Breaking News
ಕೊಪ್ಪಳಜಿಲ್ಲಾಸ್ಪತ್ರೆಯಲ್ಲಿವೈದ್ಯರನಿರ್ಲಕ್ಷಬಾಣಂತಿ ಹಾಗೂ ಮಗು ಸಾವು,

Koppal District Hospital Negligence of the doctor and the death of the child.

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಹಾಗೂ ಮಗು ಸಾವನ್ನಪ್ಪಿದ ಘಟನೆ ಮಂಗಳವಾರದಂದು ಜರುಗಿದೆ.

ಕುಕನೂರು ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎಂಬುವರ ಪತ್ನಿ ರೇಣುಕಾ ಹಾಗೂ ಮಗು ಮೃತ ದುರ್ದೈವಿಗಳಾಗಿದ್ದಾರೆ.

ಮೃತ ಮಹಿಳೆ ರೇಣುಕಾ ಎನ್ನುವವರು ತಮ್ಮ ತವರು ಮನೆಯಾದ ಬನ್ನಿಗೋಳಕ್ಕೆ ಹೆರಿಗೆಗೆ ಹೋಗಿದ್ದ ಸಂದರ್ಭದಲ್ಲಿ
ತುಂಬು ಗರ್ಭಿಣಿಯಾಗಿದ್ದ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಷ್ಟಗಿಯ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆಗೆ ಅಡ್ಮಿಟ್ ಮಾಡಲಾಗಿತ್ತು.

ಆದರೆ ಅಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಆಗುವುದಿಲ್ಲವೆಂದು ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ರೆಫರ್ ಮಾಡಲಾಗಿತ್ತು,ಆದರೆ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಸಿಸೆರಿನ್ ಮೂಲಕ ಮಗುವನ್ನು ಹೊರೆ ತೆಗೆದ ನಂತರ ಮಗು ಸಾವನ್ನಪ್ಪಿದ್ದು, ನಂತರದ ಇಪ್ಪತ್ತು ನಿಮಿಷಗಳಲ್ಲಿ ತಾಯಿ ಮೃತ ಪಟ್ಟ ಘಟನೆ ಜರುಗಿದೆ. ಈ ಘಟನೆಯು ವೈದ್ಯರ ನಿರ್ಲಕ್ಷದಿಂದ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವಿವರ : ಕುಷ್ಟಗಿ ತಾಲೂಕಿನ ಬನ್ನಿಗೋಳ ಗ್ರಾಮದ ರೇಣುಕಾ ಎನ್ನುವ ಮಹಿಳೆಯನ್ನು ಕುಕನೂರು ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎನ್ನುವವರಿಗೆ ಮದುವೆ ಮಾಡಿಕೊಡಲಾಗಿತ್ತು.

ಪ್ರಕಾಶ ಎನ್ನುವವರು ಬಡ ಕುಟುಂಬದವರಾಗಿದ್ದು ಜೀವನ ನಿರ್ವಹಣೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಿದ್ದು, ಮಡದಿಯ ತವರು ಮನೆಯಾದ ಕುಷ್ಟಗಿ ತಾಲೂಕ ಬನ್ನಿಗೋಳದ ತಾಯಿಯ ಮನೆಗೆ ಹೆರಿಗೆಗೆ ಎಂದು ಬನ್ನಿಗೋಳಕ್ಕೆ ಬಂದಾಗ ನೋವು ಕಾಣಿಸಿಕೊಂಡಿದೆ.

ಕೂಡಲೇ ಅಂಬುಲೆನ್ಸ್ ಮೂಲಕ ಮಹಿಳೆಯನ್ನು ಕುಷ್ಟಗಿ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಹಿಳೆಯ ಜೊತೆಯಲ್ಲಿ ಅವರ ವೃದ್ದ ತಂದೆ ತಾಯಿಯರು ಇದ್ದು , ವೈದ್ಯರು ನಿರ್ಲಕ್ಷಿಸಿ ಕೊಪ್ಪಳಕ್ಕೆ ಕಳಿಸಿದ್ದಾರೆ, ಕೊಪ್ಪಳದಲ್ಲಿಯೂ ಚಿಕಿತ್ಸೆ ಸರಿಯಾಗಿ ನೀಡದೇ ಇದ್ದರಿಂದ ತಾಯಿ, ಮಗು ಮೃತ ಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೂಸಿನ ಮನೆಗಳು ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿ-ಮಹಾಂತಗೌಡಪಾಟೀಲ್

Let nursing homes act as model centres-Mahant Gowda Patil

ಗಂಗಾವತಿ: ಕೂಸಿನ ಮನೆ ಕೇಂದ್ರಗಳು ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಅವರು ಹೇಳಿದರು.

ಗಂಗಾವತಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಶ್ರಯದಲ್ಲಿ ಕನಕಗಿರಿ ತಾಲೂಕಿನ ಕೂಸಿನ ಮನೆ ಮಕ್ಕಳ ಆರೈಕೆದಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೂಸಿನ ಮನೆ ನಿರ್ವಹಣೆಯ ಕುರಿತು ನಡೆಯುವ ಈ ತರಬೇತಿ ಕಾರ್ಯಗಾರದಲ್ಲಿ ಎಲ್ಲರೂ ಏಳು ದಿನ ತಪ್ಪದೇ ಪಾಲ್ಗೋಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಕೂಸಿನಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ನಂತರ ಕೂಸಿನ ಮನೆ ತರಬೇತುದಾರರಾದ ವಿದ್ಯಾವತಿ ಅವರು ಮಾತನಾಡಿ, ಮಕ್ಕಳ ಆರೈಕೆದಾರರ ತರಬೇತಿಯು ಏಳು ದಿನಗಳವರೆಗೆ ನಡೆಯುತ್ತಿದ್ದು, ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. ಏಳು ದಿನವೂ ಕಡ್ಡಾಯವಾಗಿ ಹಾಜರಾಗಬೇಕು. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಸಿನ ಮನೆ ತರಬೇತಿದಾರರಾದ ಈರಮ್ಮ, SIRD ಸಂಸ್ಥೆಯ ಸಿಬ್ಬಂದಿಗಳಾದ ದೇವರಾಜ್, ಶೇಖರಪ್ಪ, ತಾ.ಪಂ ವಿಷಯ ನಿರ್ವಾಹಕರಾದ ಶಿವಮೂರ್ತಿ ಕಂಪಾಪುರಮಠ, ಪವನಕುಮಾರ್, ಕನಕಗಿರಿ ತಾ.ಪಂ ಐಇಸಿ ಸಂಯೋಜಕರಾದ ಶಿವಕುಮಾರ್ ಕೆ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಕೂಸಿನ ಮನೆ ಕೇರ್ ಟೇಕರ್ ಗಳು ಹಾಜರಿದ್ದರು.

