಾಡಳಿತ ಹೋರಾಟಗಾರರ ವಿರುದ್ಧ ಪೊಲೀಸ್ ಬಲ ಬಳಸಿರುವುದನ್ನು ಕರ್ನಾಟಕ ಜನಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ ಕಾಳೆ ಉಗ್ರವಾಗಿ ಖಂಡಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ರಮೇಶ ಕಾಳೆ ಅವರು, ಶಾಂತಿಯುತವಾಗಿ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಜಿಲ್ಲಾಧಿಕಾರಿ ಸ್ಪಂದಿಸದ ಕಾರಣ ಪ್ರತಿಭಟನಾಕಾರರ ಸಹನೆಯ ಕಟ್ಟೆ ಒಡೆದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸುವಂತೆ ಒತ್ತಾ ಯಿಸಿದ್ದಾರೆ. ಅದೇ ವೇಳೆ ಜಿಲ್ಲಾಡಳಿತ ಭವನದಿಂದ ಹೊರಟಿದ್ದ ಜಿಲ್ಲಾಧಿಕಾರಿಗಳಕಾರಿಗೆ ಅಡ್ಡಗಟ್ಟಿದ್ದಾರೆ ಮತ್ತು ತಮ್ಮ ಮನವಿಯನ್ನು ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾಗಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಡೆದ ನೂಕುನುಗ್ಗಲಾಟದಲ್ಲಿ ಕೆಲ ಪ್ರತಿಭಟ ನಾಕಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಿಳೆಯೊಬ್ಬರು ಮೂರ್ಛೆ ಹೋಗಿದ್ದಾರೆ. ಶಾಂತಿಯುತವಾಗಿ ಮುಗಿಯಬೇಕಿದ್ದ ಹೋರಾಟಕ್ಕೆ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಉಗ್ರ ಸ್ವರೂಪ ಪಡೆಯುವಂತಾಗಿದೆ. ಕೂಡಲೇ ಜಿಲ್ಲಾಧಿ ಕಾರಿಗಳು ಗಾಯಗೊಂಡ ಪ್ರತಿಭಟನಾಕಾರರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಪರಿಹಾರ ನೀಡಬೇಕು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೀದರ್‌ನಲ್ಲಿ ಜಾರಿಗೊಂಡ ವೇತನ ನೀತಿಯನ್ನು ಇಲ್ಲಿಯೂ ಜಾರಿ ಗೊಳಿಸಬೇಕು. ಹೋರಾಟಗಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜನವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.