Jaljeevan Mission Project field visit to multi-village drinking water works by GPAM CEO; Verification

ರಾಯಚೂರು ಜ.09 (ಕರ್ನಾಟಕ ವಾರ್ತೆ):- ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಡಿಬಿಟಿಎಮ್‌ವಿಎಸ್ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಭೌತಿಕ ಪ್ರಗತಿಯನ್ನು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಮ ಪಾಂಡ್ವೆ ಅವರು ಜನವರಿ 8ರಂದು ನಾರಾಯಣಪುರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ

ನಾರಾಯಣಪುರ ಜಲಾಶಯದ ಹಿನ್ನೀರಿನ ಭಾಗದಲ್ಲಿ ಇನ್‌ಟೆಕ್ ಕಂ ಜಾಕ್‌ವೆಲ್ ಹೆಡ್‌ವರ್ಕ್ ಸಂಪರ್ಕ ಸೇತುವೆಯನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದೊಂದೊಗೆ ಪೂರ್ಣಗೊಳಿಸಲು ಸೂಚಿಸಿದರು.
ಚಿತ್ತಾಪೂರ ಗ್ರಾಮದ ನಾರಾಯಣಪೂರ ಜಲಾಶಯದ ವ್ಯಾಪ್ತಿಯಲ್ಲಿ ಕೈಗೊಂಡಿರುವ 160 ಎಂಎಲ್ಡಿ ನೀರು ಸಂಸ್ಕರಣಾ ಘಟಕನ ಏರೇಟರ್, ಕ್ಲಾರಿಫ್ಲೋಕ್ಯುಲೇಟರ್, ಶೋಧನೆ, ಕ್ಲೋರಿನೇಷನ್ 16 ಶೋಧನೆ ಹಾಸಿಗೆ ಪೂರ್ಣಗೊಳಿಸಿರುವುದನ್ನು ಹಾಗೂ ನಿರ್ಮಾಣದ ವಿವಿಧ ಹಂತಗಳಲ್ಲಿರುವ ವಿವಿಧ ಘಟಕಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ನಂತರ ನಾಗರಾಳ ಹಾಗೂ ನರಕಲದಿನ್ನಿ ಮಾರ್ಗದಲ್ಲಿ ಕೈಗೊಂಡ ಎಂಎಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿ ಹಾಗೂ ಸದರಿ ಯೋಜನೆಯಡಿ ಕಾನಾಪುರ ಹಟ್ಟಿ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಪ್ರಿಕಾಸ್ಟ್ ಒಎಚ್ಟಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಮುಂದುವರೆದು ಮುದಗಲ್ ಗ್ರಾಮದ ಹತ್ತಿರ ಗುತ್ತಿಗೆದಾರರ ಕ್ಯಾಂಪಗೆ ಭೇಟಿ ನೀಡಿ ಈ ಕ್ಯಾಂಪ್ ನಲ್ಲಿ ಯೋಜನೆಗೆ ಅವಶ್ಯಕವಿರುವ ಪ್ರಿಕಾಸ್ಟ್ ಟ್ಯಾಂಕ್ ಕಾಸ್ಟಿಂಗ್ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಮುದಗಲ್ ಕ್ಯಾಂಪಿನಲ್ಲಿ ಎಸ್‌ಎನ್ಸಿ-ವಿಇಐಪಿಎಲ್-ಎಸ್ಪಿಎಂಎಲ್-ಜೆವಿ ಪ್ರಾಜೆಕ್ಟ್ನ ತಾಂತ್ರಿಕ ಅಧಿಕಾರಿಗಳೊಂದಿಗೆ ಯೋಜನೆಯ ಭೌತಿಕ ಪ್ರಗತಿ ಹಾಗೂ ಅನುಷ್ಠಾನದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ಪಡೆಯಲಾಯಿತು. ತಾಂತ್ರಿಕ ಬೆಂಬಲ ಹಾಗೂ ಗುಣಮಟ್ಟ ನಿಯಂತ್ರಣ ಏಜೆನ್ಸಿ ಪಿ.ಎಮ್.ಸಿ., ಇ.ಜಿ.ಐ.ಎಸ್. ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೆಟ್ ಲಿಮಿಟೆಡ್ ರಿಂದ ಮಾಹಿತಿ ಪಡೆಯಲಾಯಿತು. ಪಿಎಂಸಿ, ಇಜಿಐಎಸ್ ಇಂಡಿಯಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಹೆಡ್ವರ್ಕ್ ನಲ್ಲಿ ಜ್ಯಾಕ್ವೆಲ್ ಕಮ್ ಪಂಪ್ಹೌಸ್ ಎಲ್ಲ 22 ಪೈಲಿಂಗ್ ಕಾಮಗಾರಿಗಳನ್ನು ಫೂರ್ಣಗೊಳಿಸಿರುವುದನ್ನು ಪರಿವೀಕ್ಷಿಸಲಾಯಿತು.
ಸಂಪರ್ಕ ಸೇತುವೆ ಪ್ರಗತಿ, ಡಬ್ಲೂಟಿಪಿ ಅಡಿ ವಿವಿಧ ರಚನಾತ್ಮಕ ಘಟಕಗಳ ನಿರ್ಮಾಣದ ವಿವಿಧ ಹಂತಗಳ ಪ್ರಗತಿ, ಪೈಪ್‌ಲೈನ್ ಸೇರಿದಂತೆ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಪ್ರಗತಿ ಹಂತದಲ್ಲಿರುವ ಬಾಕಿ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಶೀಘ್ರವಾಗಿ ಫೂಣಗೊಳಿಸಲು ಇದೆ ವೇಖೆ ಸಿಇಓ ಅವರು ಸೂಚನೆ ನೀಡಿದರು.