ಹನೂರು ಪಟ್ಟಣದಲ್ಲಿ ಕುವೆಂಪುಜಯಂತಿಯನ್ನು ಸರಳವಾಗಿ ಆಚರಿಸಲಾಯಿತು

Kuvempu Jayanti was celebrated simply in Hanur town

ವರದಿ : ಬಂಗಾರಪ್ಪ .ಸಿ .

ಹನೂರು : ನಮ್ಮ ಆತ್ಮಸಾಕ್ಷಿಗಿಂತ ಜೋತಿಷ್ಯ ಸಾಸ್ತ್ರ ಮುಖ್ಯ ಎಂದವರು ಕುವೆಂಪು ,ಅವರು ಒಂದು ಜಾತಿಗೆ ಸಿಮಿತವಾದ ಕೃತಿ ರಚಿಸಿಲ್ಲ ಮನುಜ ಮತಕ್ಕೆ ಸೀಮಿತ ಮಾಡಿದವರು ಎಂದು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹರೀಶ್ ಕುಮಾರ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ಮಾತನಾಡಿದ ಅವರು ಹಲವಾರು ದಾರ್ಶನಿಕರು ಯಾರು ಸಹ ನಮ್ಮ ಜಯಂತಿಯನ್ನು ಮಾಡಲು ಹೇಳಿಲ್ಲ
ದಾರ್ಸನಿಕರ ಕೃತಿಗಳನ್ನು ಬದಲಾಯಿದರೆ ಹೋರಾಟ ಮಾಡಬೇಕಾಗುತ್ತದೆ , ಎಲ್ಲಾ ದಾರ್ಸನಿಕರು ನಮಗೆ ಶ್ರೇಷ್ಠವೆ ಅದನ್ನು ತಿರುಚಲು ಹೋಗಬಾರದು ,ರವಿ ಕಾಣದನ್ನು ಕವಿ ಕಂಡರು ಇಂತಹ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ಮಾಡುವುದು ನಮ್ಮ ಸೌಭಾಗ್ಯವಾಗಿದೆ ಎಂದರು.

ತಹಶಿಲ್ದಾರರಾದ ಗುರುಪ್ರಸಾದ್ ಮಾತನಾಡಿ ಕನ್ನಡ
ಸಾಹಿತ್ಯದಲ್ಲಿ ಅನೇಕ ಮಹಾ ಪುರುಷರಿದ್ದಾರೆ ಅವರಲ್ಲಿ ಪ್ರಮುಖರಾದವರು ಕುವೆಂಪು ಇವರ ವಿಶ್ವಮಾನವ ವೈಚಾರಿಕತೆ ಯ ನೈತಿಕತೆಯನ್ನು ಬೆಳೆಸಿಕೊಂಡರೆ ನಮಗೆ ಸ್ಪೂರ್ತಿಯಾಗುತ್ತದೆ ,ಇದರಿಂದ ಪ್ರಪಂಚವು ಮನುಜಮತ ವಾಗುವ ನಿರೀಕ್ಷೆಯಾಗಿದೆ ಕುವೆಂಪು ಜಯಂತಿಯನ್ನು ಈಗಾಗಲೇ ಹಲವಾರು ಜನರು ಆಚರಿಸುತ್ತಾರೆ ,ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದವರು ಸೇರಿ ಆಚರಿಸುವುದು ಒಳಿತು ಎನ್ನಲಾಗಿದೆ ಎಂದರು.

ಬಿಇಒ ಗುರುಸಿದ್ದಪ್ಪ ಮಾತನಾಡಿ ಬಾಲ್ಯದಲ್ಲೇ ಅವರ ಭಾಷಣವನ್ನು ಕಂಡವರಲ್ಲಿ ನಾನು ಸಹ ಒಬ್ಬರು ಜಗದ,ಯುಗದ ಕವಿಗಳಾದ ಕುವೆಂಪು ಅವರ ಜನ್ಮ ದಿನಾಚರಣೆ ಮಾಡುತ್ತಿರುವುದು ಬಹಳ ಸಂತೋಷ ,ಕುವೆಂಪು ವಿಶ್ವಮಾನವರಾಗಿದ್ದರು ,ಮೈಸೂರಿನಲ್ಲಿ ಪ್ರತಿ ಬೀದಿಗೂ ಅವರದೆ ಕೃತಿಗಳಲ್ಲಿರುವ ಹೆಸರನ್ನು ಆಯ್ದು ಇಡಲಾಗಿದೆ ಎಂದರು.

ಮುಖ್ಯ ಭಾಷಣಕಾರರಾದ ಶ್ರೀ ಯುತ ಕಂದವೇಲು ಮಾತನಾಡಿ ಕುವೆಂಪು ಎಂದರೆ ಸರಳ ವ್ಯಕ್ತಿತ್ವದ ಮೇಲೆ ಜೀವಿಸಿದವರು ,ಇಡಿ ಪ್ರಪಚವೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಮನುಜಮತವಾಗಿ ನಿಲ್ಲುತ್ತದೆ ,ಬಾಲ್ಯದಲ್ಲಿ ಅವರ ಮನೆಯಲ್ಲಿಯೇ ಇದ್ದುವ ಶಿಕ್ಷಣ ಪಡೆದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಆಶ್ರಯ ಪಡೆದು ಹೆಚ್ಚು ಓದಿದ ನಂತರ‌ ಆಂಗ್ಲ ಬಾಷೆಯಲ್ಲಿ ಪ್ರವೀಣರಾಗಿದ್ದರು , ಕನ್ನಡದ ಮೊಟ್ಟಮೊದಲ ಎಲ್ಲಾ ಪ್ರಶಸ್ತಿಯನ್ನು ಪಡೆದುಕೊಳ್ಳುಲು ಇವರು ಯಶಸ್ವಿಯಾದರು , ರಾಮಾಯಣದಿಂದಿಡಿದು ಇಂದಿನ‌ ಪ್ರಸ್ತುತ ಕತೆಗಳಲ್ಲಿ ಅವರು ಬರೆದನ್ನು ನಾವು ಕಾಣಬಹುದು , ಅಂದಿನ ಕಾಲ ಘಟ್ಟದಲ್ಲಿ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡವು ನಶಿಸಿದ ಸಂದರ್ಭದಲ್ಲಿ ಪುನಶ್ಚೇತನ ನೀಡಿದ ವ್ಯಕ್ತಿಯಿವರು .
ಮನುಜಮತ, ವಿಶ್ವಪಥ ವೆ ಮೂಲ ದ್ಯೇಯೆ ಎಂದವರು , ಪರಿಸರವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖರಾದವರು ,ಪ್ರತಿ ವಸ್ತುಗಳನ್ನು ಬಳಸಿ ಕವನ ಬರೆಯುವಲ್ಲಿ ಮುಂಚುಣಿಯವರಾಗಿದ್ದರು , ಯಾವುದೇ ಸಭೆ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸುವವರು , ತಮ್ಮ ಮಗನ ಮದುವೆಯನ್ನು ಮಂತ್ರ ಮಾಂಗಲ್ಯ ಮಾಡುವುದರ ಮೂಲಕ ಸರಳ ಮದುವೆಗೆ ನಾಂದಿಯಾಡಿದವರು.

ಇದೇ ಸಂದರ್ಭದಲ್ಲಿ ಪಟ್ಟಣಪಂಚಾಯಿತಿ ಉಪಾಧ್ಯಕ್ಷರಾದ ಆನಂದ್ ಕುಮಾರ್ , ಸದಸ್ಯರುಗಳಾದ ಗಿರೀಶ್ ಕುಮಾರ್ ,ಸಂಪತ್ ಕುಮಾರ್ , ವೆಂಕಟೇಗೌಡರು,ಮಹೇಶ್ ,ಸುದೇಶ್, ಸ್ವಾಮಿ ವ,ಒಕ್ಕಲಿಗರ ಸಂಘದ ನಿರ್ದೇಕರಾದ ಮಂಜೇಶ್ ,ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ. ಆರ್ ಐ ಶೇಷಣ್ಣ , ರಮೇಶ್ ,ನಾಗೇಶ್ ಗೌಡ್ರು , ಯುವಕರಾದ ವೆಂಕಟೇಶ್ ಕಾರ್ತಿಕ್ ನೌಕರರು ಸೇರಿದಂತೆ ಇನ್ನಿತರರು ಹಾಜರಿದ್ದರು.

ನ್ಯಾಯ ಸಂಸ್ಥೆ ಯಿಂದ ಕರ್ನಾಟಕದಲ್ಲಿ 2 ನೇ ‘ಸಂವಿಧಾನ್ ಫೆಲೋಶಿಪ್’ ಪ್ರಾರಂಭ

Inauguration of 2nd ‘Samvidhan Fellowship’ in Karnataka by Nyaya Institute



ಬೆಂಗಳೂರು; ನ್ಯಾಯವನ್ನು ಪ್ರವೇಶಿಸುವುದು ಸಮಾನ ಸಮಾಜವನ್ನು ಸಾಧಿಸಲು ಪ್ರಮುಖವಾಗಿದೆ. ಆದರೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳಿಂದಾಗಿ ಹಲವರು ನ್ಯಾಯ ವಂಚಿತರಾಗಿದ್ದಾರೆ. ‘ನ್ಯಾಯ’ ತನ್ನ ಪ್ರಮುಖ ಉಪಕ್ರಮವಾದ ಸಂವಿಧಾನ್ ಫೆಲೋಶಿಪ್ ಮೂಲಕ ನ್ಯಾಯವನ್ನು ಪ್ರವೇಶಿಸುವಲ್ಲಿ ಕೊನೆಯ ಮೈಲಿ ಅಂತರವನ್ನು ತುಂಬಲು ಬದ್ಧವಾಗಿದೆ. ಕರ್ನಾಟಕದಲ್ಲಿ ಸಂವಿಧಾನ್ ಫೆಲೋಶಿಪ್ನ ಉದ್ಘಾಟನಾ ಸಮೂಹದ ಯಶಸ್ಸನ್ನು ಮುನ್ನಡೆಸುತ್ತ, ‘ನ್ಯಾಯ’ ಕರ್ನಾಟಕದಲ್ಲಿ ತನ್ನ ಎರಡನೇ ಸಮೂಹವನ್ನು ವಿಸ್ತರಿಸಿ, 2024 ರ ಡಿಸೆಂಬರ್ 2 ರಂದು ಬೆಂಗಳೂರಿನ ಶಂಕರ ಫೌಂಡೇಶನ್ನಲ್ಲಿ ಪ್ರಾರಂಭಿಸಿದೆ.
ಸಂವಿಧಾನ್ ಫೆಲೋಶಿಪ್ ಕರ್ನಾಟಕದಲ್ಲಿ ಕಡಿಮೆ ಪ್ರಾತಿನಿಧ್ಯದ ಸಮುದಾಯಗಳಿಗೆ ನ್ಯಾಯವನ್ನು ಪ್ರವೇಶಿಸುವ ಗುರಿಯನ್ನು ಹೊಂದಿದ್ದು, ಅವರಿಗೆ ಕಾನೂನು ಅರಿವು ಮತ್ತು ಕಾನೂನು ಪ್ರಾತಿನಿಧ್ಯವನ್ನು ಸಂವಿಧಾನ ಫೆಲೋಗಳು ಎಂದು ಕರೆಯಲ್ಪಡುವ 9 ಜಿಲ್ಲಾ ಮಟ್ಟದ ವಕೀಲರ ಮೂಲಕ ಒದಗಿಸಲಾಗುತ್ತದೆ. ಸಂವಿಧಾನ್ ಫೆಲೋಗಳು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು 14 ಸರ್ಕಾರೇತರ ಸಂಸ್ಥೆ(ಎನ್. ಜಿ.ಒ)ಗಳೊಂದಿಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ವಿವಿಧ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಾರೆ.
ಫೆಲೋಶಿಪ್ನ ಎರಡನೇ ತಂಡದ ನೇತೃತ್ವವನ್ನು ವಕೀಲರಾದ ಕುಮಾರಿ ದೀಪಿಕಾ ಹುಂಗೇನಹಳ್ಳಿ, ಗಂಗಾಧರ, ಗೀತಾ ಎಸ್ ಪಿ , ಮನೋಹರ್ ಬೆಟ್ಟಜೇವರ್ಗಿ, ಮನೋರಂಜಿನಿ ಥಾಮಸ್, ಪ್ರಿಯಾ , ರಾಬಿನ್ ಕ್ರಿಸ್ಟೋಫರ್, ಸಾಗರ್ ಮತ್ತು ಸಂದರ್ಶಿನಿ ಡಿ ಕೆ ವಹಿಸಿದ್ದಾರೆ.
ಇವರೆಲ್ಲರೂ ನ್ಯಾಯ ವಂಚಿತ ಸಮುದಾಯಗಳಿಗೆ ಅದನ್ನು ಒದಗಿಸುವ ಉದ್ದೇಶಕ್ಕೆ ಬದ್ಧರಾಗಿದ್ದಾರೆ. ಫೆಲೋಗಳು ಸ್ವತಃ ಡಿಸೆಂಬರ್ 2 ಮತ್ತು 3 ರಂದು ಬೆಂಗಳೂರಿನಲ್ಲಿ ನಡೆದ 2 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದರು, ಅಲ್ಲಿ ಅವರು ತಳಮಟ್ಟದಲ್ಲಿ ಕೆಲಸ ಮಾಡುವ ಹಲವಾರು ಎನ್ಜಿಒಗಳನ್ನು ಭೇಟಿಯಾದರು ಮತ್ತು ಸಮುದಾಯಗಳ ಅಗತ್ಯತೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಂಡರು. ವಿವಿಧ ವೃತ್ತಿಪರ ಹಿನ್ನೆಲೆಯ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗ, ಜಾತಿಗಳು, ಅಂಗವೈಕಲ್ಯ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮನ್ನು ತಾವು ಸಂವೇದನಾಶೀಲಗೊಳಿಸಲು ಸಹ ತರಬೇತಿಯನ್ನು ಪಡೆದರು, ಇದು ಅವರನ್ನು ಮುಂದಿನ ಒಂದು ವರ್ಷ ಅವರು ಮಾಡಬೇಕಾದ ಸಮುದಾಯದ ಕೆಲಸಗಳಿಗೆ ಅವರನ್ನು ಸಜ್ಜಾಗಿಸಿದೆ .
ಈ ಸಮಾರಂಭದಲ್ಲಿ ಪ್ರಿಯಾ ಪಿ ವಿ, ಮನೋರಂಜಿನಿ ಥಾಮಸ್, ಸಂದರ್ಶಿನಿ ಡಿ ಕೆ , ಗೀತಾ ಎಸ್ ಪಿ , ಮನೋಹರ್ ಬೆಟ್ಟಜೇವರ್ಗಿ, ಸಾಗರ್, ಕುಮಾರಿ ದೀಪಿಕಾ ಹುಂಗೇನಹಳ್ಳಿ ಮತ್ತು ರಾಬಿನ್ ಕ್ರಿಸ್ಟೋಫರ್ ಭಾಗವಹಿಸಿದ್ದರು

ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿದ ಅಮಿತ್ ಶಾ ರಾಜಿನಾಮೆಗೆ CPIML ಲಿಬರೇಶನ್ ಒತ್ತಾಯ

CPIML Liberation demands resignation of Amit Shah who spoke lightly about Ambedkar

ಗಂಗಾವತಿ: ಅಂಬೇಡ್ಕರ್ ರವರ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ನಮ್ಮ CPIML ಲಿಬರೇಶನ್ ಪಕ್ಷದಿಂದ ಇಂದು ಗಂಗಾವತಿ ನಗರದ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರರಾದ ಜೆ ಭಾರದ್ವಾಜ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ನೀಡಿದ ಭೀಕ್ಷೇಯಿಂದ ಇಂದು ಕೇಂದ್ರ ಗೃಹ ಮಂತ್ರಿ ಸ್ಥಾನ ಪಡೆದ ಅಮಿತ್ ಶಾ ಆ ಸ್ಥಾನದ ಘನತೆ,ಗೌರವವನ್ನು ಹಾಳು ಮಾಡಿದ್ದಾರೆ ಹಾಗಾಗಿ ಅವರು ಕೂಡಲೇ ತಮ್ಮ ಗೃಹಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರೂ.

ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ ಗುಜರಾತ್ ನಲ್ಲಿ ಯಾವುದೋ ಒಂದು ಗುಜರಿ ಅಂಗಡಿಯಲ್ಲಿ ಗುಜರಿ ಮಾರಾಟ ಮಾಡಬೇಕಾಗಿದ್ದ ವ್ಯಕ್ತಿ ಇಂದು ಕೇಂದ್ರದ ಗೃಹಮಂತ್ರಿ ಸ್ಥಾನದಲ್ಲಿ ಇದ್ದಾರೆ ಅಂದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನ ಕಾರಣ ಅದನ್ನು ಅಮಿತ್ ಶಾ ಅವರು ಯಾವತ್ತೂ ಮರೆಯಬಾರದು. ಅವರು ಹೇಳಿದಂತೆ ದೇವರ ಹೆಸರು ಹೇಳಿಕೊಂಡ ನಾವು ಸಾವಿರಾರು ವರ್ಷಗಳಿಂದ ನರಕದಲ್ಲಿ ಇದ್ದವು ಇಂದು ಅಂಬೇಡ್ಕರ್ ರಚಿಸಿದ ಸಂವಿಧಾನ ಎನ್ನುವ ಸ್ವರ್ಗದಲ್ಲಿ ಇದ್ದೆವೆ ನಮ್ಮಗೆ ಬೇರೆ ಯಾವ ಸ್ವರ್ಗದ ಅವಶ್ಯಕತೆ ಇಲ್ಲ ನೀವು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಇತ್ತಾಯಿಸಿದರು
ನಂತರ ಮಾತನಾಡಿದ CPIML ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ಸಣ್ಣ ಹನುಮಂತಪ್ಪ ಹುಲಿಹೈದರ ನಿಮ್ಮ ಮನು ಸಂವಿಧಾನದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ,ಶೂದ್ರ ಎಂಬ ನಾಲ್ಕು ವರ್ಣಗಳನ್ನು ಮಾಡಿ ಸಾವಿರಾರು ವರ್ಷಗಳಿಂದ ಶೂದ್ರರನ್ನು ಗುಲಾಮರಂತೆ ನಡೆಸಿಕೊಂಡಿದ್ದ ನಿಮ್ಮ ಮನು ಸಂವಿಧಾನಕ್ಕೆ ಅಂಬೇಡ್ಕರ್ ರವರು ಎಂದೂ ಬೆಂಕಿ ಇಟ್ಟು ಬೂದಿ ಮಾಡಿದ್ದಾರೆ.
ಮತ್ತೆ ನಿಮ್ಮ ಮನುವಾದಿ ಆರ್ ಎಸ್ ಎಸ್ ಕೈಗೊಂಬೆ ಬಿಜೆಪಿ ಸರ್ಕಾರ ಮನು ಸಂವಿಧಾನ ಜಾರಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ತರದ ಉದ್ದಟತನದ ಮಾತುಗಳನ್ನು ನಿಮ್ಮಂದ ಮಾತನಾಡಿಸುತ್ತಿದೆ.ಸಂವಿಧಾನ ಇಲ್ಲದೆ ಇದ್ದರೆ ನೀವು ಕೂಡ ಗುಲಾಮರಾಗಿ ಬದುಕಬೇಕಿತ್ತು ಅದನ್ನು ಅರ್ಥಮಾಡಿಕೊಂಡು ನಿಮ್ಮ ಮಾತನು ವಾಪಸು ಪಡೆದು ಈ ದೇಶದ ಜರನ ಕ್ಷೇಮೆ ಕೇಳಬೇಕು ಇಲ್ಲದಿದ್ದರೆ ಮುಂದೆ ದೇಶಾದ್ಯಂತ ಬೃಹತ್ ಪ್ರತಿಭಟನೆ ಎದುರಿಸ ಬೇಕಾಗುತ್ತದೆ ಎಂದರೂ.
ಈ ಸಂದರ್ಭದಲ್ಲಿ ಪಾಮಣ್ಣ ಅರಳಿಗನೂರ್,ವೆಂಕಟೇಶ ನೀರಲೂಟಿ,ಕೆಂಚಪ್ಪ ಹೀರೆ ಖೇಡಾ,ಬಾಬರ್,ಚಾಂದ್ ಪಾಷಾ,ರಮೇಶ.ಕೆ,ಪರುಶುರಾಮ,ರೇಣುಕಮ್ಮ,ದ್ಯಾವಮ್ಮ
ಈರಪ್ಪ ರಾಘು ಮಂಡಿ ವೀರೆಷ ಖಾದರ್ ಬಾಷಾ ಬಸವರಾಜ ಶಿವರಾಜ್ ಇತರರು.

ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ‌ ಕೊಡುವ ಅಗತ್ಯತೆ ಇಲ್ಲ: ಗೃಹ ಸಚಿವ ಪರಮೇಶ್ವರ

No need for Minister Priyank Khar to resign: Home Minister Parameshwar

ಬೆಂಗಳೂರು, ಡಿಸೆಂಬರ್ 30:- ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಮೇಲೆ ಅನವಶ್ಯಕವಾಗಿ ಆಪಾದನೆ ಮಾಡುವುದು ಯಾವುದೇ ಸರ್ಕಾರಕ್ಕು ಸರಿ ಇರುವುದಿಲ್ಲ.‌ ಡೆತ್‌ನೋಟ್‌ನಲ್ಲಿ ಅವರ ಹೆಸರು ಕೂಡ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಸಚಿವರ ಹೆಸರನ್ನು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದು ಹೇಳಿದರು.

ತನಿಖೆಯ ವರದಿ ಬಂದ ನಂತರ ಏನು‌ ಎಂಬುದನ್ನು ಹೇಳೋಣ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅನವಶ್ಯಕವಾಗಿ ಅವರ ಹೆಸರನ್ನು ತೆಗೆದುಕೊಂಡು ರಾಜೀನಾಮೆ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು

ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ.‌ ಅನೇಕ ಪ್ರಕರಣಗಳಲ್ಲಿ ಸಿಐಡಿ ತನಿಖೆಯ ವರದಿ ಬಂದಿದೆಯಲ್ಲವೇ? ಬಿಜೆಪಿಯವರು ಹೇಳಿದ್ದೆಲ್ಲ ಕೇಳುವುದಿಲ್ಲ. ಸಕರಾತ್ಮಕವಾಗಿ ಸಲಹೆ, ಸೂಚನೆ ನೀಡಿದರೆ ಕೇಳುತ್ತೇವೆ. ಅನವಶ್ಯಕವಾಗಿ ಎಲ್ಲದರಲ್ಲು ರಾಜಕೀಯ ಮಾಡಲು ಹೋದರೆ ಕೇಳುವುದಿಲ್ಲ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಶಾಸಕ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಮಾಡಿರುವ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಲ್ಲವೇ. ಈ ನಿಟ್ಟಿನಲ್ಲಿ ಸಿಐಡಿ ಅವರು ತಮ್ಮ‌ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಹೊಸ ವರ್ಷದ ಸಂತೋಷವನ್ನು ಹಂಚಿಕೊಳ್ಳಬೇಕು. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾರಿಗೂ ತೊಂದರೆಯಾಗದಂತೆ ಹೊಸ ವರ್ಷ ಆಚರಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.

ಶಾಸಕ ರಾಯರಡ್ಡಿ ಅಧಿಕಾರಿಗಳನ್ನು ಬಿಟ್ಟು ದೌರ್ಜನ್ಯನಡೆಸುತ್ತಿದ್ದಾರೆ,,! ಹಾಲಪ್ಪ ಆಚಾರ ಆರೋಪ,,

MLA Rayardi is committing atrocities by leaving the officials,,! Allegation of Halappa ritual

ವರದಿ : ಪಂಚಯ್ಯ ಹಿರೇಮಠ,,

ಕುಕನೂರು : ಶಾಸಕ ರಾಯರಡ್ಡಿಯವರು ಅಧಿಕಾರವನ್ನು ಬಳಸಿಕೊಂಡು ಅಧಿಕಾರಿಗಳಿಂದ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಲಪ್ಪ ಆಚಾರ ಹೇಳಿದರು.

ಅವರು ಕುಕನೂರು ಪಟ್ಟಣದಲ್ಲಿ ರವಿವಾರದಂದು ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸದೇ ಮುಂದೂಡಿದ್ದು, ರವಿವಾರ ರಾತ್ರಿಯಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರು, ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಅಹೋ ರಾತ್ರಿ ಧರಣಿ ನಡೆಸಿ ಸೋಮವಾರವು ಮುಂದೊರೆಸಿದ ಧರಣಿ ಸ್ಥಳಕ್ಕೆ ಆಗಮಿಸಿ ಅವರು ಮಾತನಾಡಿದರು.

ನಮ್ಮ ಆಡಳಿತಾವಧಿಯಲ್ಲಿ ಯಲಬುರ್ಗಾ ತಾಲೂಕಿನಲ್ಲಿಯೇ ನಾವು ಸಹಕಾರಿ ಕ್ಷೇತ್ರದಲ್ಲಿ ಅಭೂತ ಪೂರ್ವ ಚಾಪು ಮೂಡಿಸಿದ್ದನ್ನು ನೋಡಿ ಕಾಂಗ್ರೆಸ್ ನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲಾ. ಕೆಟ್ಟ ಮನಸ್ಥಿತಿ ಹೊಂದಿದ ಕಾಂಗ್ರೆಸ್ಸಿಗರಿಗೆ ರೈತಪರ ಯಾವುದೇ ಕಾಳಜಿ ಇಲ್ಲಾ ಅವರು ಎಲ್ಲಾ ಕಡೆಯಲ್ಲೂ ರಾಜಕೀಯ ನಡೆಸಲು ಮುಂದಾಗುತ್ತಿದ್ದಾರೆ ಎಂದು ಕುಟುಕಿದರು.

ಅವರಿಗೆ ರೈತರಿಗಂತು ಒಳ್ಳೆಯದನ್ನು ಮಾಡಲಿಗುವುದಿಲ್ಲಾ, ಮಾಡಿದ್ದನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲಾ ಎನ್ನುವುದಕ್ಕೆ ನಿನ್ನೆ ನಡೆದ ಒಂದು ಸಾಕ್ಷಿ ಸಾಕಷ್ಟೇ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾದರು ಇವರಿಗೆ ಜನಪರ ಕಾಳಜಿ ಇಲ್ಲಾ, ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇದರಿಂದ ಸಾಲು ಸಾಲು ಆತ್ಮ ಹತ್ಯೆಗಳು ಆಗುತ್ತಿವೆ. ಇದು ಸರಕಾರದ ಅಭಿವೃದ್ದಿಯೇ ಎಂದು ಪ್ರಶ್ನಿಸಿದರು,,?

ನೀರಾವರಿ ಬಗ್ಗೆ ಮಾತನಾಡುವ ರಾಯರಡ್ಡಿಯವರೇ ನಿಮಗೆ ಸಮರ್ಪಕವಾಗಿರುವ ಕುದ್ರಿಮೋತಿ, ಮುರುಡಿ, ಬೇವೂರು ಕೆರೆಗಳನ್ನೇ ತುಂಬಿಸಲು ಆಗುತ್ತಿಲ್ಲಾ ಇನ್ನೇನು ನೀರಾವರಿ ಮಾಡುತ್ತೀರಿ ನೀವು ಎಂದು ವ್ಯಂಗ್ಯವಾಡಿದ ಅವರು ರಾಯರಡ್ಡಿಗೆ ಇಷ್ಟು ವರ್ಷ ಇಲ್ಲದ ಸಹಕಾರಿ ಕ್ಷೇತ್ರದ ನೆನಪು ನಿನ್ನೆ ರವಿವಾರ ರಾತ್ರಿ ನೆನಪಾದಂತಿದೆ, ಅದು ಸಾಮಾನ್ಯ ಅಧಿಕಾರಿಗಳನ್ನು ಬಲಿ ಪಶು ಮಾಡಲು ಎಂದರು.

ನಂತರ ಹಾಲಪ್ಪ ಆಚಾರ ಪೋಲಿಸ್ ಇಲಾಖೆಯ ಡಿವೈಎಸ್ ಪಿ ಮುತ್ತಣ್ಣ ಸವರಗೋಳ ಜೊತೆ ಮಾತನಾಡಿ ಆರ್ ಓ ಯಾವ ಪುರುಷಾರ್ಥಕ್ಕೆ ಮೂರ್ಚೆಯ ನಾಟಕ ಮಾಡಿ ಆಸ್ಪತ್ರೆ ಸೇರಿದರು ಎನ್ನುವುದು ನನಗೆ ಗೊತ್ತು, ಚುನಾವಣೆಯ ಮೇಲಾಧಿಕಾರಿಯ ಮಾತಿಗೂ ಬೆಲೆ ಇಲ್ಲದಂತಾಗಿದೆ. ಒಂದು ವೇಳೆ ಚುನಾವಣಾಧಿಕಾರಿ ಸತ್ತರೇ ಫಲಿತಾಂಶ ಪ್ರಕಟಿಸುವುದಿಲ್ಲವೇ,,? ಪೋಲಿಸ್ ಇಲಾಖೆ ಹಾಗೂ ಕಾನೂನಿಗೆ ನಾವು ಗೌರವ ನೀಡುತ್ತೇವೆ ಆದರೆ ನೀವು ಇದಕ್ಕೆ ಬೆಂಬಲ ನೀಡಿದರೇ ನಿಮ್ಮನ್ನು ಇದರಲ್ಲಿ ತಳಕು ಹಾಕಿಕೊಳ್ಳುತ್ತೇವೆ ಎಂದು ಎಚ್ಚರಿಸಿ ನ್ಯಾಯಯುತ ಫಲಿತಾಂಶ ನೀಡುವಂತೆ ಆಗ್ರಹಿಸಿದರು.

ಸಿಪಿಐ ಎಂಎಲ್ ಲಿಬರೇಷನ್ ಪಕ್ಷದಿಂದ ಅಮಿತ್ ಶಾ ರಾಜೀನಾಮೆ ಒತ್ತಾಯ

CPI ML Liberation Party demands Amit Shah’s resignation

ಕೊಟ್ಟೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅತ್ಯಂತ ಕೀಳು ಅಭಿರುಚಿಯಲ್ಲಿ ಹೀಯಾಳಿಕೆ ಮಾತನಾಡಿರುವುದನ್ನು ಸಿಪಿಐ ಎಂಎಲ್ ಲಿಬರೇಷನ್ ಪಕ್ಷ ಬಲವಾಗಿ ಖಂಡಿಸಿದೆ ಈ ಕೂಡಲೇ ಅವರು ರಾಜೀನಾಮೆ ನೀಡಿ
ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಧರಣಿಯಲ್ಲಿ ಒತ್ತಾಯ ಮಾಡಲಾಯಿತು.

ಧರಣಿಯ ಕುರಿತು ತಾಲೂಕು ಸಮಿತಿ ಅಧ್ಯಕ್ಷರಾದ ದೊಡ್ಡ ಹಾಲಯ್ಯ , ತಾಲೂಕಾ ಕಾರ್ಯದರ್ಶಿ ಬಾಲಗಂಗಾಧರ ಮಾತನಾಡಿದರು ಸಿಪಿಐ ಎಂಎಲ್ ಜಿಲ್ಲಾ ಮುಖಂಡ ಗುಳದಟ್ಟಿ ಸಂತೋಷ್ಙ ಮಾತನಾಡಿದರು.

ಈ ಸಂದರ್ಭದಲ್ಲಿ ಧರಣಿಯಲ್ಲಿ ಅಜ್ಜಪ್ಪ, ದೊಡ್ಡಬಸಪ್ಪ, ಮೈಲಪ್ಪ, ರಾಮನಗೌಡ, ಹಾಲಪ್ಪ,ಸಾಕಮ್ಮ, ಹುಲಿಗೆಮ್ಮ, ಡಿ ಉಮೇಶ, ಮಂಜುನಾಥ್ ಹರಾಲ್, ಇನ್ನು ಹಲವರು ಕಾರ್ಯಕರ್ತರು ಭಾಗವಹಿಸಿದ್ದರು

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ಮತ ಎಣಿಕೆ ಸ್ಥಗಿತ,,

Farmers’ Co-operative Society Election: Counting of Votes Stopped

ಆಡಳಿತ ಪಕ್ಷದ ಷಡ್ಯಂತ್ರ ಬಳಸಿ ವಾಮ ಮಾರ್ಗದ ಮೂಲಕ ಚುನಾವಣೆ ಗೆಲುವು ಸಾಧಿಸಲು ಹೊರಟ ಕಾಂಗ್ರೆಸ್ಸಿಗರು,,! ಬಿಜೆಪಿ ಅಭ್ಯರ್ಥಿಗಳ ಆರೋಪ,,,

ವರದಿ : ಪಂಚಯ್ಯ ಹಿರೇಮಠ.
ಕುಕನೂರು : ರವಿವಾರದಂದು ಬೆಳಗ್ಗೆ 9ಕ್ಕೆ ಪ್ರಾರಂಭಗೊಂಡ
ಪತ್ತಿನ ಸಹಕಾರಿ ಸಂಘದ ಚುನಾವಣೆ ಪ್ರಾರಂಭ ಹಂತದಲ್ಲಿ ಶಾಂತಿಯುತವಾಗಿ ನಡೆದರು, ಮೊದಲು ಮತದಾರರೆಂದು ಮತದ ಅರ್ಹತೆ ಹೊಂದಿದ 338
ಸಾಲಗಾರರ ಕ್ಷೇತ್ರದ ಸದಸ್ಯರು ಮತದಾರರಿದ್ದು, 79 ಜನ ಸದಸ್ಯರು ಸಾಲಗಾರರಲ್ಲದ ಕ್ಷೇತ್ರದ ಮತದಾರರಿದ್ದರು.

ತನ್ಮದ್ಯೆ ಏಕಾ ಏಕಿ ರವಿವಾರದಂದು ಬೆಳಗ್ಗೆ ಕೊರ್ಟಿನ ಆದೇಶದಂತೆ ಷೇರುದಾರರ ಪೈಕಿ ಇನ್ನೂ 438 ಸದಸ್ಯ ಮತದಾರರು ಇದ್ದು ಇವರು ಅನರ್ಹರಾಗಿದ್ದರೆಂದು ಬಿಜೆಪಿ ಕೈಬಿಟಿತ್ತು, ಆದರೆ ಕೊರ್ಟ್ ಈ ಷೇರುದಾರ ಸದಸ್ಯರು ಮತ ಚಲಾವಣೆಗೆ ಅರ್ಹರು ಎಂದು ಆದೇಶ ಹೊರಡಿಸಿದರಿಂದ, ಬಿಜೆಪಿಯ ಬೆಂಬಲಿತ ಅಭ್ಯರ್ಥಿಗಳು
ಅಸಮಾಧಾನ ಹೊರ ಹಾಕಿ, ಮಾತನಾಡಿ ಚುನಾವಣೆಗೂ ಮುನ್ನ ಇವರನ್ನು ಅರ್ಹರು ಎಂದು ಪರಿಗಣಿಸಿದ್ದರೇ ನಾವು ಪ್ರಚಾರ ವೇಳೆ
ಇವರಲ್ಲೂ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇವು.

ಆದರೆ ಏಕಾ ಏಕಿ ಅನರ್ಹರಾದ ಸದಸ್ಯರ ಮತವನ್ನು ಕೋರ್ಟ್ ಮೂಲಕ ಅರ್ಹರೆಂದು ಪರಿಗಣಿಸಿ ಈ ರೀತಿಯಾಗಿ ಚುನಾವಣೆ ನಡೆಸುತ್ತಿರುವುದು ಇದು ಆಡಳಿತ ಪಕ್ಷದ ಷಡ್ಯಂತ್ರವಾಗಿದ್ದು, ವಾಮ ಮಾರ್ಗದ ಮೂಲಕ
ಗೆಲುವು ಸಾಧಿಸಲು ಹೊರಟಿದ್ದಾರೆ ಎಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಕ್ರೋಶಗೊಂಡು ಚುನಾವಣಾ ಅಧಿಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ದಬ್ಬಾಳಿಕೆಗೆ ವಿರೋಧ ವ್ಯಕ್ತ ಪಡಿಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಚುನಾವಣಾ ಬೂತ್ ನಿಂದ ಮತ ಪೆಟ್ಟಿಗೆ ಸ್ಥಳಾಂತರ ಮಾಡಿದ ಎಪಿಎಂಸಿ ಆವರಣದ ಸ್ಟ್ರಾಂಗ್ ರೂಮ್ ಮುಂದೆ ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲಾ ಎಂದು ಅಹೋ ರಾತ್ರಿ ಧರಣಿ ನಡೆಸಿ ಪ್ರತಿಭಟನೆಗೆ ಕುಳಿತರು.

ಸೋಮವಾರದಂದು ಬೆಳಗ್ಗೆ ಧರಣಿ ಕುಳಿತ ಎಪಿಎಂಸಿ ಆವರಣಕ್ಕೆ ಬಿಜೆಪಿಯ ವಿವಿಧ ಮುಖಂಡರು ಆಗಮಿಸಿದರು. ನಂತರ ನಡೆಯುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ಭಾಗವಹಿಸಲಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ನ್ಯಾಯಯುತವಾಗಿ ಚುನಾವಣಾ ಮತ ಎಣಿಕೆ ನಡೆಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲಾ ಎಂದು ಮುಖಂಡರು ತಿಳಿಸಿದರು.

ಚುನಾವಣಾ ಅಧಿಕಾರಿ ಹನುಮಂತಪ್ಪ ಹೈಡ್ರಾಮಾದ ನಡುವೆ ನಡೆಯದ ಮತ ಎಣಿಕೆ ಕಾರ್ಯ,, ಮಾರುತಿ ಗಾವರಾಳ ಆರೋಪ ,,

ಆಡಳಿತ ಪಕ್ಷದಿಂದ ಅಧಿಕಾರಿಗಳಿಗೆ ಒತ್ತಡ ಮೂರ್ಛೆ ನಾಟಕಕ್ಕೆ ತಯಾರಾದ ಆರ್ ಓ ಬಿಜೆಪಿ ಆರೋಪ,,

ಶರಣ ಶ್ರೀ ಒಕ್ಕಲಿಗ ಮುದ್ದಣ್ಣ ನವರ ಸ್ಮರಣೋತ್ಸವ..

Commemoration of Sharan Sri Okkaliga Muddanna Navra..


ಕಾಯಕ : ಕೃಷಿ ಮಾಡುವುದು / ವ್ಯವಸಾಯ / ಬೇಸಾಯ / ಆರಂಭ
ಸ್ಥಳ : ಜೋಳದಹಾಳು, ವಿಜಯಪುರ ಜಿಲ್ಲೆ
ಜಯಂತಿ : ಎಳ್ಳು ಅಮಾವಾಸ್ಯೆಯಂದು
ಲಭ್ಯ ವಚನಗಳ ಸಂಖ್ಯೆ : ೧೨
ಅಂಕಿತ : ಕಾಮ ಭೀಮ ಜೀವ ಧನದೊಡೆಯ

ಸತ್ಯ ಶುದ್ಧ ಕಾಯಕಕ್ಕೆ ಹೆಸರಾದ ಒಕ್ಕಲಿಗ ಮುದ್ದಣ್ಣನವರು, ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಸ್ತಾಪಿಸಿರುವರು. ಜಂಗಮ ದಾಸೋಹ ನಡೆಸುವುದು ಈತನ ನಿತ್ಯವ್ರತ. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಾರೆ. ‘ಕಾಮಭೀಮ ಜೀವಧನದೊಡೆಯ’ ಅಂಕಿತದಲ್ಲಿ ರಚಿಸಿದ ೧೨ ವಚನಗಳು ದೊರೆತಿವೆ. ಒಕ್ಕಲುತನ ವೃತ್ತಿಯ ಪರಿಭಾಷೆ, ಮುಗ್ಧ ಭಕ್ತಿ, ಸರಳ-ಪ್ರಾಸಾದಿಕ ಶೈಲಿಯಿಂದ ಅವು ಕಳಕಳಿಸುತ್ತವೆ. ಚಾತುರ್ವಣ್ರ್ಯಗಳಲ್ಲಿ ಮೊದಲ ಮೂರನ್ನು ಹೇಳಿ ಕೊನೆಯದಾದ ಶೂದ್ರನನ್ನು ಹೇಳುವಾಗ, ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯ ಎಂದು ತನ್ನ ಇಷ್ಟಲಿಂಗದ ಮೂಲಕ ಪರಮಾತ್ಮನನ್ನು ಪ್ರಾರ್ಥಿಸಿಕೊಂಡಿರುವರು.

ಇವರದೊಂದು ವಚನ:
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ:
ನಾದ., ಬಿಂದು., ಕಳೆ., ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ,
ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು,
ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ,
ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ..
ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು,
ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು,
ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ:
ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು,
ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆನಿಮ್ಮ ಧರ್ಮ, ನಿಮ್ಮ ಧರ್ಮ..